ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾಂಪೇನ್’ಗೆ ಬರಲ್ವಂತೆ..!! ಕಾರಣ ಏನ್ ಗೊತ್ತಾ..?

ಮಂಡ್ಯದಲ್ಲಿ ಲೋಕಸಭಾ ಕಾವು ಜೋರಾಗಿಯೇ ಇದೆ.. ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಒಂದು ಕಡೆ ಆದರೆ, ದೋಸ್ತಿ ಅಭ್ಯರ್ಥಿಯಾಗಿ ಮತ್ತೊಂದು ಕಡೆ ನಿಖಿಲ್ ಅಖಾಡಕ್ಕೆ ಇಳಿದಿದ್ದಾರೆ.. ಇಬ್ಬರು ಕೂಡ ಭರ್ಜರಿ ಪ್ರಚಾರವನ್ನು ಮಾಡುತ್ತಿದ್ದಾರೆ… ಬಿಸಿಲು ಎನ್ನದೆ ಮಂಡ್ಯದ ಹಳ್ಳಿ ಹಳ್ಳಿಗಳಲ್ಲೂ ಕೂಡ ಪ್ರಚಾರವನ್ನು ಮಾಡುತ್ತಿದ್ದಾರೆ. ಸುಮಲತಾ ಪರವಾಗಿ ಸ್ಯಾಂಡಲ್ ವುಡ್ ಸ್ಟಾರ್ಸ್ ಗಳು, ಹಾಗೂ ನಿಖಿಲ್ ಪರವಾಗಿ ರಾಜಕೀಯ ಗಣ್ಯರು ಕ್ಯಾಂಪೇನ್ ಮಾಡುತ್ತಿದ್ದಾರೆ. ಸುಮಲತಾ ಪರ ದರ್ಶನ್ ಹಾಗೂ ಯಶ್ ಬಿಡುವಿಲ್ಲದೆ ಪ್ರಚಾರ ಮಾಡುತ್ತಿದ್ದಾರೆ.. ಆದರೆ ಇದೀಗ ದರ್ಶನ್ ಪ್ರಚಾರಕ್ಕೆ ಬ್ರೇಕ್ ಹಾಕಿದ್ದಾರೆ..
4 ದಿನಗಳಿಂದ ಬಿಡುವಿಲ್ಲದೆ ಪ್ರಚಾರ ನಡೆಸಿದ್ದ ದರ್ಶನ್ ಇಂದಿನಿಂದ 4 ದಿನಗಳ ಕಾಲ ಪ್ರಚಾರಕ್ಕೆ ಬಿಡುವು ನೀಡಿದ್ದಾರೆ. ಬಲಗೈ ನೋವಿನ ನಡುವೆಯೂ ಅವರು ಪ್ರಚಾರದಲ್ಲಿ ಭಾಗಿಯಾಗಿದ್ದರು. ಅಭಿಮಾನಿಗಳ ನೂಕುನುಗ್ಗಲು ಉಂಟಾಗಿ ಕೈಕುಲುಕುವುದು, ಮುತ್ತಿಕ್ಕುತ್ತಿದ್ದ ಕಾರಣ ಕೈ ನೋವು ಹೆಚ್ಚಾಗಿದೆ. ಅಲ್ಲದೆ, ವಾಹನ ಇಳಿಯುವ ಸಂದರ್ಭದಲ್ಲಿ ಮತ್ತೆ ಪೆಟ್ಟಾಗಿದೆ. ನಿರಂತರವಾಗಿ ನಿಂತುಕೊಂಡೇ ಪ್ರಚಾರ ನಡೆಸಿರುವ ಕಾರಣ ಬೆನ್ನು ನೋವಾಗಿದೆ ಎನ್ನಲಾಗಿದ್ದು, 4 ದಿನಗಳ ಕಾಲ ಚಿಕಿತ್ಸೆ, ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚನೆಯನ್ನು ನೀಡಿದ್ದಾರೆ.. ಹಾಗಾಗಿ ನಾಲ್ಕು ದಿನ ಆದ ನಂತರ ಮತ್ತೆ ಅವರು ಪ್ರಚಾರವನ್ನು ಪ್ರಾರಂಭ ಮಾಡಲಿದ್ದಾರೆ. ಒಟ್ಟಾರೆಯಾಗಿ ಸುಮಲತಾ ಗೆಲುವುಗಾಗಿ ಟೊಂಕ ಕಟ್ಟಿ ನಿಂತಿರುವ ಸ್ಯಾಂಡಲ್ ವುಡ್ ನ ಜೋಡೆತ್ತುಗಳು ಸುಮಲತಾ ಅವರನ್ನು ಗೆಲ್ಲಿಸಿಯೇ ತೀರುತ್ತೇವೆ ಎಂಬ ಪಣ ತೊಟ್ಟಿದ್ಧಾರೆ.
Comments