ಟಿಕ್ ಟಾಕ್ ಪ್ರಿಯರಿಗೆ ಶಾಕಿಂಗ್ : ಇನ್ನು ಮುಂದೆ ಆ್ಯಪ್ ಡೌನ್ ಲೋಡ್ ಆಗುವುದಿಲ್ಲ...

ಅಂದಹಾಗೇ ಟಿಕ್ ಟಾಕ್ ಪ್ರಿಯರಿಗೆ ಶಾಕಿಂಗ್ ಸುದ್ದಿಯೊಂದು ಹೊರ ಬಿದ್ದಿದೆ. ಇನ್ನು ಮುಂದೆ ಟಿಕ್ ಟಾಕ್ ಮಾಡುವುದಕ್ಕೆ ಆಗುವುದಿಲ್ಲ. ಮಹಿಳೆಯರ ಗೌರವಕ್ಕೆ ಮಾನಹಾನಿ ತರುವಂತಹದ್ದು ಎಂದು, ಅದನ್ನು ಬ್ಯಾನ್ ಮಾಡುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಚೀನಾದ ಜನಪ್ರಿಯ ಟಿಕ್ ಟಾಕ್ ಆ್ಯಪ್'ನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಇನ್ನು ಮುಂದೆ ಟಿಕ್ ಟಾಕ್ ಆ್ಯಪ್ ಗೂಗಲ್ ನಲ್ಲಿ ಡೌನ್ ಲೋಡ್ ಆಗುವುದಿಲ್ಲ. ಈ ಆ್ಯಪ್ ನ್ನು ಬ್ಲಾಕ್ ಮಾಡಲಾಗಿದೆ.
ಈ ನಿಷೇಧವನ್ನು ಹಿಂಪಡೆಯಲು ಚೀನಾದ ಬೈಟಿಡ್ಯಾನ್ಸ್ ಟೆಕ್ನಾಲಜಿ ಮಾಡಿರುವ ಕೋರಿಕೆಯನ್ನು ಮಂಗಳವಾರ ತಮಿಳುನಾಡಿನ ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದ ಕೆಲವೇ ಗಂಟೆಗಳಲ್ಲಿ ಗೂಗಲ್ ಈ ಆ್ಯಪ್’ನ್ನು ಬ್ಯಾನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಮುಂದೆ ಬಾರತದ ಗೂಗಲ್'ನಲ್ಲಿ ಈ ಆ್ಯಪ್ ಬ್ಲಾಕ್ ಆಗಿರುತ್ತದೆ. ಕೇಂದ್ರ ಸರ್ಕಾರದ ಆದೇಶದಂತೇ ಗೂಗಲ್ ಆ್ಯಪ್’ಗೆ ಕಡಿವಾಣ ಹಾಕಿದೆ. ಭಾರತದಲ್ಲಿ ಟಿಕ್ ಟಾಕ್ ಆ್ಯಪ್ ಪ್ರಿಯರಿಗೆ ನಿರಾಸೆ ಮೂಡಿದೆ. ಅದೆಷ್ಟೋ ಮಂದಿ ಟಿಕ್’ಟಾಕ್ ಆ್ಯಪ್ ಮೂಲಕ ಜನಪ್ರಿಯ ಗಳಿಸಿದ್ದರು. ಆದರೆ ಇನ್ನುಮುಂದೆ ಇದು ನಿಷೇಧವಾಗಿದೆ ಎಂಬ ಸುದ್ದಿ ಕೇಳಿದ ಮೇಲೆ ನಿರಾಸರಾಗಿದ್ದಾರೆ. ಭಾರತದಲ್ಲಿ ಈ ಆ್ಯಪ್ ತುಂಬಾ ಜನಪ್ರಿಯತೆಯ್ನನು ಗಳಿಸಿತ್ತು.
Comments