ಸಿದ್ದರಾಮಯ್ಯನವರ ಸೀಕ್ರೇಟ್ ರಿವೀಲ್ ಮಾಡಿದ ಸುಮಲತಾ…? : ಹಾಗಿದ್ರೆ ಮಾಜಿ ಸಿಎಂ ಬೆಂಬಲ…?!!!

ಮೈತ್ರಿ ಸರ್ಕಾರದ ಅಭ್ಯರ್ಥಿ ಪರ ಮಾತ್ತಿರುವ ಕೆಲ ದೋಸ್ತಿ ನಾಯಕರು ಯಾವ ಸ್ಥಿತಿಯಲ್ಲಿದ್ದಾರೆ ಗೊತ್ತಾ..? ಅವರ ಸೀಕ್ರೇಟ್ ಏನೆಂಬುದು ನನಗೆ ಗೊತ್ತು ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಪ್ರಚಾರದ ವೇಳೆ ಮಾತನಾಡಿದ್ದಾರೆ. ಅಂಬಿ ಕಾಂಗ್ರೆಸ್ ನಲ್ಲಿದ್ದವರು, ನಾನು ಮಂಡ್ಯದಿಂದ ಸ್ಪರ್ಧಿಸುತ್ತೇನೆ ಎಂದಾಗ ಕೆಲವರು ಒಪ್ಪಿಗೆ ಸೂಚಿಸಿದ್ರೆ ಮತ್ತೆ ಕಲೆವರು ಮೂಗು ಮುರಿದ್ರು. ಆದರೆ ಸಿದ್ದರಾಮಯ್ಯ ಏನೆಂಬುದು ನನಗೆ ಗೊತ್ತಿರುವ ವಿಚಾರ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ನವರ ಬ್ಲಾಕ್ ಮೇಲ್ ತಂತ್ರಕ್ಕೆ ಹೆದರಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಪ್ರಚಾರಕ್ಕೆ ಬಂದಿದ್ದಾರೆ. ಅವರು ಪಕ್ಷೇತರ ಅಭ್ಯರ್ಥಿಗೆ ಮತ ಹಾಕಬೇಡಿ ಎಂದು ಮುಕ್ತ ಮನಸ್ಸಿನಿಂದ ಹೇಳಿಲ್ಲ. ಬದಲಾಗಿ ಜೆಡಿಎಸ್ ನವರ ಬ್ಲಾಕ್ ಮೇಲ್ ಗೆ ಹೆದರಿ ಅವರ ಪರ ಪ್ರಚಾರ ಮಾಡಿದ್ದಾರೆ ಎಂದರು ಆರೋಪಿಸಿದ್ದಾರೆ. ಆದರೆ ಸುಮಲತಾ ಹೇಳಿಕೆ ಮುನ್ನವೇ ಸಿದ್ದರಾಮಯ್ಯ ಸುಮಲತಾ ಅವರನ್ನು, ಮತ ಕೇಳೋಕೆ ಬಂದ್ರೆ ಮಂಗಳಾರತಿ ಮಾಡಿ ಎಂದು ಹೇಳಿದ್ದರು. ಸಿದ್ದರಾಮಯ್ಯ ಹೇಳಿಕೆಗೆ ಅಂಬಿ ಅಭಿಮಾನಿಗಳಿಮದ ಭಾರೀ ವಿರೋಧ ವ್ಯಕ್ತವಾಯ್ತು. ಆದರೆ ಇದೀಗ ಸುಮಲತಾ ಅವರು ಮಾಜಿ ಸಿಎಂ ಅವರ ಹೇಳಿಕೆಯನ್ನು ಸಮರ್ಥಿಸಿಕೊಮಡಂತಿದೆ. ಸಿದ್ದರಾಮಯ್ಯ ಅವರು ಹೆಸರಿ ಗೀಗೆ ಮಾತನಾಡುತ್ತಿದ್ದಾರೆ. ಹೈಕಮಾಂಡ್ ಗೆ ದೂರು ಕೊಟ್ಟು ಅವರನ್ನು ಸಿದ್ದರಾಮಯ್ಯ ಮೇಲೆ ಒತ್ತಡ ಹಾಕಿದ್ದಾರೆ. ಮುಕ್ತ ಮನಸ್ಸಿನಿಂದ ಅವರು ಏನನ್ನು ಹೇಳಿಲ್ಲ ಎಂದಿದ್ದಾರೆ ಸುಮಲತಾ.
Comments