ಅತಿ ಹೆಚ್ಚು ಹ್ಯಾಕ್ ಆದ 20 ಪಾಸ್‌ವರ್ಡ್‌ಗಳಿವು…!! ನಿಮ್ಮ ಪಾಸ್ ವರ್ಡ್ ಇರಬಹುದು ಚೆಕ್ ಮಾಡ್ಕೊಳ್ಳಿ..!!!
ಸಾಮಾಜಿಕ ಜಾಲತಾಣಗಳನ್ನು ತುಂಬಾ ಹುಷಾರಾಗಿ ಬಳಸಬೇಕು.. ಆಕಸ್ಮಾತ್ ಒಮ್ಮೆ ಹ್ಯಾಕ್ ಆದ್ರೆ ಮುಗಿತು… ನಮ್ಮ ಡಿಟೇಲ್ಸ್ ಎಲ್ಲವನ್ನು ತೆಗೆದುಕೊಂಡು ಬಿಡುತ್ತಾರೆ. ಹಾಗಾಗಿ ಸಾಮಾಜಿಕ ಜಾಲತಾಣಗಳ ಪಾಸ್ ವರ್ಡ್ ಅನ್ನು ತುಂಬಾ ಕೇರ್ ಪುಲ್ ಆಗಿ ಬಳಸಬೇಕು.. ಇತ್ತಿಚಿಗಂತೂ ಎಲ್ಲದಕ್ಕೂ ಕೂಡ ಪಾಸ್ ವರ್ಡ್ .. ಸೋಷಿಯಲ್ ಮೀಡಿಯಾಗಳಿಂದ ಹಿಡಿದು ನೆಟ್ ಬ್ಯಾಂಕಿಂಗ್‌ವರೆಗೆ ಎಲ್ಲದಕ್ಕೂ ಪಾಸ್‌ವರ್ಡ್ ಬೇಕೆ ಬೇಕು... ಆ ಎಲ್ಲಾ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವುದು ಒಂದು ದೊಡ್ಡ ಸಾಹಸನೇ ಬಿಡಿ….
ಪಾಸ್‌ವರ್ಡ್ಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟ ಎಂಬ ಕಾರಣಕ್ಕೆ 123456, qwerty ಪಾಸ್‌ವರ್ಡ್ ಕೊಡುವವರ ಸಂಖ್ಯೆ ನಮ್ಮಲ್ಲಿ ಜಾಸ್ತಿಯೇ ಇದೆ. ಅಂಥಾ ಮಂದಿಗೆ ಎಚ್ಚರಿಕೆ ನೀಡುವ ವರದಿಯೊಂದು ಇದೀಗ ಬಂದಿದೆ. ಬ್ರಿಟನ್‌ನ ನ್ಯಾಷನಲ್ ಸೈಬರ್ ಸೆಕ್ಯುರಿಟಿ ಸೆಂಟರ್ ಅತಿ ಹೆಚ್ಚು ಬಾರಿ ಹ್ಯಾಕ್ ಆದ ಪಾಸ್‌ವರ್ಡ್‌ಗಳ ಪಟ್ಟಿಪ್ರಕಟಿಸಿದೆ. ಅದರಲ್ಲಿ ಮೊದಲ ಸ್ಥಾನದಲ್ಲಿರುವ ಪಾಸ್‌ವರ್ಡ್ 123456.ಇಂಟರೆಸ್ಟಿಂಗ್ ಅಂದ್ರೆ 23 ದಶಲಕ್ಷ ಮಂದಿ ಈ ಪಾಸ್‌ವರ್ಡ್ ಇಟ್ಟುಕೊಂಡಿದ್ದರು ಅನ್ನುವುದನ್ನು ವರದಿ ಹೇಳುತ್ತದೆ. ಒಂದು ವೇಳೆ ಈ ಕೆಳಗಿನವುಗಳಲ್ಲಿ ನೀವು ಯಾವುದಾದರನ್ನು ಬಳಸುತ್ತಿದ್ದರೆ ತಕ್ಷಣ ಚೇಂಚ್ ಮಾಡಿ123456 , 123456789, qwerty , password , 1111111 , 12345678 , abc123 , 1234567 , password1 , 12345 , 1234567890 , 123123, 000000 , Iloveyou , 1234 ,1q2w3e4r5t ,Qwertyuiop , 123, Monkey , Dragon ಪಾಸ್ ವರ್ಡ್ ಗಳನ್ನು ನೆನಪಿಕೊಟ್ಟುಕೊಳ್ಳುವುದು ತುಂಬಾ ತಲೆನೋವಿನ ಕೆಲಸ, ಹಾಗಾಗಿ ಸುಲಭ ಆಗಲಿ ಎಂದು ಈ ರೀತಿಯ ಪಾಸ್ ವರ್ಡ್ ಗಳನ್ನು ಇಟ್ಟುಕೊಳ್ಳುತ್ತಾರೆ… ಹ್ಯಾಕ್ ಆದ ಮೇಲೆ ಇನ್ನೂ ದೊಡ್ಡ ತಲೆನೋವು ಎದುರಾಗೋದು ಖಂಡಿತಾ…
Comments