ನಾನು ಈ ಬಾರಿ ಓಟ್ ಹಾಕಲ್ಲ, ಎಂದು ತಲೆತಗ್ಗಿಸಿದ್ಯಾಕೆ ಸ್ಟಾರ್ ನಟಿ…?!!!

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ ಮತದಾನ ಮಾಡುವಂತೆ ಸ್ಟಾರ್ ನಟ-ನಟಿಯರು ಮನವಿ ಮಾಡಿಕೊಳ್ಳುತ್ತಿದ್ದಾರೆ. ತಪ್ಪದೇ ಮತ ಚಲಾಯಯಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಸ್ಟಾರ್ ನಟಿ ಅಲಿಯಾ ಭಟ್ ಕೂಡ ನೀವೆಲ್ಲರೂ ಮಿಸ್ ಮಾಡದೇ ಓಟ್ ಮಾಡಬೇಕು ಎಂದು ಕೇಳಿದ್ದಾರೆ. ಆದರೆ ಈ ಬಗ್ಗೆ ಅಭಿಮಾನಿಯೊಬ್ಬರು ಮೇಡಂ ನೀವೆಲ್ಲಿ ಮತದಾನಮಾಡ್ತೀರಾ ಎಂಬ ಪ್ರಶ್ನೆಗೆ ತಲೆ ತಗ್ಗಿಸಿದ್ದಾರಂತೆ ಅಲಿಯಾ ಭಟ್. ಇವರ ರಿಯಾಕ್ಷನ್ ನೋಡಿ ಅಭಿಮಾನಿ ಕನ್ಫ್ಯೂಸ್ ಆಗಿದ್ದಂತೂ ನಿಜ.
ಬಾಲಿವುಡ್ ನಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟು ಟಾಪ್ ನಟಿಯ ಸ್ಥಾನದಲ್ಲಿರುವ ಆಲಿಯಾ ಮತದಾನದಿಂದ ಎಸ್ಕೇಪ್ ಆಗುತ್ತಿದ್ದಾರಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಆಕೆಯನ್ನು ನೀವು ಯಾವ ಕ್ಷೇತ್ರದಿಂದ ಮತ ಚಲಾಯಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸದೇ ನಿರಾಶರಾಗಿದ್ಯಾಕೆ ಗೊತ್ತಾ..? ನರೇಂದ್ರ ಮೋದಿ ಎಲ್ಲ ಬಾಲಿವುಡ್ ನಟರಲ್ಲಿ ತಮ್ಮ ಅಭಿಮಾನಿಗಳಿಗೆ ಎಲೆಕ್ಷನ್ನಲ್ಲಿ ಮತಚಲಾಯಿಸುವಂತೆ ಕರೆ ನೀಡಲು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ಆಲಿಯಾ ಭಟ್ ತಮ್ಮ ಟ್ವಿಟರ್ ಖಾತೆಯಲ್ಲಿ, “ಒಂದು ಮತ ರಾಷ್ಟ್ರದ ಧ್ವನಿಯಾಗಿದೆ. ರಾಷ್ಟ್ರದ ಆಯ್ಕೆ, ನಿಮ್ಮ ಧ್ವನಿ ಬಳಸಿ ನಿಮ್ಮ ಆಯ್ಕೆಯನ್ನು ಮಾಡಿ” ಎಂದು ಬರೆದುಕೊಂಡಿದ್ದರು. ತನ್ನ ಅಭಿಮಾನಿಗಳಲ್ಲಿ ನೀವು ತಪ್ಪದೇ ಮತ ಹಾಕಬೇಕು ಎಂಬ ಹೇಳಿಕೆಗೆ ಅಲಿಯಾ ಫ್ಯಾನ್ಸ್ ಸಿಕ್ಕಾಪಟ್ಟೆ ಲೈಕ್ಸ್ ಕೊಟ್ಟಿದ್ದಾರೆ. ಆದರೆ ಅವರು ಮಾತ್ರ ಈ ಬಾರಿ ಓಟ್ ಹಾಕುತ್ತಿಲ್ಲ.ಮಾಧ್ಯಮದವರು ಕೇಳಿದ ಪ್ರಶ್ನೆಗೆ ಲೈಟ್ ಆಗಿ ಸ್ಮೈಲ್ ಮಾಡಿ ನಾನು ಓಟ್ ಮಾಡಲ್ಲ ಎಂದಿದ್ದಾರೆ. ದಾಖಲೆಗಳ ಪ್ರಕಾರ ಆಕೆ ಭಾರತದ ಪ್ರಜೆಯೇ ಅಲ್ಲ. ಹೌದು ಆಲಿಯಾ ಬ್ರಿಟಿಷ್ ಪ್ರಜೆ. ಅವರಿನ್ನು ಭಾರತದ ಪೌರತ್ವವನ್ನು ಹೊಂದಿಲ್ಲ. ಹೀಗಾಗಿ ಮತ ಚಲಾಯಿಸುವಂತಿಲ್ಲ. ಆದರೆ ತಾವು ಮತ ಚಲಾಯಿಸದೇ ಇದ್ದರೂ ಆಲಿಯಾ ಭಟ್ ಅಭಿಮಾನಿಗಳಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವುದರಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ.
Comments