ನಿಮ್ಮ ಪರ ಯಾವ ಸ್ಟಾರ್ ನಟರು ಕ್ಯಾಂಪೇನ್’ ಗೆ ಬರ್ತಾರೆ ಎಂದಿದ್ದಕ್ಕೆ ನಿಖಿಲ್ ಕುಮಾರಸ್ವಾಮಿ ಕೊಟ್ಟ ಉತ್ತರ..?

ಲೋಕಸಭೆ ಚುನಾವಣೆ ಪ್ರಚಾರ ಎಲ್ಲೆಡೆ ಭರದಿಂದ ಸಾಗಿದೆ. ರಾಜ್ಯವೇ ಎದುರು ನೋಡುತ್ತಿರುವ ಕ್ಷೇತ್ರ ಮಂಡ್ಯ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇಂದು ಸಮಲತಾ ಪರ ಪ್ರಚಾರಕ್ಕೆ ಬಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೋದಯೆಡೆಯೆಲ್ಲಾ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ನಿಮ್ಮ ಜೊತೆ ಯಾರ್ ಇರ್ತಾರೆ ಅನ್ನೋದನ್ನ ಚುನಾವಣೆ ಫಲಿತಾಂಶದಲ್ಲಿ ನಿಮ್ಮ ಉತ್ತರದಲ್ಲಿ ತಿಳಿಸಿ ಎಂದು ಸುಮಲತಾ ಪರ ಮತಯಾಚಿಸುತ್ತಿದ್ದಾರೆ. ನಿಮ್ಮ ಓಟು ಸುಮಲತಾಗೆ ಬೀಳಬೇಕು, ಅಂಬಿ ಅಭಿಮಾನ ಉಳಿಸಿ ಎಂದಿದ್ದಾರೆ.
ದರ್ಶನ್ ಸ್ವಾಗತಿಸಲು ಜನರು ಮುಗಿ ಬೀಳುತ್ತಿದ್ದ ದೃಶ್ಯ ಕಂಡು ಬಂತು. ಮೊದಲ ಪ್ರಚಾರವನ್ನು ಕೆ ಆರ್ ಎಸ್ ನಿಂದ ಆರಂಭ ಮಾಡಿರುವ ಇವರು 20 ಹಳ್ಳಿಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಈಗಾಗಲೇ ಮಂಡ್ಯದಲ್ಲಿಯೇ ಬೀಡು ಬಿಟ್ಟಿರುವ ನಿಖಿಲ್ ಕುಮಾರಸ್ವಾಮಿ ಅವರನ್ನು, ಡಿ ಬಾಸ್ ಅಬ್ಬರ ಮಂಡ್ಯದಲ್ಲಿ ಜೋರಾಗಿದೆ. ಈ ಬಗ್ಗೆ ಏನ್ ಹೇಳ್ತೀರಾ ಎಂದಿದ್ದಕ್ಕೆ. ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಪ್ರಚಾರಕ್ಕೆ ಬಂದಿರುವ ದರ್ಶನ್ ಅವರಿಗೆ ಒಳ್ಳೆಯದಾಗಲೀ ಎಂದರು. ನಿಮ್ಮ ಪರವಾಗಿ ಯಾರಾದರೂ ಚಿತ್ರ ನಟರು, ಅಥವಾ ಸ್ಟಾರ್ ನಟರು ಬರುವ ಸಾಧ್ಯತೆ ಇದೆಯೇ ಎಂದಿದ್ದಕ್ಕೆ, ನನಗೆ ಕುಮಾರಣ್ಣ ನೇ ಸ್ಟಾರ್.
ನಾನು ಸಿನಿಮಾ ಇಂಡಸ್ಟ್ರಿಯವರ ಜೊತೆ ಚೆನ್ನಾಗಿದ್ದೀನಿ. ಮುಂದೆಯೂ ಚೆನ್ನಾಗಿಯೇ ಇರುತ್ತೇನೆ. ಯಾರನ್ನು ದುರುಪಯೋಗ ಪಡಿಸಿಕೊಳ್ಳುವುದು ಇಲ್ಲ. ಯಾರಾದರು ಬಂದರೆ ಸ್ವಾಗತಿಸುತ್ತೇನೆ. ಎಂದು ದರ್ಶನ್ ಬಗ್ಗೆ ಕೂಲ್ ಆಗಿಯೇ ಮಾತನಾಡಿದ್ದಾರೆ. ದರ್ಶನ್ ಇಂದು ಪ್ರಚಾರ ಕೈಗೊಂಡಿದ್ದಾರೆ. ನಾಳೆಯಿಂದ ರಾಕಿಂಗ್ ಸ್ಟಾರ್ ಯಶ್ ಕ್ಯಾಂಪೇನ್ ಮಾಡಲಿದ್ದಾರೆ.
Comments