ಜೆಡಿಎಸ್ ಅಭಿಮಾನಿಗಳಿಂದ ನಿಖಿಲ್ ಕುಮಾರಸ್ವಾಮಿಗೆ ಭರ್ಜರಿ ಗಿಫ್ಟ್...?!!!

ನಿನ್ನೆ ತಾನೆ ಮತದಾನ ಮುಗಿದಿದೆ. ಚುನಾವಣೆ ಬಳಿಕ ನಿಖಿಲ್ ಕುಮಾರ ಸ್ವಾಮಿ ಬಗ್ಗೆ ಒಂದು ಹೊಸ ವಿಚಾರ ಹರಿದಾಡುತ್ತಿದೆ. ಅಂದಹಾಗೇ ಸುಮಲತಾ ಮತ್ತು ನಿಖಿಲ್ ಭಾರೀಯೇ ಪೈಪೋಟಿ ನೀಡಿದ್ದಾರೆ. ಆದರೆ ನಿಖಿಲ್ ಅದಾಗಲೇ ಸಂಸದರಾಗಿದ್ದಾರೆ ಎಂದು ಭಾವಿಸಿ ಅವರ ನೇಮ್ ಪ್ಲೇಟ್ ಕೂಡ ರೆಡಿಯಾಗಿದೆ.
ಚುನಾವಣಾ ಫಲಿತಾಂಶ ಮೇ 23ಕ್ಕೆ ಬರಲಿದೆ. ಆದರೆ, ಗೆಲ್ಲೋ ಮುನ್ನವೇ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯ ‘ನಿಖಿಲ್ .ಕೆ ಸಂಸದ’ ಎಂಬ ಬೋರ್ಡ್ ರೆಡಿಯಾಗಿ ಫೇಸ್ ಬುಕ್ನಲ್ಲಿ ಹರಿದಾಡುತ್ತಿದೆ. ಜೆಡಿಎಸ್ ಅಭಿಮಾನಿಗಳು ಈ ನೇಮ್ ಬೋರ್ಡ್ ನ್ನು ಶೇರ್ ಮಾಡುತ್ತಿದ್ದು ನಿಖಿಲ್ ಗೆಲುವನ್ನು ಸಾಧಿಸಿಯೇ ಬಿಟ್ಟರು ಎಂದು ಕ್ಯಾಪ್ಶನ್ ಬರೆದಿದ್ದಾರೆ.ಕರ್ನಾಟಕ ಜೆಡಿಎಸ್ ಪಕ್ಷದ ಫೇಸ್ ಬುಕ್ ಪೇಜ್ನಲ್ಲಿ “ನಿಖಿಲ್ ಕೆ. ಸಂಸದರು, ಮಂಡ್ಯ ಲೋಕಸಭಾ ಕ್ಷೇತ್ರ” ಎಂದು ಬರೆದಿರುವ ಬೋರ್ಡ್ನ ಅನ್ನ ಕೈಯಲ್ಲಿ ಹಿಡಿದು ಪೋಟೋ ಪೋಸ್ಟ್ ಮಾಡಿ, ‘ಅಭಿಮಾನಿಯಿಂದ ನಿಖಿಲ್ ಕುಮಾರಸ್ವಾಮಿರವರಿಗೆ ಉಡುಗೊರೆ’ ಎಂಬ ಬರಹ ಬರೆದು ಅಭಿಮಾನಿಗಳು ಪೋಸ್ಟ್ ಮಾಡಿದ್ದಾರೆ.
Comments