ಹೊಲ ಉಳೋಕೆ ಹೋದ್ರಂತೆ ನಟಿ ಹೇಮಮಾಲಿನಿ : ಇದೇನಿದು ಹೊಸ ಅವತಾರ....!!!

ಲೋಕ ಸಭೆಯಲ್ಲಿ ಸ್ಪರ್ಧಿಸುತ್ತಿರುವ ನಟಿ ಹೇಮಮಾಲಿನಿ ಇತ್ತೀಚಿಗಷ್ಟೇ ಹೊಲ ಗದ್ದೆಗಳಿಗೆ ನುಗ್ಗಿ ಬೆಳೆ ಕಟಾವು ಮಾಡಿ ನಾನು ರೈತ ಮಹಿಳೆ ಎಂದು ತೋರಿಸಿ ಕೊಟ್ಟಿದ್ದರು. ಮಥುರಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿರುವ ಡ್ರೀಮ್ ಗರ್ಲ್ ಚುನಾವಣೆ ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಗೋವರ್ಧನ ಪ್ರದೇಶದ ಗೋಧಿ ಹೊಲಕ್ಕೆ ತೆರಳಿ ಬೆಳೆಗಳನ್ನು ಕಟಾವು ಮಾಡಿದ್ದಲ್ಲದೆ ತೆನೆಯನ್ನು ಹೊತ್ತಿದ್ದ ಹೇಮಾ ಮಾಲನಿ ಇದೀಗ ಹೊಲವೊಂದರಲ್ಲಿ ಟ್ರ್ಯಾಕ್ಟರ್ ಓಡಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಹೇಮಾ ಮಾಲಿನಿಯ ಈ ಕೆಲಸ ನೋಡಿ ಕೆಲ ವಿರೋಧ ಪಕ್ಷದ ನಾಯಕರು ಟೀಕೆ ಮಾಡಿದ್ದರು. ರಾಜಕೀಯದ ವರಸೆ ಇನ್ನೆಷ್ಟು ದಿನ ಎಂದು ಅಣಕ ಮಾಡಿದ್ದಾರೆ. ಈ ಪ್ರತಿಕ್ರಿಯೆಗಳಿಗೆ ರಿಯಾಕ್ಟ್ ಮಾಡಿರುವ ಹೇಮಾ ಮಾಲಿನಿ , 'ನಾನೊಬ್ಬ ನಟಿ, ಸೆಲೆಬ್ರಿಟಿ. ಇದನ್ನು ನಾನು ಮುಂಬೈನಲ್ಲಿ ನೋಡಲು ಸಾಧ್ಯವಿಲ್ಲ.ನನಗೂ ಹಳ್ಳಿ ಅಂದ್ರೆ ಇಷ್ಟ. ರೈತ ಮಹಿಳೆಯರೆಂದರೇ ಇಷ್ಟ. ಅಲ್ಲಿನ ಸೊಬಗನ್ನು ಸವಿಯ ಬೇಕೆಂದು ಹೀಗೆಲ್ಲ ಮಾಡುತ್ತಿದ್ದೇನೆ.ಒಂದು ವೇಳೆ ನಾನು ನಟಿಸಿದ್ದರೂ ಅದು ತಮಾಷೆಯಷ್ಟೇ. ಅದರಲ್ಲಿ ತಪ್ಪೇನಿದೆ? ಮುಂಬೈನಲ್ಲಿ ಈ ಚಿತ್ರ ನೋಡಿದ ಎಲ್ಲರೂ ಖುಷಿ ಪಡುತ್ತಿದ್ದಾರೆ. ಧರ್ಮೇಂದ್ರ (ಪತಿ) ತುಂಬಾ ಸಂತೋಷಪಟ್ಟುಕೊಂಡರು. ಬಹಳ ಸುಂದರವಾಗಿದೆ ಎಂದರು' ಎಂಬುದಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೆಲ್ಲಾ ನೋಡಿ ಕೆಲ ವಿರೋಧಿಗಳು ಇದೇನು ರಾಜಕೀಯ ಗಿಮಿಕ್ಕಾ ಅಂತಿದ್ದಾರೆ…!!!
Comments