ಟಿಕ್‌ಟಾಕ್ ಬ್ಯಾನ್ ಆಗಿದ್ದಕ್ಕೆ ಕಂಪೆನಿಗೆ ಪ್ರತಿದಿನ ಆಗುತ್ತಿರುವ ನಷ್ಟ ಎಷ್ಟು ಗೊತ್ತಾ..!!
ಇತ್ತಿಚಿಗೆ ಎಲ್ಲಾ ಆಂಡ್ರ್ಯಾಯ್ಡ್ ಮೊಬೈಲ್ನಲ್ಲಿ ಕಾಣ ಸಿಗುವ ಆ್ಯಪ್ ಎಂದರೆ ಅದು ಟಿಕ್ ಟಾಕ್… ಯಾರನ್ನು ನೋಡುದ್ರೂ ಟಿಕ್ ಟಾಕ್ ನೋಡುತ್ತಾ ವಿಡಿಯೋಗಳನ್ನು ಮಾಡುತ್ತಾ ಸಮಯವನ್ನು ಕಳೆದು ಬಿಡುತ್ತಾರೆ.ಇದೀಗ ಆ ಆ್ಯಪ್ ಮೇಲೆ ನಿರ್ಬಂಧ ಹೇರಿರುವುದು ಸಾಕಷ್ಟು ಜನಕ್ಕೆ ಬೇಸರವನ್ನು ತಂದಿದೆ..ಭಾರತದಲ್ಲಿ ಟಿಕ್ ಆ್ಯಪ್ ಅನ್ನು ನಿಷೇಧ ಮಾಡಿರುವುದರಿಂದ ಇದೀಗ ಟಿಕ್ ಟಾಕ್ ಆ್ಯಪ್ ಬ್ಯಾನ್ ಆಗಿರುವುದರಿಂದ ಬಳಕೆದಾರರ ಸಂಖ್ಯೆ ಕಡಿಮೆಯಾಗಿದೆ.
ಈ ಆ್ಯಪ್ ಅನ್ನು ಬ್ಯಾನ್ ಮಾಡಬೇಕೆಂದು ತಿರ್ಮಾನ ಮಾಡಿದ್ದಾರೆ. ಭಾರತದಲ್ಲಿ ತನ್ನ ಟಿಕ್‌ಟಾಕ್ ಆಪ್ ಅನ್ನು ನಿಷೇಧಗೊಳಿಸಲು ಮುಂದಾಗಿರುವುದರಿಂದ ಆಪ್ ಬಳಕೆದಾರರ ಸಂಖ್ಯೆ ಕಡಿಮೆಯಾಗಿದೆ ಮತ್ತು ಕಂಪೆನಿಗೆ ಪ್ರತಿದಿನ 3.5 ಕೋಟಿ ರೂ.ನಷ್ಟು ನಷ್ಟವಾಗಿದೆ ಎಂದು ಟಿಕ್‌ಟಾಕ್ ಮಾಲಿಕತ್ವದ ಬೈಟ್ಡ್ಯಾನ್ಸ್ ಸಂಸ್ಥೆ ತಿಳಿಸಿದೆ. ಜೊತೆಗೆ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುತ್ತಿರುವ 250 ಹುದ್ದೆಗಳಿಗೆ ತೊಂದರೆಯಾಗಿದೆ ಎಂದು ತಿಳಿಸಿದೆ.. ಹೀಗಾಗಿ ಸುಮಾರು 250 ಜನರು ಹುದ್ದೆಕಳೆದುಕೊಂಡಿದ್ದಾರೆ. ಟಿಕ್‌ಟಾಕ್ ನಿಷೇಧದ ಕುರಿತು ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಬೈಟ್ಡ್ಯಾನ್ಸ್ ಕಂಪೆನಿಯ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ವಾದ ಮಂಡಿಸಿದ್ದಾರೆ. ಒಟ್ಟು 1 ಬಿಲಿಯನ್ ಜನರು ಟಿಕ್‌ಟಾಕ್ ಆಪ್ ಆನ್ನು ಬಳಕೆ ಮಾಡುತ್ತಿದ್ದಾರೆ. ಸಾಕಷ್ಟು ಕಲಾವಿದರು ಅವರ ಪ್ರತಿಭೆಗಳನ್ನು ಹೊರ ಹಾಕುತ್ತಿದ್ದಾರೆ. , ಭಾರತದಲ್ಲಿ 3 ಮಿಲಿಯನ್ ಜನರು ಟಿಕ್‌ಟಾಕ್ ಆಪ್ ಅನ್ನು ಬಳಸುತ್ತಿದ್ದಾರೆ. ಆದರೆ, ಹೈಕೋರ್ಟ್ ಆದೇಶದಿಂದ ದೇಶದಲ್ಲಿ ಕಂಪೆನಿ ಪ್ರತಿದಿನ 3.5 ಕೋಟಿ ರೂ.ನಷ್ಟು ನಷ್ಟ ಅನುಭವಿಸುತ್ತಿದೆ. ಬ್ಯಾನ್ ಆದ ನಂತರ ಟಿಕ್‌ಟಾಕ್ ಬಳಕೆದಾರರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಟಿಕ್ ಟಾಕ್ ಆ್ಯಪ್ ಸಂಪೂರ್ಣವಾಗಿ ಭಾರತದಲ್ಲಿ ಬ್ಯಾನ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
Comments