ನನ್ನ ಅಣ್ಣನೆಂದು ಭಾವಿಸಿದ ಅವರೇ,ನನ್ನ ಒಳ ಉಡುಪಿನ ಬಗ್ಗೆ ನೀಚವಾಗಿ ಮಾತನಾಡಿದ್ರು : ಜಯಪ್ರದಾ ಕಣ್ಣೀರು..!!!
ರಾಜಕೀಯ ಭಾಷಣ ಮಾಡವ ಭರದಲ್ಲಿ ಕೆಲ ರಾಜಕೀಯ ನಾಯಕರು ನಾಲಿಗೆ ಹರಿಬಿಟ್ಟು ವಿವಾದಕ್ಕೊಳಗಾಗುತ್ತಾರೆ. ಮಂಡ್ಯ ಕ್ಷೇತ್ರದಲ್ಲಿ ಪರಸ್ಪರರು ಮಾತಿನ ಕೆಸರೆರಚಾಟದಲ್ಲಿದ್ದಾರೆ.ಕೇಂದ್ರದಲ್ಲಿಯೂ ಕೂಡ ಇದರ ಹೊರತಾಗೇನು ಇಲ್ಲ. ನಟಿ ಜಯಪ್ರದಾ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಸಮಾಜವಾದಿ ಪಕ್ಷದ ಅಭ್ಯರ್ಥಿ ಅಜಂ ಖಾನ್ ಜಯಪ್ರದಾ ಅವರ ಒಳ ಉಡುಪಿನ ಬಗ್ಗೆ ಮಾತನಾಡಿ ಭಾರೀ ವಿವಾದಕ್ಕೀಡಾಗಿದ್ದಾರೆ.
ಅಜಂಖಾನ್ ಅವರು ಮಾತನಾಡುವ ವೇಳೆ, ಜಯಪ್ರದಾ ಅವರನ್ನ ನಾನು ನಾನು ನೋಡುತ್ತಿದ್ದೇನೆ. ಆದರೆ ಕಳೆದ 15 ದಿನದಿಂದ ಆಕೆ ಖಾಕಿ ಚೆಡ್ಡಿಯನ್ನು (ಇನ್ನರ್ ವೇರ್) ತೊಟ್ಟಿದ್ದಾರೆಂಬ ಹೇಳಿಕೆ ಕೊಟ್ಟಿದ್ದರು. ಆದರೆ ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಯ್ತು. ಅಜಂ ಖಾನ್ ಅವರನ್ನು ಪಕ್ಷದಿಂದಲೇ ಉಚ್ಛಾಟಿಸುವಂತೆ ಆಗ್ರಹ ಕೂಡ ವ್ಯಕ್ತವಾಗಿದೆ. ಅಜಂ ಖಾನ್ ಹೇಳಿಕೆಗೆ ಜಯಪ್ರದಾ ಅವರು ಸದ್ಯ ಪ್ರತಿಕ್ರಿಯಿಸಿ, 'ಈ ಸ್ಥಿತಿಯಲ್ಲಿ ನಾನು ಏನನ್ನು ಹೇಳೋದಿಲ್ಲ. ನನಗೆ ತುಂಬಾ ಬೇಸರವಾಗಿದೆ. ಎಸ್ಪಿ ಅಭ್ಯರ್ಥಿ ಲಕ್ಷ್ಮಣ ರೇಖೆಯನ್ನೇ ದಾಟಿದ್ದಾರೆ. ನನಗೆ ಯಾರು ಅಣ್ಣ ಇಲ್ಲ. ಆದರೆ ಅವರನ್ನೇ ನಾನು ಅಣ್ಣ ಅಂತಾ ತಿಳಿದುಕೊಂಡಿದ್ದೆ. ಆದ್ರೆ ಈಗ ಅವರ ಮೇಲೆ ಇದ್ದ ನಂಬಿಕೆ ಕಳೆದು ಹೋಗಿದೆ. ಸದಾ ನಾನು ಅವರನ್ನು ಅಣ್ಣನೆಂದಚು ಕರೆಯುತ್ತಿದ್ದೆ. ಅಣ್ಣ ಯಾವತ್ತಾದ್ರು ತಂಗಿಯ ಬಗ್ಗೆ ಈಗೆ ಮಾತನಾಡುತ್ತಾರೆಯೇ...? ಸ್ಪರ್ಧೆ ಬಂದು ಬಿಟ್ರೆ ತಂಗಿ-ತಾಯಿಗೂ ಸಂಬಂಧ ಗೊತ್ತಾಗಲ್ವಾ... ನಿಜಕ್ಕೂ ಬೇಸರವಾಗಿದೆ. ರಾಂಪುರ ಜನರು ಇದಕ್ಕೆ ಉತ್ತರ ಕೊಡಬೇಕು. ಖಂಡಿತಾ ಅವರು ಕೊಟ್ಟೇ ಕೊಡುತ್ತಾರೆ. ಅಖಿಲೇಶ್ ಯಾದವ್ ಅವರೇ ನಿಮ್ಮ ಪಕ್ಷದಲ್ಲಿ ಇಂತಹ ವ್ಯಕ್ತಿಯನ್ನು ಯಾಕೆ ಇಟ್ಟುಕೊಂಡಿದ್ದೀರಾ, ಕಿತ್ತು ಬಿಸಾಕಿ ಎಂದು ಕಣ್ಣೀರು ಹಾಕಿದ್ರು. ಸ್ಪರ್ಧೆ ಮಾಡುವ ಹಕ್ಕು ಅಜಂ ಖಾನ್ ಗೆ ಇಲ್ಲವೆಂದರು. ಇನ್ನು ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿ ಇಂತಹ ಹೇಳಿಕೆಗಳನ್ನು ಕೊಡಬಾರದು, ಅಜಂ ಖಾನ್ ಮಾಡಿರೋದು ತಪ್ಪು ಎಂದು ಡ್ಯಾಮೇಜ್ ಕಂಟ್ರೋಲ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಇನ್ನು ಆದಿತ್ಯ ನಾಥ್ ಅವರು ಹೆಣ್ಣು ಮಕ್ಕಳನ್ನು ಗೌರವಿಸಬೇಕು, ಜಯಪ್ರದಾ ಅವರಲ್ಲಿ ಅಜಂ ಖಾನ್ ಕ್ಷಮೆ ಕೇಳಬೇಕೆಂದರು. ಮಹಿಳಾ ಸಂಘ ಸಂಸ್ಥೆಗಳು, ಅಜಂ ಖಾನ್ ವಿರುದ್ಧ ಹೌ ಹಾರಿದ್ದಾರೆ.ಇದು ನಾಚಿಗೇಡಿತನ, ಅಜಂ ಬಾಯಲ್ಲಿ ಈ ಮಾತು ಬರಬಾರದಿತ್ತು, ಅವರನ್ನು ಕಿತ್ತೆಸೆಯಿರಿ ಎಂದಿದ್ದಾರೆ. ಆದರೆ ಅಜಂ ಖಾನ್, ಜಯಪ್ರದಾ ಅವರ ಒಳ ಧರಿಸುವ ಉಡುಪಿನ ಬಗ್ಗೆ ಮಾತನಾಡಿದ್ದು, ಬಿಜೆಪಿ ಸೇರಿದ್ದಾರೆಂಬ ವ್ಯಂಗ್ಯದಲ್ಲಿ. ಆದರೆ ಅವರ ಹರಿತವಾದ ನಾಲಿಗೆಯಿಂದ ಜಯಪ್ರದಾ ಖಾಕಿ ಅಂಡರ್ ವೇರ್ ಧರಿಸುತ್ತಿದ್ದಾರೆ. ನಾನು 15 ದಿನಗಳಿಂದಲೂ ನೋಡುತ್ತಿದ್ದೇನೆ ಎಂಬ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ.
Comments