ರಾಹುಲ್ ಗಾಂಧಿಗೆ ಹೀರೋಯಿನ್ ಫಿಕ್ಸ್...?!!!
ಇತ್ತೀಚಿಗೆ ಕೆಲ ಸ್ಟಾರ್ ಗಳ, ರಾಜಕೀಯ ನಾಯಕರ ಬಯೋಪಿಕ್ ಗಳು ಹೆಚ್ಚಾಗುತ್ತಿವೆ. ಅವರ ಜೀವನವನ್ನು ತೆರೆಗೆ ತರೋ ಪ್ರಯತ್ನ ಮಾಡುತ್ತಿದ್ದಾರೆ ಕೆಲ ನಿರ್ದೇಶಕರು. ಮೋದಿಯ ನಂತರ ಜಯಲಲಿತಾ ಇದೀಗ ರಾಹುಲ್ ಗಾಂಧಿ ಬಯೋಪಿಕ್ ರೆಡಿಯಾಗುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ರಾಹಗುಲ್ ಗಾಂಧಿಗೆ ಹೀರೋಯಿನ್ ಹುಡುಕಾಟ ಭರ್ಜರಿಯಾಗಿಯೇ ನಡೆಯುತ್ತಿದ್ಯಂತೆ.
ಅಷ್ಟಕ್ಕೂ ರಾಹುಲ್ ಗಾಂಧಿ ಸಿನಿಮಾದಲ್ಲಿ ನಾಯಕಿಯಾರು ಗೊತ್ತಾ..? ಹೀಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿಗೆ ವಿದ್ಯಾರ್ಥಿಗಳು ಈ ಪ್ರಶ್ನೆ ಕೇಳಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದ ಈ ಪ್ರಶ್ನೆಗೆ ಉತ್ತರ ಕೊಡಲು ರಾಹುಲ್ ಗಾಂಧಿ ಸ್ವಲ್ಪ ಯೋಚಿಸಿದ್ರಂತೆ.ಈ ಪ್ರಶ್ನೆಗೆ ಉತ್ತರ ನೀಡಿದ ರಾಹುಲ್ ಗಾಂಧಿ, "ನಾನು ಕೆಲಸವನ್ನೇ ಮದುವೆಯಾಗಿದ್ದೇನೆ" ಎಂದು ಉತ್ತರಿಸಿ ಸುಮ್ಮನಾದರು! 'ನಿಮ್ಮ ಬಯೋಪಿಕ್ ನಲ್ಲಿ ಯಾವ ನಟಿ ಹೀರೋಯಿನ್ ಆಗಿ ನಟಿಸುತ್ತಾರೆ ?' ಎಂಬ ಪ್ರಶ್ನೆಗೂ, 'ನಾನು ಕೆಲಸವನ್ನೇ ಮದುವೆಯಾಗಿದ್ದೇನೆ' ಎಂಬ ಉತ್ತರ ಸಿಕ್ಕಿತಂತೆ. ಅಷ್ಟಕ್ಕೂ ಅವರ ಹೇಳಿಕೆಗೂ ಉತ್ತರಕ್ಕೂ ಸಂಬಂಧ ಕಲ್ಪಿಸುವುದಕ್ಕೆ ಹೋದರೆ, ರಾಹುಲ್ ಗಾಂಧಿ ಅವರ ಚಿತ್ರದಲ್ಲಿ ಹೀರೋಯಿನ್ ಇರುವುದಿಲ್ಲವೇನೋ ಎಂಬ ಉತ್ತರ ಸಿಗುತ್ತದೆ! ಆದರೆ ಇದರ ಬಗ್ಗೆ ಅಷ್ಟೇನು ಸುಳಿವು ಸಿಗದೇ ಇದ್ರೂ ಹೀರೋಯಿನ್ ಫಿಕ್ಸ್ ಆಗಿದ್ದಾರೆ ಎಂಬ ಮಾತು ಯಾವ ದೃಷ್ಟಿಯಲ್ಲಿ ಹೇಳಿದ್ದಾರೆ ಎಂಬುದು ಮಾತ್ರ ಬಗೆಹರಿಯುತ್ತಿಲ್ಲ. ರಾಹುಲ್ ತನ್ನ ರಿಯಲ್ ಲೈಫ್ ನಲ್ಲಿ ಇನ್ನು ಮದುವೆಯಾಗದೇ ಬ್ರಹ್ಮಚಾರಿಯಾಗಿಯೇ ಇದ್ದಾರೆ. ಹೋದಲೆಲ್ಲಾ ಮದುವೆ ಬಗ್ಗೆ ಪ್ರಸ್ತಾಪ ಮಾಡುವವರಿಗೆ ರಾಹುಲ್ ಕಾಂಗ್ರೆಸ್ ಪಕ್ಷವನ್ನು ನಾನು ಅದಾಗಲೇ ಮದುವೆಯಾಗಿದ್ದೇನೆ ಎಂದು ಉತ್ತರಿಸಿದ್ದಾರೆ.
Comments