'ನಿಖಿಲ್ ಎಲ್ಲಿದ್ದೀಯಪ್ಪಾ' ಟ್ರೋಲ್ ಗೆ ಕುಮಾರ ಸ್ವಾಮಿ ಪಂಚಿಂಗ್ ಉತ್ತರ ಏನ್ ಗೊತ್ತಾ..?

ಇತ್ತೀಚಿಗೆ ಚುನಾವಣಾ ಅಬ್ಬರದಲ್ಲಿ ಮುಖ್ಯಮಂತ್ರಿ ಕುಮಾರ್ಸವಾಮಿ ಅವರು ಪುತ್ರ ನಿಖಿಲ್ ಕುರಿತಾಗಿ ಹೇಳಿದ ಡೈಲಾಗ್ ಒಂದು ಬಹಳೌಏ ಟ್ರೋಲ್ ಆಯ್ತು. ಈ ಟ್ರೋಲ್ ಬಗ್ಗೆ ಸುಖಾ ಸುಮ್ಮನೇ ತಲೆ ಕೆಡಿಸಿಕೊಳ್ಲೋದು ಯಾಕೆ ಅಂತಾ ಸುಮ್ಮನಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಕೊನೆಗೂ ಬಾಯಿ ಬಿಟ್ಟಿದ್ದಾರೆ. ಎಷ್ಟರ ಮಟ್ಟಿಗೆ ಈ ಡೈಲಾಗ್ ಫೇಮಸ್ ಆಗಿದೆ ಎಂದ್ರೆ ಈ ಟೈಟಲ್ ಇಟ್ಕೊಂಡು ಸಿನಿಮಾ ಮಾಡೋಕೆ ಹೊರಟಿದ್ದಾರಂತೆ ಕಲೆ ನಿರ್ದೇಶಕರು. ಚಲನ ಚಿತ್ರ ಮಂಡಳಿಯಲ್ಲಿ ಈ ಟೈಟಲ್ ಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಕೊನೆಗೂ ಕುಮಾರ ಸ್ವಾಮಿ ಅವರು ನಿಖಿಲ್ ಎಲ್ಲಿದ್ದೀಯಪ್ಪಾ ಡೈಲಾಗ್ಗೆ ಖಡಕ್ ಆಗಿಯೇ ರಿಯಾಕ್ಟ್ ಮಾಡಿದ್ದಾರೆ.
ಅವರು ಇಂದು ಕೆಆರ್ ನಗರದ ನಾರಾಯಣಪುರ ಗ್ರಾಮದಲ್ಲಿರುವ ಯುವಕರ ಬಳಿ ಸಿಎಂ ಕುಮಾರಸ್ವಾಮಿ ಈ ಬಗ್ಗೆ ಮಾತನಾಡುತ್ತ . ಇತ್ತೀಚಿನ ದಿನಗಳಲ್ಲಿ ಒಂದು ತಂಡ ಕೆಟ್ಟ ರೀತಿಯಲ್ಲೇ ಬೆಂಬಲಿಸೋಕೆ ಅಂತಾನೇ ಇದೆ. ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದು ಅನಾವಶ್ಯಕ. ಅವರಿಗೆ ಟಾಂಗ್ ಕೊಡಬೇಕಷ್ಟೆ ಎಂದಿದ್ದಾರೆ. ಕೆಲ ಯುವಕರ ತಂಡ ಮಾಡೋಕೆ ಕೆಲಸವಿಲ್ಲದೇ ಭಾರೀ ಟ್ರೋಲ್ ಮಾಡೋಕೆ ಇರುತ್ತಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದಿದ್ದಾರೆ.. ಆ ಟ್ರೋಲ್ ಮಾಡುವರು ಯಾರೋ? ನಿಖಿಲ್ ಎಲ್ಲಿದ್ದೀಯಪ್ಪ ಎಂದರೆ ಅವನು ನಮ್ಮ ಹೃದಯದಲ್ಲಿ ಇದ್ದಾನೆ ಎನ್ನಬೇಕು ಎಂದು ಹೇಳಿದರು.ನಿಖಿಲ್ ಅಭಿನಯದ ಜಾಗ್ವಾರ್ ಚಿತ್ರದ ಆಡಿಯೋ ಬಿಡುಗಡೆ ವೇಳೆ ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಕುಮಾರಸ್ವಾಮಿ ಮಾತು ಈಗ ಸದ್ದು ಮಾಡುತ್ತಿದ್ದು ವಿಧವಿಧವಾಗಿ ಟ್ರೋಲ್ ಆಗುತ್ತಿದೆ.
Comments