ಒಬಾಮಾ ಭೇಟಿಯಾದಾಗಲೆಲ್ಲಾ ನನ್ನನ್ನು ಕೇಳ್ತಾಯಿದ್ದುದ್ದು ಅದೊಂದೇ ಪ್ರಶ್ನೆ....!!!

ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಕುರಿತಾದ ಸಿನಿಮಾವೊಂದು ರೆಡಿಯಾಗಿದೆ. ಲೋಕಸಭೆ ಎಲೆಕ್ಷನ್ ಹಿನ್ನಲೆಯಲ್ಲಿ ಇನ್ನು ಸಿನಿಮಾ ರಿಲೀಸ್ ಮಾಡಿಲ್ಲ. ಅದಾಗಲೇ ಸಾಕಷ್ಟು ಕ್ರೇಜ್ ಹುಟ್ಟಿಸಿರುವ ಸಿನಿಮಾದಲ್ಲಿ ಮೋದಿನೇ ಹೀರೋ. ಅಂದರೆ ಮೋದಿ ಪಾತ್ರಧಾರಿಯೇ ನಾಯಕನಾಗಿದ್ದಾರೆ. ಆದರೆ ಇದೀಗ ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರು ನರೇಂದ್ರ ಮೋದಿಯವರನ್ನು ರಾಜಕೀಯೇತರ ಸಂದರ್ಶನ ಮಾಡಿದ್ದಾರೆ.
ಸಂದರ್ಶನದಲ್ಲಿ ಮೋದಿಯ ಕೆಲ ಇಂಟ್ರೆಸ್ಟಿಂಗ್ ವಿಚಾರಗಳು ಬಯಲಾಗಿವೆ. ಅಂದಹಾಗೇ ವಿದೇಶಿ ಗಣ್ಯರು, ಅಧ್ಯಕ್ಷರು ತಮ್ಮೊಂದಿಗೆ ಇಟ್ಟುಕೊಂಡಿರುವ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಹೀಗೆ ಸಂದರ್ಶನದಲ್ಲಿ ಮಾತನಾಡುತ್ತಾ ಅವರು ಬರಾಕ್ ಒಬಾಮ ತನ್ನನ್ನು ಭೇಟಿಯಾದಾಗಲೆಲ್ಲಾ ನೀವು ಹೆಚ್ಚು ಹೊತ್ತು ನಿದ್ರಿಸುತ್ತೀರಾ ಎಂದು ಕೇಳುತ್ತಾರಂತೆ. ಆದರೆ ಮೋದಿ ಈಗಾಗಲೇ ಎಷ್ಟು ಹೊತ್ತು ಮಲಗುತ್ತಾರೆ ಎಮ ವಿಚಾರದ ಬಗ್ಗೆ ಅದಾಗಲೇ ಸುದ್ದಿಯೇ ಆಗಿತ್ತು. ಆದರೆ ಅಕ್ಷಯ್ ಕುಮಾರ್ ಅವರು ಹೇಳಲಾಗಿರುವ ರಾಜಕೀಯೇತರ ಸಂದರ್ಶನದಲ್ಲಿ"ನೀವು ಕೇವಲ ಮೂರು ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತೀರಿ. ದೇಹಕ್ಕೆ 7 ಗಂಟೆಗಳ ನಿದ್ರೆಯ ಅವಶ್ಯಕತೆ ಇದೆ" ಎಂದು ಅಕ್ಷಯ್ ಹೇಳಿದಾಗ ಅವರ ಮಾತಿಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, "ಬರಾಕ್ ಒಬಾಮಾ ನನ್ನನ್ನು ಮೊದಲ ಬಾರಿ ಭೇಟಿಯಾದಾಗ ನೀವು ಏಕೆ ಹೀಗೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು. ಈಗ ಪ್ರತಿ ಬಾರಿ ಭೇಟಿಯಾದಾಗಲೂ ನೀವು ನಿದ್ದೆಯ ಸಮಯವನ್ನು ಹೆಚ್ಚಿಸಿದ್ದೀರಾ ಎಂದು ಪ್ರಶ್ನಿಸುತ್ತಾರೆ" ಎಂದು ಹೇಳಿದರು. ಆದರೆ ನಾನು ನಕ್ಕು ಅದನ್ನೇ ಹೇಳುತ್ತಿನಿ ಎಂದರು.
Comments