ಮಂಡ್ಯದಲ್ಲಿ ಪ್ರಚಾರ ಮಾಡ್ತಿದ್ದ ರಾಕಿ ಬಾಯ್’ಗೆ ಗ್ರಾಮಸ್ಥರಿಂದ ವಾರ್ನಿಂಗ್..!!
ಲೋಕ ಸಮರಕ್ಕೆ ಮಂಡ್ಯದ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿರುವ ಸುಮಲತಾ ಪರ ಸ್ಟಾರ್ ಪ್ರಚಾರಕರು ಈಗಾಗಲೇ ಕ್ಯಾಂಪೇನ್ ಶುರು ಮಾಡಿಕೊಂಡಿದ್ದಾರೆ. ಸುಮಲತಾ ಪರವಾಗಿ ಸ್ಯಾಂಡಲ್ವುಡ್ ನ ಡಿ ಬಾಸ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ನೆನಪಿರಲಿ ಪ್ರೇಮ್ ಎಲ್ಲರೂ ಪ್ರಚಾರ ಶುರು ಮಾಡಿದ್ದಾರೆ. ಇದರಿಂದ ದೋಸ್ತಿಗಳು ಕೆಂಡಾಮಂಡಲವಾಗಿದ್ದಾರೆ. ಯಾರೇ ಬಂದು ಪ್ರಚಾರ ಮಾಡಿದರೂ ಕೂಡ ಗೆಲ್ಲವುದು ನಾವೇ ಎನ್ನುತ್ತಿದ್ದಾರೆ.. ಆದರೆ ಪ್ರತಿ ಬಾರಿಯೂ ಸಿಎಂ ಕುಮಾರಸ್ವಾಮಿಯು ಯಶ್ ಮತ್ತು ದರ್ಶನ್ ಅವರನ್ನು ನಿಂದಿಸುತ್ತಾ ಬಂದಿದ್ದಾರೆ. ಮಂಡ್ಯದ ಹಳ್ಳಿ ಹಳ್ಳಿಗಳಲ್ಲಿ ಕೂಡ ಯಶ್ ಮತ್ತು ದರ್ಶನ್ ಪ್ರಚಾರ ಮಾಡುತ್ತಿದ್ದಾರೆ.. ಆದರೆ ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಯಶ್ ಗೆ ವಾರ್ನಿಂಗ್ ಮಾಡಿದ್ದಾರೆ..
ಸುಮಲತಾ ಪರ ಪ್ರಚಾರ ಮಾಡುತ್ತಿದ್ದ ಯಶ್ ಅನಿವಾರ್ಯವಾಗಿ ಅಭಿಮಾನಿಗಳ ಒತ್ತಡಕ್ಕೆ ಮಣಿಯಬೇಕಾಗಿದೆ. ಬಲ್ಲೆನಹಳ್ಳಿ ಊರ ಗ್ರಾಮಸ್ಥರು ಯಶ್ ಪ್ರಚಾರಕ್ಕೆ ಅಡ್ಡಿ ಮಾಡಿದ್ದಾರೆ. ನೀವು ಊರ ಒಳಗೆ ಬರಲೇಬೇಕು ಇಲ್ಲ ಸುಮಲತಾ ಅವರಿಗೆ ವೋಟು ಹಾಕೋದಿಲ್ಲ ಅಂತ ರಾಕಿಬಾಯ್ ಗೆ ಗ್ರಾಮಸ್ಥರು ಪ್ರೀತಿಯಿಂದಾನೇ ವಾರ್ನಿಂಗ್ ಕೊಟ್ಟಿದ್ದಾರೆ. ಅಂಬಿ ಅಣ್ಣ ಯಾವಾಗಲೂ ಇಲ್ಲಿಗೆ ಬರ್ತಿದ್ರು ನೀವು ಬನ್ನಿ ಎಂದು ಕಾರು ಅಡ್ಡ ಗಟ್ಟಿ ಗ್ರಾಮಸ್ಥರು ಗಲಾಟೆ ಮಾಡಿದ್ದಾರೆ. ನಂತರ ಅಭಿಮಾನಿಗಳ ಒತ್ತಡಕ್ಕೆ ಮಣಿದ ಯಶ್ ಗ್ರಾಮದ ಒಳಗೆ ನಡೆದಿದ್ದಾರೆ. ಬನ್ನಿ ಅಂಥ ಡಿಮ್ಯಾಂಡ್ ಮಾಡ್ತಿರಾ… ಎಷ್ಟು ಲೀಡಿಂಗ್ ಕೊಡ್ತಿರಾ ನೋಡ್ತಿನಿ ಎಂದು ತಮಾಷೆಯಾಗಿಯೇ ಯಶ್ ಪ್ರಶ್ನೆ ಮಾಡಿದ್ದಾರೆ. ಒಟ್ಟಾರೆಯಾಗಿ ಸುಮಲತಾ ಗೆಲುವಿಗಾಗಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ… ಆದರೆ ಒಂದು ಕಡೆ ಸುಮಲತಾ ಅವರನ್ನು ಸೋಲಿಸಲು ಕುಮಾರಸ್ವಾಮಿಯವರು ಟೊಂಕ ಕಟ್ಟಿ ನಿಂತಿದ್ದಾರೆ.. ಮೇ 23 ರಂದು ಯಾರು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೋ ಕಾದು ನೋಡಬೇಕಿದೆ..
Comments