ತಮ್ಮ ನಾಲಿಗೆ ಹರಿಬಿಟ್ಟು, ನಟಿ ಜಯಪ್ರದಾ ಒಳ ಉಡುಪಿನ ಬಗ್ಗೆ ಮಾತನಾಡಿದ ನಾಯಕ…!!!

15 Apr 2019 11:23 AM | General
6343 Report

ತಮ್ಮ ನಾಲಿಗೆಯನ್ನು ಹರಿಬಿಡುವುದರ ಮೂಲಕ ಏನಾದರೊಂದು ಕಾಂಟ್ರೋವರ್ಸಿ ಮಾಡಿಕೊಳ್ಳುತ್ತಿರುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮತ್ತೊಮ್ಮೆ ವಿವಾದಕ್ಕೆ ಒಳಗಾಗಿದ್ದಾರೆ. ಕೀಳು ಮಾತುಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಇವರು ಈ ಬಾರಿ ನಟಿ ಜಯಪ್ರದಾ ಅವರ ಒಳ ಉಡುಪಿನ ಬಗ್ಗೆ ಮಾತನಾಡಿ ಕಾಂಟ್ರೋವರ್ಸಿ ಮಾಡಿಕೊಂಡಿದ್ದಾರೆ.

ರಾಂಪುರದಲ್ಲಿ ತಮ್ಮ ಪ್ರತಿಸ್ಪರ್ಧಿ ಜಯಪ್ರದಾ ಬಗ್ಗೆ ಮಾತನಾಡುವ ವೇಳೆ ಬಳಸಿದ ಪದವೊಂದು ಇದೀಗ ಅವರನ್ನೇ ಮುಜುಗರಕ್ಕೀಡು ಮಾಡಿದೆ.  ಮನಬಂದಂತೇ ಮಾತಿನ ಭರದಲ್ಲಿ ಹೇಳಿದ ಆ ಹೇಳಿಕೆ ಇದೀಗ ವೈರಲ್ ಆಗಿದ್ದು, ಅಜಂ ಖಾನ್ ರನ್ನು  ಪಕ್ಷದಿಂದಲೇ ವಜಾಮಾಡಬೇಕೆಂಬ ಭಾರೀ ಒತ್ತಾಯ ಕೇಳಿಬಂದಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಜಂ ಖಾನ್‌, 17 ವರ್ಷಗಳ ಹಿಂದೆ ನಾನು ಜಯಪ್ರದಾರನ್ನು ಈ ಕ್ಷೇತ್ರಕ್ಕೆ ಕರೆತಂದಿದ್ದೆ. ಇಷ್ಟು ವರ್ಷ ಯಾರಿಗೂ ಆಕೆಯನ್ನು ಮುಟ್ಟಲು ಬಿಟ್ಟಿರಲಿಲ್ಲ. ಆದರೆ 17 ದಿನಗಳ ಹಿಂದೆ ಆಕೆ ಖಾಕಿ ಒಳವಸ್ತ್ರ ತೊಟ್ಟಿದ್ದು ಗೊತ್ತಾಯ್ತು ಎಂದಿದ್ದಾರೆ. ಈ ಮಾತಿಗೆ ಜಯಪ್ರದಾ ಅಭಿಮಾನಿಗಳಷ್ಟೇ ಅಲ್ಲಾ, ಅನೇಕರು ಅಜಂ ಖಾನ್ರನ್ನು ವಿರೋಧಿಸುತ್ತಿದ್ದಾರೆ. ಅಜಂ ಖಾನ್ ಬಿಜೆಪಿಗೆ ಸೇರಿರುವುದರ ಬಗ್ಗೆ ವ್ಯಂಗ್ಯವಾಗಿ ಮಾತನಾಡುವಾಗಈ ಪದ ಬಳಕೆ ಮಾಡಿದ್ದಾರೆ. ಇವರ ಹೇಳಿಕೆ ಹರಡುತ್ತಿದ್ದಂತೇ ಸಾಮಾಜಿಕ ಜಾಲತಾಣಗಳಲ್ಲಿ ಇವರ ಬಗ್ಗೆ ಅನೇಕ ವಿರೋಧಗಳು ಕೇಳಿ ಬಂದವು. ಇಂತಹ ಅಸಹ್ಯ ವ್ಯಕ್ತಿ ಪಕ್ಷದಲ್ಲಿರಬೇಕೆ..? ಮೊದಲು ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಲು ಹೇಳಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಜಂ ಖಾನ್ ವಿರುದ್ಧ ಟೀಕೆಗಳು ಹೆಚ್ಚಾಗಿವೆ.

Edited By

Kavya shree

Reported By

Kavya shree

Comments