ಸುಮಲತ ಪರ ಪ್ರಚಾರಕ್ಕೆ ಬರ್ತಾರಂತೆ ಈ ಸ್ಟಾರ್ ಪತ್ನಿಯರು..!!

ಮಂಡ್ಯ ಚುನಾವಣೆಯ ಅಖಾಡ ಸದ್ಯ ರಣರಂಗವಾಗಿದೆ.ಒಂದು ಕಡೆ ದೋಸ್ತಿಗಳ ಕಾದಾಟ ಮತ್ತೊಂದು ಕಡೆ ಪಕ್ಷೇತರ ಅಭ್ಯರ್ಥಿಯ ಕಾದಾಟ ಜೋರಾಗಿಯೇ ಇದೆ.. ಇತ್ತ ಸುಮಲತಾ ಪರ ಗಾಂಧಿನಗರದ ಸ್ಟಾರ್ಸ್ ಗಳು ಕ್ಯಾಂಪೇನ್ ಶುರು ಮಾಡಿಕೊಂಡಿದ್ದಾರೆ. ನಟ ದರ್ಶನ್ ಹಾಗು ಯಶ್ ಬಿಸಿಲಿನಲ್ಲಿ ಬಿಡುವಿಲ್ಲದೆ ಪ್ರಚಾರವನ್ನು ಮಾಡುತ್ತಿದ್ದಾರೆ. ಇದರಿಂದ ದೋಸ್ತಿಗಳು ಕಂಗಾಲಾಗಿ ಬಿಟ್ಟಿದ್ದಾರೆ. ಇದೀಗ ಸುಮಲತಾ ಪರ ಪ್ರಚಾರ ಮಾಡಲು ಜೋಡೆತ್ತುಗಳ ಮಡದಿಯರಾದ ರಾಧಿಕ ಪಂಡಿತ್ ಹಾಗೂ ವಿಜಯಲಕ್ಷ್ಮಿ ಬರುತ್ತಾರಂತೆ..
ಯಶ್ ಹಾಗೂ ದರ್ಶನ್ ಇಬ್ಬರೂ ಬಿಸಿಲನ್ನು ಕೂಡಾ ಲೆಕ್ಕಿಸದೆ ಸುಮಲತಾ ಅಮ್ಮನಿಗಾಗಿ ಮಂಡ್ಯದಲ್ಲೆಲ್ಲಾ ಮತಯಾಚನೆ ಮಾಡುತ್ತಿದ್ದಾರೆ. ಏನೇ ಆಗಲಿ ಸುಮಲತ ಅವರನ್ನು ಗೆಲ್ಲಿಸಿಯೇ ತೀರಬೇಕೆಂದು ಗಟ್ಟಿ ನಿರ್ಧಾರ ಮಾಡಿ ವಿರೋಧಿಗಳ ಟೀಕೆಗಳಿಗೆ, ಕಿವಿ ಕೊಡದೆ ಮತ ಬೇಟೆ ಮಾಡುತ್ತಿದ್ದಾರೆ. ಆದರೆ ಇದೀಗ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಈ ಇಬ್ಬರು ಸ್ಟಾರ್ ನಟರ ಪತ್ನಿಯರು ಕೂಡಾ ಸುಮಲತ ಅವರ ಪರವಾಗಿ ಪ್ರಚಾರ ಕಾರ್ಯಕ್ಕೆ ಬರಲಿದ್ದಾರಂತೆ. ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಬಾಣಂತಿಯಾಗಿದ್ದರೂ ಕೂಡ ಒಂದು ದಿನದ ಕ್ಯಾಂಪೇನ್ ನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಅದೇ ರೀತಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಕೂಡಾ ಅದೇ ದಿನ ಕ್ಯಾಂಪೇನ್ ನಲ್ಲಿ ಭಾಗವಹಿಸುವ ಮೂಲಕ ಸುಮಲತ ಅವರ ಪರವಾಗಿ ಮತಯಾಚನೆ ಮಾಡಲಿದ್ದಾರೆ.
Comments