ಮಂಡ್ಯದಲ್ಲಿ ಮತ್ತೆ ಮರುಕಳಿಸಿದ ಬಸ್ ದುರಂತ...!!!

ಮಂಡ್ಯದಲ್ಲಿ ಅದೇನು ಗ್ರಹಚಾರ ಒಕ್ಕಿದೆಯೋ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿಂದೆಯೇ ಮಂಡ್ಯದ ಗುತ್ತಲಿನಲ್ಲಿ ಭೀಕರ ರಸ್ತೆ ಅಪಘಾತ ನಡೆದು ಅಮಾಯಕ ಪಾದಚಾರಿಗಳು ಜೀವ ತೆತ್ತರು. ಅಷ್ಟೇ ಅಲ್ಲದೇ ಮಂಡ್ಯದ ಬಳಿ ಖಾಸಗಿ ಬಸ್ ವೊಂದು ಹಳ್ಳಕ್ಕೆ ಉರುಳಿ ಅನೇಕ ಶಾಲಾ ಮಕ್ಕಳು ಅಸುನೀಗಿದರು. ಮೇಲಿನಿಂದ ಮೇಲೆ ಈ ಅವಘಡಗಳು ನಡೆಯುತ್ತಲೇ ಇವೆ. ಅಷ್ಟೇ ಅಲ್ಲದೇ ದಿವಂಗತ ಯೋಧ ಗುರು ಕೂಡ ಮಂಡ್ಯದವರೇ. ಒಟ್ಟಾರೆ ಮೇಲಿನಿಂದ ಮೇಲೆ ದುರಂತಗಗಳು ಸಂಭವಿಸುತ್ತಿವೆ.
ಇದೀಗ ಮಂಡ್ಯದ ಶ್ರಿರಂಗಪಟ್ಟಣದ ಬಳಿ ಮತ್ತೊಂದು ಖಾಸಗಿ ಬಸ್ ಹೊತ್ತು ಉರಿದ ಘಟನೆ ನಗರದಲ್ಲಿ ಇಂದು ಮುಂಜಾನೆ ಸಂಭವಿಸಿದೆ.ಚಾಲಕನ ಸಮಯ ಪ್ರಜ್ಞೆಯಿಂದ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರು ಅದೃಷ್ಟವಶಾತ್ ಬದುಕುಳಿದಿದ್ದಾರೆ.ಆದರೆ ಬಸ್ ಸಂಪೂರ್ಣವಾಗಿ ಭಸ್ಮವಾಗಿದೆ. ಒಂದೊಮ್ಮೆ ಪ್ರಯಾಣಿಕರು ಅದರಲ್ಲಿದ್ದಿದ್ದರೆ ಸಜೀವ ದಹನವಾಗುತ್ತಿದ್ದರು. ಈ ಅನಾಹುತ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಸಂಭವಿಸಿದೆ. ಅಂದಹಾಗೇ ಬಸ್ ಕೇರಳದ ವೈನಾಡ್ ನಿಂದ ಬೆಂಗಳೂರಿಗೆ ಬರುತ್ತಿತ್ತು ಎನ್ನಲಾಗಿದೆ. ಬಸ್ ನಲ್ಲಿ ಪ್ರಯಾಣಿಕರ ಬೆಲೆ ಬಾಳುವ ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದು ಬಂದಿದೆ.
Comments