ಪ್ರಚಾರಕ್ಕೆಂದು ಬಂದು ಅಂಬಿ ಅಭಿಮಾನಿಗಳ ಮಧ್ಯೆ ಫಜೀತಿ ಅನುಭವಿಸಿದ ನಟ ಉಪೇಂದ್ರ..!!!
ಸಂಸದ ಶಿವರಾಮೇಗೌಡ ಮಂಡ್ಯ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರನ್ನು ಯಾವ ಗೌಡ್ತಿ ಅವರು..? ಅವರು ಗೌಡ್ತಿಎಂದು ಹೇಳಿದಹೇಳಿಕೆಗೆ ಅಂಬಿ ಅಭಿಮಾನಿಗಳಿಂದ ಭಾರೀ ಆಕ್ರೊಶ ವ್ಯಕ್ತವಾಗಿದೆ. ಅಂಬಿ ತವರೂರು ಡೊಡ್ಡರಸಿನ ಕೆರೆಯಲ್ಲಿ ಶಿವರಾಮೇಗೌಡ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಅಭಿಮಾನಿಗಳು, ಸುಮಲತಾ ಗೌಡ್ತಿನೇ, ಅಂಬಿ ಇದ್ದಾಗ ಅವರಿಂದೆ ಹೋಗುತ್ತಿದ್ದವರೆಲ್ಲಾ ಈಗ ಸುಮಲತಾ ವಿರುದ್ಧ ಮಾತನಾಡುತ್ತಿದ್ದಾರೆ. ಅಂಬಿ ಕೈ ಹಿಡಿದವರೆಲ್ಲಾ, ಉಂಡ ಮನೆಗೆ ದ್ರೋಹ ಬಗೆಯುತ್ತಿದ್ದಾರೆಂದು ಕಿಡಿ ಕಾರಿದ್ರು. ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುತ್ತಿದ್ದರು.
ಶಿವರಾಮೇ ಗೌಡರ ವಿರುದ್ಧ ಧಿಕ್ಕಾರ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇದೇ ಸಂದರ್ಭದಲ್ಲಿ ನಟ ಉಪೇಂದ್ರ ಕೂಡ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದಾರೆ. ಮದ್ದೂರು ಮಾರ್ಗವಾಗಿ ಮಳವಳ್ಳಿಗೆ ತೆರಳುತ್ತಿದ್ದ ಉಪೇಂದ್ರರವರಿಗೂ ಪ್ರತಿಭಟನಾಕಾರರ ಬಿಸಿ ನಟ ತಟ್ಟಿದೆ.ರಸ್ತೆ ತಡೆ ನಡೆಸುತ್ತಿದ್ದ ಪ್ರತಿಭಟನಾಕಾರರು ಉಪೇಂದ್ರ ಅವರನ್ನು ಅಡ್ಡಗಟ್ಟಿ, ಉಪೇಂದ್ರ ಅವರನ್ನು ಸುತ್ತುವರಿದು ಒಬ್ಬ ಚಿತ್ರರಂಗದ ಒಬ್ಬ ಮಹಿಳೆ ಮೇಲೆ ಅವಹೇಳನಕಾರಿ ಹೇಳಿಕೆ ನೀಡಿ ಅವಮಾನಿಸುತಿದ್ದಾರೆ ಇದಕ್ಕೆ ಪ್ರತಿಕ್ರಿಯಿಸಿ, ಏನು ಹೇಳ್ತೀರಿ ಎಂದು ಒಮ್ಮೆಲೆ ಕೇಳಿದಾಗ. ಉಪೇಂದ್ರ ಅವರು ಕ್ಷಣ ತಡವರಿಸಿದ್ದೂ ನಿಜ. ನಾನು ಪ್ರಜಾಕೀಯ ಪಕ್ಷದಿಂದ ಬಂದಿದ್ದೀನಿ. ನಮ್ಮ ಅಭ್ಯರ್ಥಿ ಸ್ಪರ್ಧಿಸಿದ್ದು, ಅವರನ್ನು ಬೆಂಬಲಿಸಿ ಎಂದರು. ಆದರೆ ಅಷ್ಟಕ್ಕೂ ಬಿಡದ ಜನರು, ಸುಮಲತಾ ಬಗ್ಗೆ ಮಾತನಾಡಿದ ಸಂಸದ ಹೇಳಿಕೆ ಸರಿಯೇ ನೀವೆ. ಹೇಳಿ, ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಪಟ್ಟು ಬಿಡದೇ ಕೇಳ ತೊಡಗಿದಾಗ. ಕ್ಷಣ ಕಾಲ ಫಜೀತಿ ಅನುಭವಿಸಿದ ಉಪೇಂದ್ರ, ನಿಮ್ಮ ತೀರ್ಮಾನವೇ ದೊಡ್ಡದು. ನೀವು ಹೇಳಿದ್ದು ಸರಿ, ಚುನಾವಣೆಯಲ್ಲಿ ಉತ್ತರ ಕೊಡಿ ನಮ್ಮ ಅಭ್ಯರ್ಥಿ ಪರ ಮತ ಮಾಡಿ ಎಂದು ಸುಮ್ಮನೇ ಕಾರಿನಲ್ಲಿ ಕುಳಿತು ಹೋದರು. ಮಂಡ್ಯ ಜಿಲ್ಲೆಯ ಜನ ಬುದ್ಧಿವಂತರು. ಈ ಚುನಾವಣೆಯಲ್ಲಿ ಉತ್ತಮ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುತ್ತಾ ತಮ್ಮ ಬುದ್ಧಿವಂತಿಕೆ ಮಾತು ಹೇಳಿ ಜಾರಿಕೊಂಡರು.
Comments