2 ನೇ ಪತ್ನಿ ರಾಧಿಕ ಕುಮಾರಸ್ವಾಮಿ ಮತ್ತು ಮಗಳು ಶರ್ಮಿಕಾಯಿಂದ ಸಿಎಂ ಕುಮಾರಸ್ವಾಮಿಗೆ ಎದುರಾಯ್ತ ಸಂಕಷ್ಟ..
2018ರ ವಿಧಾನಸಭೆ ಚುನಾವಣೆ ವೇಳೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪದ ಮೇಲೆ ಹೆಚ್‌ಡಿಕೆ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಲೋಕಸಭಾ ಚುನಾವಣೆಯು ಮುಗಿದಿದೆ… ಫಲಿತಾಂಶಕ್ಕಾಗಿಯೇ ಎಲ್ಲರೂ ಕೂಡ ಕಾಯುತ್ತಿದ್ದಾರೆ..
ಪ್ರಜ್ಞಾವಂತ ನಾಗರಿಕ ಸಮಿತಿ ಅಧ್ಯಕ್ಷರಾದ ಆನಂದ್ ಎನ್ನುವವರು ಈ ದೂರು ನೀಡಿದ್ದಾರೆ. ಅಷ್ಟೆ ಅಲ್ಲದೆ ಅವರು ತಮ್ಮ ದೂರಿನಲ್ಲಿ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣದಿಂದ ಒಂದೇ ಬಾರಿಗೆ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು… ನಾಮಪತ್ರ ಸಲ್ಲಿಸುವ ಸಮಯದಲ್ಲಿ ಹೆಚ್‌ಡಿಕೆ ಸಲ್ಲಿಸಿದ್ದ ಅಫಿಡೆವಿಟ್‌ನಲ್ಲಿ ಕುಟುಂಬ ಸದಸ್ಯರ ಬಗೆಗಿನ ಮಾಹಿತಿಯನ್ನು ತಿಳಿಸಿಲ್ಲ, ಅಷ್ಟೆ ಅಲ್ಲದೆ 2ನೇ ಪತ್ನಿ ನಟಿ ರಾಧಿಕಾ, ಪುತ್ರಿ ಶರ್ಮಿಕಾ ಹಾಗೂ ಪುತ್ರ ನಿಖಿಲ್ ಬಗ್ಗೆ ಯಾವುದೇ ಮಾಹಿತಿ ಉಲ್ಲೇಖ ಮಾಡಿಲ್ಲ... ಈ ಮೂಲಕ ಹೆಚ್‌ಡಿಕೆ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ… ಆನಂದ್ ಸಲ್ಲಿಸಿರುವ ಅರ್ಜಿಯನ್ನ ವಿಶೇಷ ನ್ಯಾಯಾಲಯ ವಿಚಾರಣೆಗೆ ಮಾನ್ಯ ಮಾಡಿದ್ದು ಸದ್ಯದಲ್ಲೇ ಈ ಬಗ್ಗೆ ವಿಚಾರಣೆ ನಡೆಯಲಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ವಿಧಾನಸಭಾ ಚುನಾವಣೆ ಫಲಿತಾಂಶ ಬಂದು ರಾಜ್ಯದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರು ಅಧಿಕಾರವನ್ನು ಸ್ವೀಕರಿಸಿದ್ದಾರೆ...ಆದರೂ ಕೂಡ ವಿಧಾನಸಭಾ ಚುನಾವಣೆ ಮುಗಿದ ಮೇಲೆ ಇವೆಲ್ಲಾ ಹೊರಬರುತ್ತಿರುವುದು ವಿರೋಧ ಪಕ್ಷಗಳ ಕೈವಾಡ ಎಂಬುದು ಹಲವರ ಮಾತಾಗಿದೆ.
Comments