ಬಿಜೆಪಿ ಸೇರುತ್ತೇನೆಂದು ಬಂದ ನಟಿ ಉಲ್ಟಾ ಹೊಡೆದಿದ್ದು ಯಾಕೆ…?!!!

ನಟಿ ರಾಗಿಣಿ ಇತ್ತೀಚಿಗಷ್ಟೇ ಬಾಯ್ ಫ್ರೆಂಡ್ಸ್ ವಿಚಾರವಾಗಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿದ್ದರು. ಆದರೆ ಇದೀಗ ಲೋಕ ಸಭೆ ಚುನಾವಣೆಯಲ್ಲಿ ಮತ್ತೆ ಸುದ್ದಿಯಾಗಿದ್ದಾರೆ. ಈ ಹಿಂದೆಯೇ ಅನೇಕ ಬಾರಿ ರಾಜಕೀಯ ಆಸಕ್ತಿ ವ್ಯಕ್ತಪಡಿಸಿದ್ದ ನಟಿ ರಾಗಿಣಿ ಈ ಬಾರಿ ಕ್ಯಾಂಪೇನ್ ಗೆ ಬರಲಿದ್ದಾರೆಂಬ ಸುದ್ದಿಯೂ ಇತ್ತು. ಆದರೆ ಅವರು ಯಾರ ಪರ ಕ್ಯಾಂಪೇನ್ ಮಾಡ್ತಾರೆ, ಯಾವ ಪಕ್ಷ ಸೇರ್ತಾರೆ ಎಂಬ ಸುದ್ದಿ ಮಾತ್ರ ಸ್ಪಷ್ಟವಾಗಿರಲಿಲ್ಲ.
ಆ ನಂತರ ಬಿಜೆಪಿಯಲ್ಲಿ ರಾಗಿಣಿ ಹೆಸರುಹೆಚ್ಚಾಗಿ ಕೇಳಿ ಬಂದಿತ್ತು. ಈಗಾಗಲೇ ಸ್ಯಾಂಂಡಲ್ವುಡ್ ನ ಕೆಲ ಖ್ಯಾತ ನಟಿಯರು ಬಿಜೆಪಿ ಪಕ್ಷದಲ್ಲಿದ್ದಾರೆ. ನಟಿ ತಾರ, ಶೃತಿ, ಮಾಳವಿಕಾ ಸೇರಿದಂತೇ ರಾಗಿಣಿ ಕೂಡ ಬಿಜೆಪಿ ಸೇರುವುದರ ಬಗ್ಗೆ ವರದಿಯಾಗಿತ್ತು.ಎಲೆಕ್ಷನ್ ಹತ್ತಿರ ಬರುತ್ತಿದೆ. ಇನ್ನೆರಡು ದಿನ ಕಳೆದ್ರೆ ಚುನಾವಣಾ ದಿನಾಂಕ ಬಂದೇ ಬಿಟ್ಟಿತು. ಅಷ್ಟರೊಳಗೆ ರಾಗಿಣಿಯವರು ಬಿಜೆಪಿಗೆ ಸೇರಲಿದ್ದಾರೆಂಬ ಸುದ್ದಿ ಹಬ್ಬಿಯೇ ಬಿಟ್ಟಿತು. ಆದರೆ ಈ ವಿಚಾರದಲ್ಲಿ ಮತ್ತೆ ಟ್ವಿಸ್ಟ್ ಸಿಕ್ಕಿದೆ.ರಾಗಿಣಿ ದ್ವಿವೇದಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ದಿಢೀರ್ ರದ್ದಾಗಿದೆ. ಹೀಗಾಗಿ ರಾಗಿಣಿ ಬಿಜೆಪಿಗೆ ಕೈಕೊಟ್ಟರಾ ಎನ್ನುವ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ನಟಿ ರಾಗಿಣಿ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿತ್ತು. ಈ ನಿಟ್ಟಿನಲ್ಲಿ ನಿನ್ನೆ ಮಧ್ಯಾಹ್ನ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸಕ ಅಶ್ವಥ್ ನಾರಾಯಣ್ ಅವರು ಒಂದು ಗಂಟೆ ಕಾದರೂ ರಾಗಿಣಿ ದ್ವಿವೇದಿ ಕಚೇರಿಗೆ ಆಗಮಿಸಲಿಲ್ಲ. ಇದರಿಂದಾಗಿ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂದು ಬಿಜೆಪಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.ಆದರೆ ಈ ವಿಚಾರವಾಗಿ ರಾಗಿಣಿ ಏನಾದರೂ ಕಾಂಗ್ರೆಸ್ ಸೇರಿಬಿಟ್ಟಿದ್ದಾರೆಯೇ ಎಂಬ ಅನುಮಾನಗಳು ದಟ್ಟವಾಗುತ್ತಿವೆ. ಅವರು ಕಾರ್ಯಕ್ರಮಕ್ಕೆ ಬರುತ್ತೇನೆಂದು ಆ ನಂತರ ಕೈ ಕೊಟ್ಟಿದ್ದರ ಹಿಂದೆ ಹಲವು ಸಂಶಯಗಳು ವ್ಯಕ್ತವಾಗುತ್ತಿವೆ. ಆದರೆ ಇದನ್ನು ಸಮರ್ಥಿಸಿಕೊಂಡ, ಬಿಜೆಪಿ ನಾಯಕರು ಅರವಿಂದ ಲಿಂಬಾವಳಿಗೆ ತುರ್ತಾಗಿ ಚಾಮರಾಜನಗರದಲ್ಲಿ ಕೆಲಸವಿರುವುದರಿಂದ ಅವರು ಹೋಗಬೇಕಾಗಿದೆ. ನಿಗಧಿಯಾಗಿದ್ದ ಕಾರ್ಯಕ್ರಮವನ್ನು ರದ್ದು ಮಾಡಿ ತೆರಳುತ್ತಿದ್ದಾರೆ ಅಷ್ಟೆ. ಕಾಂಗ್ರೆಸ್ ನವರು ರಾಗಿಣಿಯನ್ನು ಸೆಳೆದಿದ್ದಾರೆಂಬುದು ಊಹಾಪೋಹದ ಮಾತು ಎಂದು ಸಮರ್ಥಿಸಿಕೊಂಡಿದ್ದಾರೆ.
Comments