' ಬೆನ್ನಿಗೆ ಚೂರಿ ಹಾಕೋ ಕೆಲಸ ಮಾಡಿದ ಡಿ ಬಾಸ್ ಅಭಿಮಾನಿಗಳು' : ಕ್ಯಾಂಪೇನ್ ವೇಳೆ ಸುಮಲತಾಗೆ ಕಾದಿತ್ತು ಬಿಗ್ ಶಾಕ್...?!!!

ದರ್ಶನ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಗಿರೀಶ್ ಮತ್ತು ಅವರ ಬಳಗದಿಂದ ಇದೀಗ ಸುಮಲತಾಗೆ ದೊಡ್ಡ ಆಘಾತವಾಗಿದೆ. ಒಂದು ವಾರದ ಹಿಂದೆ ಸುಮಲತಾ –ದರ್ಶನ್ ಜೊತೆಗಿದ್ದ ಗಿರೀಶ್ ಎಂಬುವವರು ಇದೀಗ ವರಸೆ ಬದಲಾಯಿಸಿದ್ದಾರೆ. ಒಂದು ವಾರದ ಹಿಂದೆ ದರ್ಶನ್ ಜೊತೆ ಸುಮಲತಾಗೆ ಸಪೋರ್ಟ್ ಮಾಡುತ್ತಾ ಹಳ್ಳಿ-ಹಳ್ಳಿಗಳಲ್ಲೂ ಕ್ಯಾಂಪೇನ್ ಮಾಡುತ್ತಿದ್ದವರು ಇದೀಗ ಜೆಡಿಎಸ್ ಗೆ ಬೆಂಬಲ ಸೂಚಿಸ್ತಾ ಇದ್ದಾರೆ....ತಾವ್ಯಾಕೆ ಜೆಡಿಎಸ್ ಗೆ ಹೋದ್ವಿ ಎಂಬುದಕ್ಕೆ ಕಾರಣ ಕೊಟ್ಟಿದ್ದಾರೆ ಡಿ ಬಾಸ್ ಫ್ಯಾನ್ಸ್.
ಮೊನ್ನೆ ತಾನೇ ದರ್ಶನ್ ಜೊತೆ ಮಾತನಾಡಿದ ಗಿರೀಶ್, ಚುನಾವಣೆ ಮುಗಿಯೋ ತನಕ ನಾವ್ ಖಂಡಿತಾ ನಿಮ್ಮೊಂದಿಗೆ ಕ್ಯಾಂಪೇನ್ ಗೆ ಬರ್ತೀವಿ, ನೀವ್ ಹೋದ ಕಡೆ ನಾವು ಇರ್ತೀವಿ ಎಂದು ಭರವಸೆ ನೀಡಿದವರು ದಿಢೀರ್ ಅಂತಾ ಉಲ್ಟ ಹೊಡೆದಿದ್ದಾರೆ. ಎಂದು ಹೇಳಲಾಗುತ್ತಿದೆ. ಆದರೆ....ಇದೀಗ ಗಿರೀಶ್ ಅಷ್ಟೇ ಅಲ್ಲದೇ ಅವರ ಜೊತೆ ಕೆಲ ಡಿ ಬಾಸ್ ಅಭಿಮಾನಿಗಳು ನಿಖಿಲ್ ಪರ ಮತಯಾಚನೆ ಮಾಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಕಟ್ಟಾ ಅಭಿಯಾನಿಯಾಗಿದ್ದ ಗಿರೀಶ್ ಮಾತ್ರವಲ್ಲದೇ ಅವರ ಹಿಂದೆ ಒಂದೂವರೆ ಸಾವಿರದ ಯುವಕರು ಇದೀಗ ಸುಮಲತಾ ಬಿಟ್ಟು ನಿಖಿಲ್ ಕುಮಾರ ಸ್ವಾಮಿ ಪರ ಪ್ರಚಾರಕ್ಕೆ ತೆರಳುತ್ತಿದ್ದಾರೆ. ಮೊನ್ನೆ ಮೊನ್ನೆ ತನಕ ಸುಮಲತಾ ಜೊತೆಗಿದ್ದ ಡಿ ಬಾಸ್ ಅಭಿಮಾನಿ ಗಿರೀಶ್ ನಿಲುವು ಬದಲಾಯಿಸಿಕೊಂಡಿದ್ದಾರೆ. ಇಂದಿನಿಂದಲೇ ಗಿರೀಶ್ ಅಂಡ್ ಟೀಂ ನಿಖಿಲ್ ಜೊತೆ ಪ್ರಚಾರಕ್ಕಿಳಿಯುತ್ತಿದ್ದಾರೆ. ನಿಖಿಲ್ ಗೆದ್ದರೆ ಜಿಲ್ಲೆಗೆ ಒಳ್ಳೊಳ್ಳೆ ಯೋಜನೆಗಳು ಬರಬಹುದು, ನಮ್ಮ ಜಿಲ್ಲೆ ಅಭಿವೃದ್ಧಿಯಾಗುತ್ತದೆ ಎಂದು ಜೆಡಿಎಸ್ ಪರ ನಿಲ್ಲುತ್ತಿದ್ದಾರಂತೆ ಗಿರೀಶ್. ಇವರು ಕೆ ಆರ್ ಎಸ್ ನವರಾಗಿದ್ದು ತಮ್ಮ ಯುವಕ ಪಡೆಯಿಂದ ಜೆಡಿಎಸ್ ಪರ ವಾಗಿ ಇಂದಿನಿಂದಲೇ ಕ್ಯಾಂಪೇನ್ ಮಾಡಲಿದ್ದಾರೆ.
Comments