ಗೂಗಲ್ ಪೇ ಬಳಸ್ತಿದ್ದೀರಾ...!!! ಹಾಗಾದ್ರೆ ಬಳಸುವ ಮುನ್ನ ಇದನ್ನೊಮ್ಮೆ ಓದಿ..!!!
ರಾಜ್ಯದಲ್ಲಿ ನೋಟ್ ಬ್ಯಾನ್ ಆದ ಬಳಿಕ ಸಾಕಷ್ಟು ಸಂಕಷ್ಟಗಳನ್ನು ಎದುರಿಸುವಂತೆ ಆಯಿತು...ತದ ನಂತರ ಕ್ಯಾಶ್ ಲೆಸ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಲಾಯಿತು.. ವಿವಿಧ ಬ್ಯಾಂಕ್ ಗಳು ಕಂಪನಿಗಳು ಕ್ಯಾಶ್ ಲೆಸ್ ವ್ಯವಹಾರಕ್ಕಾಗಿಯೇ ಪ್ರತ್ಯೇಕವಾದ ವ್ಯವಸ್ಥೆಗಳನ್ನು ಮಾಡಿಕೊಂಡವು... ಅಂತಹ ವ್ಯವಸ್ಥೆಗಳಲ್ಲಿ ಗೂಗಲ್ ಪೇ ಕೂಡ ಒಂದು.. ಗೂಗಲ್ ಪೇಯನ್ನು ತುಂಬಾ ಜನ ಬಳಸುತ್ತಾರೆ... ಕ್ಯಾಶ್ ಬ್ಯಾಕ್ ಸಿಗುವ ಕಾರಣಕ್ಕಾಗಿ ಈ ಆ್ಯಪ್ ಅನ್ನು ಹೆಚ್ಚು ಜನ ಬಳಸುತ್ತಾರೆ.
ಗೂಗಲ್ ಪೇ ಕೂಡ ಆಪ್ ಮೂಲಕ ಸಾರ್ವಜನಿಕರ ನಗದು ವರ್ಗಾವಣೆ ವ್ಯವಹಾರ ನಡೆಸುತ್ತಿದೆ. ಆದರೆ, ದೆಹಲಿ ಹೈಕೋರ್ಟ್ ಗೂಗಲ್ ಪೇ ಮೊಬೈಲ್ ಆಪ್ ಬಗ್ಗೆ ಇದೀಗ ಪ್ರಶ್ನಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ಅನುಮತಿ ಇಲ್ಲದೆ ಹೇಗೆ ನಗದು ವರ್ಗಾವಣೆ ವ್ಯವಹಾರ ನಡೆಸುತ್ತಿದೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿದೆ.. ನಗದು ವರ್ಗಾವಣೆಗೆ ಮಾನ್ಯತೆ ಪಡೆದ ಸಂಸ್ಥೆಗಳ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ್ದು, ಆ ಪಟ್ಟಿಯಲ್ಲಿ ಗೂಗಲ್ ಪೇ ಹೆಸರು ಇಲ್ಲ. ಯಾವ ಆಧಾರದಲ್ಲಿ ವ್ಯವಹಾರ ನಡೆಸುತ್ತಿದೆ ಎಂದು ಪ್ರಶ್ನಿಸಿ ಅಭಿಜಿತ್ ಮಿಶ್ರಾ ಅವರು ದೆಹಲಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದರು.ಈ ಬಗ್ಗೆ ಕೇಂದ್ರಿಯ ಬ್ಯಾಂಕ್ ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗುತ್ತಿದೆ.. ಒಂದು ವೇಳೆ ಗೂಗಲ್ ಪೇನಲ್ಲಿ ಹಣ ವರ್ಗಾವಣೆಯ ಸಮಯದಲ್ಲಿ ಏನಾದರೂ ಹೆಚ್ಚು ಕಡಿಮೆ ಆದರೆ ಅದಕ್ಕೆ ಬ್ಯಾಂಕ್ಗಳು ಜವಬ್ದಾರರು ಅಲ್ಲ ಎಂದರು ಕೂಡ ಅಚ್ಚರಿ ಪಡಬೇಕಿಲ್ಲ.. ಒಟ್ಟಿನಲ್ಲಿ ಗೂಗಲ್ ಪೇ ಬಳಸುವ ಮುನ್ನ ಬಳಕೆದಾರರು ಎಚ್ಚರದಿಂದಿರಿ
Comments