ನಿಮ್ಮ ಬಳಿ BPL ಕಾರ್ಡ್ ಇದೆಯಾ,,!! ಹಾಗಾದ್ರೆ ಸಿಕ್ತು ಅನ್ಕೊಳ್ಳಿ6.50 ಲಕ್ಷ..!!! ಹೇಗೆ ಅಂತೀರಾ..?
ಇತ್ತಿಚಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಸಾಕಷ್ಟು ಯೋಜನೆಗಳು ಚಾಲ್ತಿಗೆ ಬಂದಿವೆ..ಬಂದಿರುವ ಯೋಜನೆಗಳಿಂದ ಬಡವರಿಗೆ ತುಂಬಾ ಸಹಾಯವಾಗುತ್ತದೆ.. ಇದೀಗ ನಿಮಗೆ ಉಚಿತವಾಗಿ 6.50 ಲಕ್ಷ ಸಿಗಲಿದೆ.. ಹೇಗೆ ಅಂತಿರಾ ಮುಂದೆ ಓದಿ..
ನಿಮ್ಮ ಬಳಿ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಇದ್ದರೆ ಸಾಕು.. ನಿಮಗೆ 6.50 ಲಕ್ಷ ಉಚಿತವಾಗಿ ಸಿಗಲಿದೆ.. ಅದಕ್ಕೆ ನೀವು ಮಾಡಬೇಕಿರುವುದು ಇಷ್ಟೆ… ಮೊದಲು ನೀವು ಆರೋಗ್ಯ ಕಾರ್ಡ್ ಅನ್ನು ಮಾಡಿಸಿಕೊಂಡಿರಬೇಕು. ಒಂದು ವೇಳೆ ನಿಮ್ಮ ಬಳಿ ಆರೋಗ್ಯ ಕಾರ್ಡ್ ಇಲ್ಲವೆಂದರೆ ಅದನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಿ.. ರಾಜ್ಯ ಸರ್ಕಾರ ದಿಂದ ಆರೋಗ್ಯ ಕರ್ನಾಟಕ ಹಾಗೂ ಕೇಂದ್ರ ಸರ್ಕಾರದಿಂದ ಆಯುಷ್ಮಾನ್ ಭಾರತ್.. ಈ ಎರಡು ಕಾರ್ಡ್ ಗಳನ್ನು ವಿಲೀನಗೊಳಿಸಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ಮಾಡಿದ್ದಾರೆ .ನೀವು ಈ ಕಾರ್ಡ್ ಅನ್ನು ಮೊದಲು ಪಡೆದುಕೊಳ್ಳಬೇಕು.. ಈ ಕಾರ್ಡ್ ಇದ್ದರೆ ನಿಮಗೆ ಉಚಿತವಾಗಿ 6.50 ಲಕ್ಷದವರೆಗೆ ಚಿಕಿತ್ಸೆ ದೊರೆಯಲಿದೆ. ಸರ್ಕಾರದಿಂದಲೇ ಆ ಹಣವನ್ನು ಭರಿಸುತ್ತದೆ. ಇನ್ನೂ ಇದಕ್ಕೆ ಯಾರು ಅರ್ಹರು ಎನ್ನುವುದನ್ನು ನೋಡಿದರೆ, ಮೊದಲು ಯಾರು ಬಿಪಿಎಲ್ ಕಾರ್ಡ್ ಹೊಂದಿರುತ್ತಾರೋ ಅವರು ವಾರ್ಷಿಕವಾಗಿ 5 ಲಕ್ಷದವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಇನ್ನೂ ಬಿಪಿಎಲ್ ಅಷ್ಟೆ ಅಲ್ಲ.. ಎಪಿಎಲ್ ಕಾರ್ಡ್ ಹೊಂದಿರುವವರಿಗೂ ಕೂಡ ಈ ಸೌಲಭ್ಯ ದೊರೆಯಲಿದೆ.. ಆದರೆ ಅವರಿಗೆ 1.50 ಲಕ್ಷ ಮಾತ್ರ ವಾರ್ಷಿಕವಾಗಿ ಸಿಗಲಿದೆ. ಈ ಆರೋಗ್ಯ ಕಾರ್ಡ್ ಅನ್ನು ಪಡೆಯಬೇಕೆಂದರೆ ನಿಮ್ಮ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಇರಲೇಬೇಕು… ಇನ್ನು ಈ ಸಂಬಂಧ ನೀವು ಹತ್ತಿರದ ಸರ್ಕಾರಿ ಆಸ್ಪತ್ರಗೆ ಹೋಗಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅಥವಾ ಬೆಂಗಳೂರು ಒನ್ ನಲ್ಲಿಯೂ ಕೂಡ ನೀವು ಆರೋಗ್ಯ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.. ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಷೇರ್ ಮಾಡಿ..
Comments