ನನಗೆ ಸುಮಲತಾನೂ ಗೊತ್ತು, ನಿಖಿಲ್ ಕೂಡ ಚೆನ್ನಾಗಿಯೇ ಗೊತ್ತು, ಆದರೆ ನಿಮ್ಮ ಓಟ್ ಮಾತ್ರ…….? ರಾಗಿಣಿ ದ್ವಿವೇದಿ

ನಟಿ ರಾಗಿಣಿ ದ್ವಿವೇದಿ ಅವರು ಬಿಜೆಪಿ ಸೇರಲಿದ್ದಾರೆ. ಅಧಿಕೃತವಾಗಿ ಅವರು ಪಕ್ಷಕ್ಕೆ ಸೆರ್ಪಡೆ ಆಗಿಲಿದ್ದಾರೆ ಎಂಬ ಸುದ್ದಿ ಹಬ್ಬಿದ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿತ್ತು. ಆದರೆ ದಿಢೀರ್ ಅಂತಾ ರಾಗಿಣಿ ಅವರ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ರದ್ದಾಯ್ತು. ರಾಗಿಣಿ ಬಿಜೆಪಿ ಸೇರೇ ಬಿಡ್ತಾರೆ ಎನ್ನುವಷ್ಟರಲ್ಲಿ ಅವರನ್ನು ಕಾಂಗ್ರೆಸ್ ನವರು ಸೆಳೆದಿದ್ದಾರೆ ಎಂಬ ಮಹಾ ಸ್ಫೋಟಕ ಮಾಹಿತಿ ಹಬ್ಬಿತು. ಆದರೆ ಈ ಬಗ್ಗೆ ನಟಿ ರಾಗಿಣಿಯವರೇ ಖುದ್ದು ಮಾತನಾಡಿದ್ದಾರೆ.
ರಾಗಿಣಿಯನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ರಾಗಿಣಿ ಕೈ ಕೊಟ್ಟಿದ್ದಾರೆಂಬ ಸುದ್ದಿ ಬಂದ ಕೂಡಲೇ ಪ್ರೋಗ್ರಾಂ ಕ್ಯಾನ್ಸಲ್ ಮಾಡಲಾಯ್ತಂತೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇವರು’ ನಾನು ಎಂದಿಗೂ ಮುಂದಿನ ಜೀವನದ ಬಗ್ಗೆ ಯೋಚಿಸುವುದಿಲ್ಲ. ಇವತ್ತೇನಾಗುತ್ತದೆ ಎಂದು ನೋಡುವವಳು.ಪ್ರತೀ ದಿನ ಜೀವನ ಹೇಗೆ ಸಾಗುತ್ತೋ ಅದರ ಮೇಲೆ ನಡೆದುಕೊಂಡು ಹೋಗುತ್ತೇನೆ ವಿನಹ ನಾನು ಯಾವುದಕ್ಕೂ ಯೋಚಿಸುವುದಿಲ್ಲ. ನಾಳೆ ಏನಾಗುತ್ತೋ ನಂಗೂ ಗೊತ್ತಿಲ್ಲ. ನಿಮಗೂ ಗೊತ್ತಿಲ್ಲ. ನನಗೂ ಏನು ಅಂತಾ ಗೊತ್ತಿಲ್ಲ ಸದ್ಯಕ್ಕೆ ರಾಜಕೀಯವನ್ನು ಮುಂದೆ ನೋಡೋಣ’ ಅಂತಾ ಹೇಳಿದ್ರು.
ಅಂದಹಾಗೇ ರಾಜಕೀಯದ ಬಗ್ಗೆ ನಾನು ಗಾಸಿಪ್ ಗಳಿಗೆ ಆಗಾಗ್ಗ ಒಳಗಾಗುತ್ತಲೇ ಇರುತ್ತೇನೆ. ಅದ್ಯಾಕೋ ನನಗೂ ಗಾಸಿಪ್ ಗೂ ಬೆಂಬಿಡದ ಸಂಬಂಧವಿದೆ ಎಂದರು. ಒಟ್ಟಾರೆ ರಾಜಕೀಯ ಮುಂದೆ ನೋಡೋಣ ಬಿಡಿ ಎಂದು ಜಾರಿಕೆ ಉತ್ತರ ಕೊಟ್ಟು ಸುಮ್ಮನಾದರು. ಇನ್ನು ಮಂಡ್ಯ ರಾಜಕೀಯದ ಬಗ್ಗೆ ಮಾತನಾಡಿ ಮೇಡಂ ಎಂದರೆ, ನನ್ನ ಪ್ರಕಾರ ಚುನಾವಣೆ ಎಂದರೆ ಸರಿಯಾದ ಜನಪ್ರತಿನಿಧಿಯ ಆಯ್ಕೆ. ನನಗೆ ಸುಮಲತಾ ಮೇಡಂ ಅವರು ಕೂಡ ಚೆನ್ನಾಗಿಯೇ ಗೊತ್ತು.ನಿಖಿಲ್ ಕೂಡ ನನಗೆ ಗೊತ್ತಿರುವವರೇ. ಯಾರೇ ಆಯ್ಕೆಯಾದ್ರೂ ಜನರಿಗಾಗಿ ಕೆಲಸ ಮಾಡಬೇಕು. ಮಂಡ್ಯ ಜನತೆಗೆ ನಾನ್ ಕೇಳೋದೇನು ಅಂದ್ರೆ ನಿಮಗೆ ಯಾರು ಕೆಲಸ ಮಾಡ್ತಾರೆ ಅನ್ನಿಸುತ್ತೋ ಅವರಿಗೇ ಓಟ್ ಮಾಡಿ. ಎಲ್ಲದಕ್ಕಿಂತ ಹೆಚ್ಚಾಗಿ ಜನರಿಗೆ ಒಳ್ಳೇದಾಗಬೇಕಷ್ಟೆ’ ಅಂದ್ರು.
Comments