‘ನಾನ್ ಚೌಕಿದಾರ್’ ಅಭಿಯಾನಕ್ಕೆ ನಟಿ ಶೃತಿ ಚಾಲನೆ…

30 Mar 2019 5:30 PM | General
405 Report

‘ನಾನು ಚೌಕಿದಾರ್’  ಅಭಿಯಾನಕ್ಕೆ  ಶೃತಿ ಚಾಲನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯವರು  ಚೌಕಿದಾರ ಮೋದಿಯವರು ಎಂದು ಅಭಿಯಾನ ಆರಂಭಿಸಿದ್ದಾರೆ. ಇದು ಚುನಾವಣಾ ನೀತಿ ಆಯೋಗಕ್ಕೆ ವಿರುದ್ಧವಾಗಿದೆ ಎಂದು ಕಾಂಗ್ರೆಸಿಗರು ಆರೋಪಿಸಿದ್ದರು. ನಿಜವಾದ ಕಾವಲುಗಾರ ಮೋದಿಯವರೇ. ದೇಶವನ್ನು ಕಾಯುತ್ತಿರುವ ಚೌಕಿದಾರ ಅವರು. ಜನರು ಕೂಡ ಚೌಕಿದಾರನಿಗೆ ಬೆಂಬಲಿಸುತ್ತಿದ್ದಾರೆ. ನನ್ನ ಬೆಂಬಲ ಕೂಡ ಅವರಿಗಿದೆ ಎನ್ನುವ ಮೂಲಕ ಬಿಜೆಪಿಗೆ ಸಪೋರ್ಟ್ ಮಾಡುತ್ತಿದ್ದಾರೆ ಚಿತ್ರ ನಟಿ ಶೃತಿ.

ನಾನು ಭಾರತೀಯಳು ಅನ್ನುವ ಹೆಮ್ಮೆ ಇದೆ. ಹಾಗೆ ನಾನು ಬಿಜೆಪಿ ಕಾರ್ಯಕರ್ತೆ ಅನ್ನೋದಕ್ಕೂ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು. ನಿರ್ಮಲಾ ಸೀತಾರಾಮನ್ ಗೆ ದೇಶದ ರಕ್ಷಣಾ ಖಾತೆ ಕೊಟ್ಟು ಮಹಿಳೆಯರ ಪ್ರಾಮುಖ್ಯತೆ ಹೆಚ್ಚಿಸಿದ್ದಾರೆ ಎಂದಿದ್ದಾರೆ.  ಆದರೆ ರಾಜ್ಯದಲ್ಲಿ ಬಂದಿರುವ ಅತಂತ್ರ ಸ್ಥಿತಿ ಕೇಂದ್ರದಲ್ಲಿ ಬರಬಾರದು.ಕೇಂದ್ರದಲ್ಲಿ ಆಗಾಗಬಾರದು ಎಂದರೆ ನಮ್ಮ ಬೆಂಬಲ ಬಿಜೆಪಿಗಿರಬೇಕು ಎಂದಿದ್ದಾರೆ. ಅತಂತ್ರವಾದ್ರೆ ದೋಸ್ತಿಗಳಿಂದ ಕುರ್ಚಿ ಗಾಗಿ ಕಾದಾಟ ನಡೆಯುವುದನ್ನು ನೋಡುತಿದ್ದೇವೆ. ಕಾಂಗ್ರೆಸ್ ನವರ ಬಳಿ ಕಪ್ಪು ಹಣ ಇರಬಹುದು. ಅದನ್ನೇ ಈಗ ತಿಂಗಳಿಗೆ ವರ್ಷಕ್ಕೆ 72 ಸಾವಿರ ಪ್ರಣಾಳಿಕೆ ಮಾಡಿದ್ದಾರೆ. ಅದೊಂದು‌ ಸುಳ್ಳಿನ ಕಂತೆ ಎಂದಿದ್ದಾರೆ.

Edited By

Manjula M

Reported By

Kavya shree

Comments