ಸಿಆರ್’ಪಿಎಫ್ ನಂತರ ಬಿಎಸ್ಎಫ್’ ಯೋಧರ ಕುಟುಂಬಕ್ಕೆದಾನ ಕೊಟ್ಟ ಗಾನ ಕೋಗಿಲೆ..

ಫೆಬ್ರವರಿ 14 ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ 40 ವೀರ ಯೋಧರ ಕುಟುಂಬಕ್ಕೆ ಗಾನಕೋಗಿಲೆ ಲತಾ ಮಗೇಶ್ಕರ್ ಅವರು 1 ಕೋಟಿ ರೂ. ನೀಡಲು ಮುಂದಾಗಿದ್ದರು. ಈಗ ಬಿಎಸ್ಎಫ್ ಕುಟುಂಬಕ್ಕೆ 11 ಲಕ್ಷ ರೂ. ದಾನ ಮಾಡಲು ಮುಂದಾಗಿದ್ದಾರೆ. ಅಂದಹಾಗೇ ಈ ಮಾಹಿತಿಯನ್ನು ಅದಿನಾಥ್ ಮಂಗೇಶ್ಕರ್ ಅವರು ನೀಡಿದ್ದಾರೆ.
ಲತಾ ಮಂಗೇಶ್ಕರ್ ತಮ್ಮ ಸ್ವಂತ ಹಣದಲ್ಲಿ ಎನ್‍ಜಿಒ ಭಾರತ್ ಕೇ ವೀರ್ ಗೆ 11 ಲಕ್ಷ ರೂ. ದಾನ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಗಾನ ಕೋಗಿಲೆ ಒಂದು ಕೋಟಿಯನ್ನು ಹೊರತು ಪಡಿಸಿಯೂ, ಅವರು ಕಾಶ್ಮೀರದ ಕಣಿವೆಯಲ್ಲಿ ಹುತಾತ್ಮರಾದ ಬಿಎಸ್ಎಫ್ ಯೋಧರ ಕುಟುಂಬಕ್ಕೆ 11 ಲಕ್ಷ ರೂ. ದಾನ ಮಾಡಿದ್ದಾರೆ ಎಂದು ಮುಂಬೈನ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಆದಿನಾಥ್ ಮಂಗೇಶ್ಕರ್ ತಿಳಿಸಿದ್ದಾರೆ.ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಅನೇಕ ಯೋಧರ ಕುಟುಂಬಗಳಿಗೆ ಸ್ಟಾರ್ ನಟರು, ಗಾಯಕರು ದಾನ ಮಾಡುತ್ತಿದ್ದಾರೆ.ಈ ಹಿಂದೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ದಾಳಿಯಲ್ಲಿ ಹುತಾತ್ಮರಾದ ಕುಟುಂಬಕ್ಕೆ 5 ಕೋಟಿ ರೂ. ದಾನ ಮಾಡಿದ್ದರು. ಅಲ್ಲದೆ ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಅವರು ಕೂಡ ಕಳೆದ ವಾರ ಹುತಾತ್ಮ ಕುಟುಂಬಕ್ಕೆ ತಲಾ 5 ಲಕ್ಷ ರೂ. ಸಹಾಯಧನ ಮಾಡಿದ್ದರು.
Comments