ಬಹಿರಂಗವಾಗಿಯೇ ಸಿಎಂ ಗೆ ಚಾಲೆಂಜ್ ಹಾಕಿದ ಚಾಲೆಂಜಿಂಗ್ ಸ್ಟಾರ್ : ರೈಡ್’ನಲ್ಲಿ ಸಿಕ್ಕ ಡೈರಿಯಲ್ಲಿ ಏನಿದೆ ಗೊತ್ತಾ…?!!!

ನಾನು ತುಂಬಾ ಕೆಟ್ಟವನು ರೀ ,ನನ್ನಂಥಾ ಕಚಡಾ ನನ್ಮಗ ಇನ್ನೊಬ್ಬನಿಲ್ಲ. ನನಗೆ ಎರಡು ಮುಖವಿದೆ. ನಿಮಗೆ ಗೊತ್ತಾ..? ಆ ಕಡೆ ಒಂದ್ ಮುಖ, ಈ ಕಡೆ ಒಂದ್ ಮುಖ. ಈ ಚುನಾವಣೆಯಲ್ಲಿ ಮಧ್ಯದಲ್ಲಿ ಮುಖ ಇಟ್ಕೊಂಡು ಹೋಗುತ್ತಿದ್ದೇನೆ. ಯಾಕೆ ಗೊತ್ತಾ..? ಅಮ್ಮನಿಗೆ ನನ್ನಿಂದ ತೊಂದರೆಯಾಗಬಾರದು ಎಂದು ಸಿನಿಮಾ ಡೈಲಾಗ್ ರೀತಿ ಜಬರ್ದಸ್ತ್ ಆಗಿ ಡಿ ಬಾಸ್ ಕೋಪದಿಂದ ಹೇಳಿದ್ದಾರೆ. ನಿನ್ನೆ ಕೊನೆದಿನದ ಪ್ರಚಾರದ ವೇಳೆ ಈ ರೀತಿ ಮಾತನಾಡಿದ ದರ್ಶನ್’’ಗೆ ತನ್ನ ಬಗ್ಗೆ ಹಗುರವಾಗಿ ಮಾತನಾಡಿದವರ ಮೇಲೆ ಸಿಕ್ಕಾಪಟ್ಟೆ ಕೋಪವಿತ್ತು.
ಅಂದಹಾಗೇ ಐಟಿ ದಾಳಿಯ ಹಿಂದೆ ಸುಮಲತಾ ಕೈವಾಡವಿದೆ ಎನ್ನುವ ಸಿಎಂ ಮಾತಿಗೆ ಬೆಂಕಿಯಂತೆ ಮಾತನಾಡಿದ ದರ್ಶನ್, ಈಗ ತಾನೆ ಪಾಲಿಟಿಕ್ಸ್ ಗೆ ಎಂಟ್ರಿ ಕೊಡುತ್ತಿರುವ ಸುಮಲತಾ ಅಮ್ಮನ ಬಗ್ಗೆ ಆರೋಪ ಮಾಡ್ತಿದ್ದೀರಲ್ಲಾ ಎಷ್ಟು ಸರಿ, ನನ್ನ ಫಾರ್ಮ್ ಹೌಸ್ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವರಿಗೊಂದು ಅಲ್ಲಿ ಡೈರಿ ಸಿಕ್ಕಿದೆ. ಆ ಡೈರಿಯಲ್ಲಿ ಯಾವ ಹಸುವಿಗೆ ಯಾವ ತಿಂಡಿ ಕೊಡಬೇಕು. ಬೂಸಾ-ಹಿಂಡಿಯನ್ನು ಎಷ್ಟು ಟೈಮ್ ಗೆ ಕೊಡಬೇಕು,ಯಾವ ಚುಚ್ಚು ಮದ್ದು ಕೊಡಬೇಕು ಎಂದು ಬರೆದಿದೆ ಎಂದು ವ್ಯಂಗ್ಯವಾಡಿದ್ದಾರೆ.ನಾವೇನು ತಪ್ಪು ಮಾಡಿದ್ದೀವಿ. ಇಲ್ಲಿಯವರೆಗೂ ನಾನು ತಾಳ್ಮೆಯಿಂದಲೇ ಇದ್ದೇನೆ. ಅದಕ್ಕೆ ಕಾರಣ ನಾವು ಮಾತನಾಡಿದರೆ ಎಲ್ಲಿ ಅಮ್ಮನಿಗೆ ತೊಂದರೆಯಾಗುತ್ತದೆ ಎಂಬ ಭಯದಿಂದಲೇ ಹೊರತು, ಅವರಿಗೆ ಹೆದರಿಕೊಳ್ಳುವ ಪ್ರಶ್ನೆಯೇ ಇಲ್ಲ.
ನಾವೇನು ತಪ್ಪು ಮಾಡಿಲ್ಲ. ಅಪ್ಪಾಜಿ ಇದ್ದಾಗ ಅವರಿಂದೆ ಹೋಗುತ್ತಿದ್ದೆ, ಈಗ ಅಮ್ಮನಿಂದೆ ಇದ್ದೇನೆ. ಹೌದು ನಾವು ಜೋಡೆತ್ತುಗಳು. ನಾವಿಬ್ಬರು ಅವರಿಗಾಗಿಯೇ ದುಡಿಯುತ್ತೇವೆ. ಅಷ್ಟೇ ಐಆಕೆ ನೀವು ನಮ್ಮನ್ನ ಕಳ್ಳೆತ್ತುಗಳು ಎಂದಿದ್ದೀರಲ್ಲಾ…ಥ್ಯಾಂಕ್ಸ್. ಡಿ ಬಾಸ್ ಎಂದ್ರೆ ಕೆಲವರು ಮಾತ್ರ ಕರೆಯುತ್ತಿದ್ದರು. ಆದರೆ ಇಡೀ ಕರ್ನಾಟಕವೇ ನನ್ನನ್ನ ಡಿ ಬಾಸ್ ಎಂದು ಕರೆಯುವಂತೆ ಮಾಡಿದ್ದು ನೀವು ಸ್ವಾಮಿ, ಮಾನ್ಯ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು. ಅದಕ್ಕಾಗಿ ನಾನು ನಿಮಗೆ ಥ್ಯಾಂಕ್ಸ್ ಹೇಳುತ್ತೇನೆ ಎಂದರು. ಅಮ್ಮನ ಪರ ನಿಂತಿದ್ದೇ ತಪ್ಪಾ,ಅಷ್ಟಕ್ಕೂ ಚುನಾವಣೆಯನ್ನು ನ್ಯಾಯ ರೀತಿಯಲ್ಲಿ ಎದುರಿಸಬೇಕೆ ವಿನಹ ಇಂತಹ ಸಿಲ್ಲಿ ಆರೋಪಗಳಿಂದಲ್ಲ ಎಂದರು. ಅಮ್ಮನ ಪರ ನಿಂತಿದ್ದಕ್ಕೆ ನಮ್ಮ ಮನೆಯ ವಿಷಯ ತೆಗೆದ್ರು. ಯಾಕೆ ಸ್ವಾಮಿ ನಿಮ್ಮ ಮನೆಯಲ್ಲಿ ಜಗಳಗಳು ನಡೆಯಲ್ವಾ, ಯಾರ ಮನೆಯಲ್ಲಿ ನಡೆಯಬಾರದೇನು ನಮ್ಮ ಮನೆಯಲ್ಲಿ ನಡೆದಿಲ್ಲವೆಂದರು.
ಮಾತೆತ್ತಿದರೆ ನಾವು ರೈತ ಮಕ್ಕಳು ಎನ್ನುತ್ತಾರೆ. ಅವರಿಗೇನು ಗೊತ್ತು ನೆರಳಿನಲ್ಲಿರುವವರು ಎಂದು ನಮ್ಮನ್ನ ಛೇಡಿಸುತ್ತಾರೆ. ಹಸು ಕರು ಹಾಕಿದರೆ, ಅದಕ್ಕೆ ಏನು ಮೇವು ಹಾಕಬೇಕು ಎಂಬುದೇ ಇವರಿಗೆ ಗೊತ್ತಿಲ್ಲ. ಒಂದು ಲೋಟ ಹಾಲು ಕರೆಯಿರಿ ನೋಡೋಣ ಎಂದು ಸವಾಲು ಹಾಕಿದರು. ನನಗೆ ವರ್ಷಕ್ಕೆ ಎರಡೂವರೆ ಕೋಟಿ ಹಣ ಬೇಕು. ನಮ್ಮ ಮನೆಗೆ ಯಾರೇ ಸಹಾಯ ಎಂದು ಕೇಳಿಕೊಂಡು ಬಂದರು ನಾನು ಅವರಿಗೆ ನೆರವು ನೀಡುತ್ತೇನೆ. ಇವರು ‘ಅನುದಾನ ಎಂದು ಹಣ ನೀಡಲಿ’. ಹೇಗೆ ಅಭಿವೃದ್ಧಿ ಮಾಡುವುದು ಎಂದು ತೋರಿಸುತ್ತೀನಿ ನಾನು ಎಂದು ಸಿಎಂ ಕುಮಾರ ಸ್ವಾಮಿ ಅವರಿಗೆ ನೇರವಾಗಿಯೇ ಚಾಲೆಂಜ್ ಹಾಕಿದರು.
Comments