SSLC ಪರೀಕ್ಷೆ ಫಲಿತಾಂಶ : ಯಾವಾಗ ಗೊತ್ತಾ..?!!!
ಈ ಬಾರಿ ಎಲೆಕ್ಷನ್ ವಿಚಾರದ ನಡುವೆ ಪಿಯು ಫಲಿತಾಂಶ ಅಷ್ಟೇನು ಸುದ್ದಿಯಾಗಲೇ ಇಲ್ಲ. ಸದ್ಯ ಮೇ ತಿಂಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಹೊರ ಬೀಳಲಿದೆ. ಅದೇ ತಿಂಗಳ 23 ರಂದು ಲೋಕಸಭಾ ಚುನಾವಣೆ ಪಲಿತಾಂಶ ಕೂಡ ಹೊರ ಬೀಳಲಿದೆ. ಒಂದು ಕಡೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾದರೇ ಮತ್ತೊಂದು ಕಡೆ ಲೋಕಸಭಾ ಚುನಾವಣಾ ಅಖಾಡದಲ್ಲಿಳಿದ ಸ್ಪರ್ಧಿಗಳ ಹಣೆಬರಹವೂ ಕಡೆ ನಿರ್ಧಾರಗೊಳ್ಳಲಿದೆ. ಒಟ್ಟಾರೆ ಮೇ ತಿಂಗಳು ಎಲ್ಲರ ಕುತೂಹಲವನ್ನು ಕೆರಳಿಸಿದೆ.
ಚುನಾವಣಾ ಗೊಂದಲದಲ್ಲಿಯೇ, CET ಪರೀಕ್ಷೆಗೂ ಮುನ್ನವೇ ಪಿಯುಸಿ ಫಲಿತಾಂಶ ಪ್ರಕಟಿಸಿದ ಪಿಯು ಬೋರ್ಡ್ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತು. ಇದೀಗ SSLC ಫಲಿತಾಂಶ ಮೇನಲ್ಲಿ ಪ್ರಕಟವಾಗಬಹುದೆಂದು ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಹೇಳಿದೆ.ಫಲಿತಾಂಶವನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ಪ್ರಕಟಿಸಲಾಗುವುದು. ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಈ ವೆಬ್‌ಸೈಟಿನಲ್ಲಿ ನೋಡಬಹುದು. ಮೇ 2ನೇ ವಾರದಲ್ಲಿ ಅಂದರೆ ಮೇ7 ರಿಂದ 12ರ ಮಧ್ಯೆ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ. ಆದರೆ, ನಿರ್ದಿಷ್ಟ ದಿನಾಂಕವಿನ್ನೂ ಘೋಷಣೆಯಾಗಿಲ್ಲ. ಆದರೆ ಹತ್ತನೇ ಯರಗಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಏಪ್ರಿಲ್ 30 ರಂದು ಫಲಿತಾಂಶ ಹೊರ ಬೀಳಲಿದೆ ಎಂಬ ಸುದ್ದಿ ಇದ್ದರೂ ಈ ಬಗ್ಗೆ ಮಾತ್ರ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
Comments