ರೆಬೆಲ್ ಸ್ಟಾರ್ ಅಂಬರೀಷ್ ಮಹೇಂದ್ರ ಸಿಂಗ್ ಧೋನಿಗೆ 50 ಸಾವಿರ ಕೊಟ್ಟಿದ್ರಂತೆ..!! ಯಾಕೆ ಗೊತ್ತಾ..?
ಮಂಡ್ಯದ ಗಂಡು,ಕಲಿಯುಗದ ಕರ್ಣ ಅಂತೆಲ್ಲಾ ಅಂಬರೀಶ್ ಅವರನ್ನು ಕರೆಯುತ್ತಾರೆ.. ಮಂಡ್ಯದಲ್ಲಿನ ಅಭಿಮಾನಿಗಳಂತೂ ಜಲೀಲಾ ಅಂದ್ರೆ ಸಾಕು ಮುಗಿ ಬೀಳುತ್ತಿದ್ದರು.. ಮಂಡ್ಯದ ಅಕ್ಕರೆಯ ಗಂಡು ರೆಬಲ್ ಸ್ಟಾರ್ ಅಂಬರೀಶ್ ಅವರದ್ದು ಸ್ವಲ್ಪ ಧಾರಾಳ ಮನಸ್ಸು,,, ಕಷ್ಟ ಎಂದು ಬಂದವರಿಗೆ ಕೈಲಾದ ಸಹಾಯವನ್ನು ಮಾಡುತ್ತಿದ್ದರು... ಅಂಬಿಯ ಬಳಿ ಸಹಾಯ ಪಡೆದವರು ಸಾವಿರಾರು ಜನರು ಇದ್ದಾರೆ.ಇನ್ನು ಅಂಬರೀಷ್ ಅವರು ನಾನು ಇವರಿಗೆ ಸಹಾಯ ಮಾಡಿದ್ದೆ, ಅವರಿಗೆ ಸಹಾಯ ಮಾಡಿದ್ದೆ ಎಂದು ಎಲ್ಲೂ ಕೂಡ ಹೇಳಿಕೊಂಡವರಲ್ಲ. ಆದರೆ ಅಂಬಿ ಎಂಎಸ್ ಧೋನಿಗೂ ಕೂಡ ಸಹಾಯ ಮಾಡಿದ್ದರಂತೆ...
ಮಹೇಂದ್ರ ಸಿಂಗ್ ಧೋನಿ ಅವರು ಇಂದು ಸಾವಿರಾರು ಕೋಟಿಯ ಒಡೆಯ ಆಗಿರಬಹುದು ಆದರೆ ಒಂದು ಕಾಲದಲ್ಲಿ ಅಂದರೆ ಅವರು ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡುವ ಮೊದಲು ತುಂಬಾ ಬಡತನದಲ್ಲಿ ಬೆಳೆದವರು.ಭಾರತ ಮತ್ತು ಶ್ರೀಲಂಕಾ ನಡುವೆ ಒಂದು ದಿನ ಏಕದಿನದ ಪಂದ್ಯ ನಡೆಯುತ್ತಿರುತ್ತದೆ. ಆ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಾ ಇರುತ್ತದೆ. ಇನ್ನು ಆ ಪಂದ್ಯವನ್ನ ನೋಡಲು ಅಂಬರೀಷ್ ಅವರು ಕೂಡ ಹೋಗಿರುತ್ತಾರೆ, ಆವತ್ತು ಧೋನಿ ಅವರ ಬ್ಯಾಟಿಂಗ್ ನೋಡಿದ ಅಂಬರೀಷ್ ಅವರು ಧೋನಿ ಬ್ಯಾಟಿಂಗ್ ನ್ನ ತುಂಬಾ ಇಷ್ಟ ಪಡುತ್ತಾರೆ. ಇನ್ನು ಪಂದ್ಯ ಮುಗಿದ ತಕ್ಷಣ ಧೋನಿ ಅವರ ಬಗ್ಗೆ ವಿಚಾರಣೆ ಮಾಡಿದ ಅಂಬಿ, ಅಂದು ಧೋನಿ ತುಂಬಾ ಬಡತನದಲ್ಲಿ ಇರುವುದನ್ನ ತಿಳಿದು ಧೋನಿಗೆ 50 ಸಾವಿರ ರೂಪಾಯಿಯ ಚೆಕ್ ನೀಡಿದ್ದಾರೆ ಅಂಬರೀಷ್ ಅವರು. ಇನ್ನು ವಿಷಯವನ್ನ ಅಂಬರೀಷ್ ಅವರು ಎಲ್ಲೂ ಕೂಡ ಹೇಳಿಕೊಳ್ಳಲಿಲ್ಲ. ಇನ್ನು ವಿಷಯವನ್ನ ಧೋನಿ ಅವರು ಒಂದು ಹಿಂದಿ ಚಾನೆಲ್ ನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.. ಅಂಬಿ ಸ್ನೇಹ ಜೀವಿ ಅನ್ನೋದಕ್ಕೆ ಇದಕ್ಕಿಂತಾ ಸಾಕ್ಷಿ ಬೇಕಾ,,,
Comments