ಬಿಗ್ ಶಾಕ್ : ಪ್ರಚಾರದ ವೇಳೆ ರಾಹುಲ್ ಗಾಂಧಿ ಕೊಲೆ ಯತ್ನ…!!!

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದಿನಿಂದ ಶುರುವಾಗಿದೆ. ಈ ಮಧ್ಯೆ ಕಾಂಗ್ರೆಸ್'ನ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಕೊಲೆ ಮಾಡಲು ಸಂಚು ನಡೆದಿದೆ ಎಂಬ ಕಾಂಗ್ರೆಸ್ ಆರೋಪ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ನಿನ್ನೆಯಷ್ಟೇ ಅಮೇಥಿಯಲ್ಲಿ ನಾಮಪತ್ರ ಸಲ್ಲಿಸಿದ ವೇಳೆ ಸ್ನೈಪರ್ ಗನ್ ಲೇಸರ್ ಬೆಳಕು ರಾಹುಲ್ ಗಾಂಧಿ ಅವರ ಮೇಲೆ ಬಿದ್ದಿದೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಮಧಿಯನ್ನು ಯಾರೋ ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಕಾಂಗ್ರೆಸ್ ಲೀಡರ್ ಮಾತುಗಳು ರಾಹುಲ್ ಅಭಿಮಾನಿಗಳನ್ನು ನಿದ್ದೆಗೆಡಿಸಿದೆ.
ಈ ಕುರಿತು ಗೃಹ ಸಚಿವಾಲಯಕ್ಕೆ ಪತ್ರ ಬರೆದಿರುವ ಕಾಂಗ್ರೆಸ್, ಈ ಹಿಂದೆಯೂ 7 ಬಾರಿ ರಾಹುಲ್ ಗಾಂಧಿಯನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು. ಇದೇ ಮೊದಲೇನಲ್ಲ ಎಂದು ತಿಳಿಸಿದೆ. ಅಮೇಥಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ರೋಡ್ ಶೋ ಕಾರ್ಯಕ್ರಮ ನಡೆಯಿತು. ಈ ವೇಳೆ ಸ್ನೈಪರ್ ಗನ್ ಮೂಲಕ ರಾಹುಲ್ ಹತ್ಯೆಗೆ ಸಂಚು ರೂಪಿಸಲಾಗಿದ್ದು, ಹಲವು ಬಾರಿ ರಾಹುಲ್ ಮೇಲೆ ಲೇಸರ್ ಬೆಳಕು ಬಿದ್ದಿರುವುದು ಆತಂಕ ಮೂಡಿಸಿದೆ ಎಂದು ಕಾಂಗ್ರೆಸ್ ವಾದಿಸಿದೆ. ಆದರೆ ಈ ಬಗ್ಗೆ ಕಾಂಗ್ರೆಸ್ ಯಾವುದೇ ಸಾಕ್ಷಿ, ದಾಖಲೆಗಲನ್ನು ನೀಡಿಲ್ಲವಾದರೂ, ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಜೀವಕ್ಕೆ ಅಪಾಯವಿದೆ ಎಂದು ಪರತೋಕ್ಷವಾಗಿ ರಾಜ್ಯ ಸರ್ಕಾರದ ಭದ್ರತೆ ಕುರಿತು ಅನುಮಾನ ವ್ಯಕ್ತಪಡಿಸಿದೆ.
Comments