ಜನಪ್ರಿಯ ಟಿಕ್ ಟಾಕ್ ಆ್ಯಪ್ ಬ್ಯಾನ್…?!!
ಯುವಜನರ ಕಲೆಯನ್ನು ಪ್ರದರ್ಶನ ಮಾಡಲು ಟಿಕ್ ಟಾಕ್ ಆ್ಯಪ್ ಒಂದು ಅದ್ಭುತ ವೇದಿಕೆಯೆಂದು ಆರಂಭದಲ್ಲಿ ಸಾಕಷ್ಟು ಅಭಿಪ್ರಾಯಗಳು ಕೇಳಿಬಂತು. ಮಕ್ಕಳೆನ್ನದೇ ಇಳಿ ವಯಸ್ಸಿನವರು ಟಿಕ್ ಟಾಕ್ ಆ್ಯಪ್ ನಿಂದಾಗಿ ಜನಪ್ರಿಯರಾಗಿದ್ದಾರೆ. ಆದರೆ ಇದೀಗ ಇದರ ಜೊತೆಗೆ ಟಿಕ್ ಟಾಕ್ ಆ್ಯಪ್ ನಿಂದಾಗಿ ಮಾನಹಾನಿ ಆಗುತ್ತಿದೆ ಎಂಬ ಆರೋಪಗಳು ಹೆಚ್ಚಾಗುತ್ತಿವೆ. ಚೀನಾ ಮೂಲದ ಈ ಆ್ಯಪ್ ನನ್ನು ಡೌನ್’ಲೋಡ್ ಮಾಡುವುದನ್ನು ನಿಷೇಧಿಸುವಂತೆ ಮದ್ರಾಸ್ ಹೈ ಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ.
'ಅಶ್ಲೀಲ ಮತ್ತು ಅಸಭ್ಯ ವಿಡಿಯೋಗಳು ಈ ಆ್ಯಪ್ ನಿಂದಾಗಿ ಜೋರಾಗುತ್ತಿದೆ. ಮಹಿಳೆಯರಿಗೆ ಮುಜುಗರ ತರಿಸುವಂತೆ ವಿಡಿಯೋಗಳನ್ನ ಅಪ್ ಲೋಡ್ ಮಾಡಲಾಗುತ್ತದೆ. ಅಷ್ಟೇ ಅಲ್ಲಾ, ಮಕ್ಕಳನ್ನು ಟಿಕ್ ಟಾಕ್ ವ್ಯಸನಿಗಳಾಗುವಂತೆ ಮಾಡಲಾಗುತ್ತಿದೆ. ಆದ್ದರಿಂದ ಈ ಆ್ಯಪ್ ನ್ನು ನಿಷೇಧ ಮಾಡಬೇಕೆಂದು ಕೋರ್ಟ್ ಹೇಳಿದೆ. ಇದರಲ್ಲಿರುವ ವಿಡಿಯೋಗಳು ವ್ಯಕ್ತಿಯ ಖಾಸಗಿತನವನ್ನು ಹರಣ ಮಾಡುತ್ತಿವೆ,' ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್, ಟಿಕ್ ಟಾಕ್‌ನಿಂದ ಮಾಡಲಾದ ವಿಡಿಯೋಗಳನ್ನು ಪ್ರಸಾರ ಮಾಡದಂತೆಯೂ ಮಾಧ್ಯಮಗಳಿಗೂ ಸೂಚನೆ ನೀಡಿದೆ. ಟಿಕ್ ಟಾಕ್ ಮೊಬೈಲ್ ಆ್ಯಪ್ ಅನ್ನು ರದ್ದು ಮಾಡಬೇಕು,' ಎಂದು ಕೋರಿ ಮದುರೈ ಮೂಲದ ಹಿರಿಯ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರೂ ಆದ ಮುತ್ತುಕುಮಾರ್ ಎಂಬುವರು ಮದ್ರಾಸ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಎನ್. ಕೃಪಾಕರನ್ ಮತ್ತು ಎಸ್. ಎಸ್. ಸುಂದರ್ ಅವರಿರುವ ದ್ವಿಸದಸ್ಯ ಪೀಠ ಟಿಕ್ ಟಾಕ್ ಆ್ಯಪ್ ಡೌನ್‌ಲೋಡ್ ಮಾಡುವುದನ್ನು ನಿಷೇಧಿಸುವಂತೆ ಕೇಂದ್ರಕ್ಕೆ ಸೂಚಿಸಿದೆ. ಜತೆಗೇ, ಮಕ್ಕಳನ್ನು ಅಂತರ್ಜಾಲ ವ್ಯಸನಿಗಳಾಗದಂತೆ ತಡೆಗಟ್ಟಲು ಆ್ಯಪ್ ನ್ನು ನಿಷೇಧಿಸುವಂತೆ ಕೋರಿದೆ. ಐವತ್ತು ಕೋಟಿಗೂ ಮಿಗಿಲಾದ ಗ್ರಾಹಕರನ್ನು ಹೊಂದಿದೆ ಈ ಟಿಕ್ ಟಾಕ್ ಆ್ಯಪ್. ಅಲ್ಲದೆ, ಜಗತ್ತಿನಲ್ಲಿ ಹೆಚ್ಚು ಡೌನ್‌ಲೋಡ್‌ಗೊಂಡ ಆ್ಯಪ್‌ಗಳ ಪೈಕಿ ಟಿಕ್ ಟಾಕ್ ನಾಲ್ಕನೇ ಸ್ಥಾನದಲ್ಲಿದೆ.
Comments