ಇನ್ನು ಮುಂದೆ ಮೆಟ್ರೋ ಪ್ರಯಾಣ ಕಷ್ಟ : ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್…!

ಬೆಂಗಳೂರಿನ ಟ್ರಾಫಿಕ್ ಕಡಿಮೆ ಮಾಡೋಕೆ ಮೆಟ್ರೋವೇ ಸುಗಮ ದಾರಿ ಎನ್ನತ್ತಾರೆ ಬೆಂಗಳೂರಿನ ನಾಗರಿಕರು. ಆದರೆ ಇದೀಗ ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಟ್ರಾಫಿಕ್ ಇಲ್ದೇ ಸಮಯ ಉಳಿತಾಯ ಮಾಡಿಕೊಂಡು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಮೆಟ್ರೋ ಅಧಿಕಾರಿಗಳು ಒಂದು ಶಾಕಿಂಗ್ ಸುದ್ದಿ ನೀಡಿದ್ದಾರೆ. ಮೆಟ್ರೋ ಅಧಿಕಾರಿಗಳು ತೆಗೆದುಕೊಳ್ಳುತ್ತಿರುವ ಇತ್ತೀಚಿನ ಕ್ರಮಗಳು ಪ್ರಯಾಣಿಕರಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಮೊನ್ನೆಯಷ್ಟೆ ಮೆಟ್ರೋ ಕಾರ್ಡ್ ಬಳಕೆದಾರರಿಗೆ 50 ರೂ. ಹೆಚ್ಚವರಿ ಹಣದ ಹೊರೆಯನ್ನು ಹೊರಿಸಿದ್ದ ನಮ್ಮ ಮೆಟ್ರೋ ಈಗ ಮತ್ತೆ 50 ರೂ.ಗಳ ದಂಡವನ್ನು ಹೊರಿಸಲು ಮುಂದಾಗಿದೆ. ಹೌದು ಒಂದು ವೇಳೆ ಇಳಿಯುವ ನಿಗಧಿತ ಸ್ಥಳ ಹೊರತು ಪಡಿಸಿ ಮುಂದಿನ ನಿಲ್ದಾಣದಲ್ಲಿ ಇಳಿದುಕೊಂಡರೇ ಅಂತಹವರಿಗೆ 50 ರೂ. ದಂಡ ವಿಧಿಸಲಾಗುವುದು ಎಂದು ಮೆಟ್ರೋ ಅಧಿಕಾರಿಗಳು ಘೋಷಿಸಿದ್ದಾರೆ.ಇದರಿಂದ ಮೆಟ್ರೋ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರಿಗೆ ಕಷ್ಟವಾಗಬಹುದು. ಕಟ್ಟು ನಿಟ್ಟಿನ ಕ್ರಮಗಳಿಂದಾಗಿ ಈಗಾಗಲೇ ಈ ಬಗ್ಗೆ ಮೆಟ್ರೋ ಪ್ರಯಾಣಿಕರಲ್ಲಿ ಅಸಮಧಾನ ಇತ್ತು. ಇದೀಗ ದಂಡ ನೀಡುವುದರಿಂದ ಮತ್ತಷ್ಟು ಭುಗಿಲೆದ್ದಿದೆ.
Comments