ರಾಜಕೀಯ ವಯಯದಲ್ಲಿ ಭಾರೀ ಚರ್ಚೆಗೆ ಕಾರಣವಾಯ್ತು ರಾಕಿಂಗ್ ಸ್ಟಾರ್ ಕೊಟ್ಟಿರುವ ಈ ಹೇಳಿಕೆ..!!

10 Apr 2019 11:02 AM | General
539 Report

ಮಂಡ್ಯ ಲೋಕಸಭಾ ಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಣರಂಗವಾಗುತ್ತಿದೆ.. ಅದರಲ್ಲೂ ಪ್ರಚಾರದ ವೇಳೆಯಲ್ಲಿ ಒಬ್ಬರಿಗೆ ಒಬ್ಬರು ಟಾಂಗ್ ಕೊಟ್ಟುಕೊಂಡೆ ಪ್ರಚಾರ ಮಾಡುತ್ತಿದ್ದಾರೆ. ಒಂದು ಕಡೆ ದೋಸ್ತಿ ನಾಯಕರ ಅಭ್ಯರ್ಥಿಯಾದ ನಿಖಿಲ್, ಸುಮಲತಾ ಪರ ಪ್ರಚಾರಕ್ಕೆ ಬಂದಿರುವ ಯಶ್ ಗೆ ಟಾಂಗ್ ಕೊಡುತ್ತಲೆ ಇದ್ದಾರೆ. ಬಾಡಿಗೆ ಮನೆ ವಿಚಾರವನ್ನು ಎತ್ತಿಕೊಂಡು ಮಾತನಾಡಿದ ನಿಖಿಲ್ಗೆ ಯಶ್ ಸರಿಯಾಗಿಯೇ ಟಾಂಗ್ ಕೊಟ್ಟಿದ್ದರು.. ಬಾಡಿಗೆ ಕಟ್ಟದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡುತ್ತಾರೆ ಎಂದು ನಿಖಿಲ್ ಹೇಳಿದ್ದಾರೆ. ಇದಾದ ಬಳಿಕ ಮಾತಿನ ವರಸೆಯನ್ನು ಬದಲಿಸಿರುವ ಯಶ್, ತಮ್ಮ ವಿರುದ್ಧದ ಆರೋಪಗಳಿಗೆ ತಿರುಗೇಟು ನೀಡತೊಡಗಿದ್ದಾರೆ.

ತಿರುಗೇಟು ನೀಡುವ ಸಂದರ್ಭದಲ್ಲಿ ಅವರು ನೀಡಿರುವ ಹೇಳಿಕೆಯೊಂದು ಭಾರಿ ಚರ್ಚೆಗೆ ಇದೀಗ ಕಾರಣವಾಗಿದೆ. ಅಂಬರೀಶ್ ಅಣ್ಣನ ಹೆಂಡತಿ ಯಾರು ಅಂತ ಮಂಡ್ಯ ಜನತೆಗೆ ಗೊತ್ತಿಲ್ವಾ? ಅಂಬರೀಶ್ ಅಣ್ಣನಿಗೆ ಇರೋದು ಒಬ್ಬರೇ ಹೆಂಡತಿ. ಇದು ರಾಜ್ಯದ ಜನರಿಗೂ ಗೊತ್ತಿದೆ. ಮಂಡ್ಯ ಜಿಲ್ಲೆಯ ಜನರಿಗೆ ಯಾವುದೇ ಗೊಂದಲವಿಲ್ಲ ಎಂದು ಹೇಳಿದ್ದಾರೆ. ಯಶ್ ನೀಡಿದ ಒಬ್ಬರೇ ಹೆಂಡತಿ ಹೇಳಿಕೆ ಕುರಿತಾಗಿ ಭಾರೀ ಚರ್ಚೆಯೇ ನಡೆದಿದೆ. ಅವರು ಈ ಹೇಳಿಕೆ ನೀಡಿ ಯಾರಿಗೆ ಟಾಂಗ್ ಕೊಟ್ಟಿದ್ದಾರೆ ಎಂದೆಲ್ಲಾ ಚರ್ಚೆಯಾಗಿದೆ ಎನ್ನಲಾಗಿದೆ.. ಒಟ್ಟಾರೆಯಾಗಿ ನಿಖಿಲ್ ಕುಮಾರಸ್ವಾಮಿಯವರು ಸುಖಾಸುಮ್ಮನೆ ಯಶ್ ಅವರನ್ನು ಕಾಲು ಎಳೆಯಲು ನೋಡುತ್ತಿದ್ದಾರೆ. ಅವರವರ ಪ್ರಚಾರ ಅರವರಿಗೆ ಬಿಟ್ಟಿದ್ದು, ಅದನ್ನು ಬಿಟ್ಟು ಬೇರೆಯವರ ವಿಷಯಕ್ಕೆ ತಲೆ ಹಾಕಬಾರದು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೂ ಕೂಡ ರಾಜಕೀಯದಲ್ಲಿ ಫ್ಯಾಮಿಲಿಯ ವಿಚಾರ ತರಬಾರದು ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

Edited By

Manjula M

Reported By

Manjula M

Comments