'ಕೆಜಿಎಫ್' ಸಿನಿಮಾ ನೋಡುವಾಗ ಕರೆಂಟ್ ತೆಗೆದ್ರೆ ಬಾಂಬ್ ಹಾಕ್ತೀವಿ ಎಂದು ಎಚ್ಚರಿಕೆ ...?!!!
ಮಾರ್ಚ್ 30 ರಂದು ಟಿವಿಯಲ್ಲಿ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಪ್ರಸಾರವಾಗ್ತಿದೆ. ಈಗಾಗಲೇ ರಾಕಿಂಗ್ ಸ್ಟಾರ್ ಯಶ್ ಅವರು ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಪ್ರಚಾರಕ್ಕೆ ನಿಂತಿದ್ದಾರೆ. ಈ ನಡುವೆ ಪಕ್ಷಗಳ ಮಧ್ಯೆ ಬೆಂಕಿ ಹತ್ತಿ ಉರಿಯುತ್ತಿದೆ. ಇದೇ ಸಮಯದಲ್ಲಿ ಟಿವಿಯಲ್ಲಿ ಸಿನಿಮಾ ಪ್ರಸಾರವಾಗ್ತಿರುವುದಂದ ಮತ್ತಷ್ಟು ರಾಜಕೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಬಹುದು ಎಂದು ಯೋಚಿಸಿ ಅಭಿಮಾನಿಯೊಬ್ಬ ಭದ್ರಾವತಿಯ ಮೆಸ್ಕಾಂ ಕಚೇರಿಕೆಗೆ ಬೆದರಿಕೆ ಪತ್ರವೊಂದನ್ನು ಬರೆದಿದ್ದಾನೆ.
ಕಚೇರಿಗೆ ಬಂದ ಪತ್ರ ನೋಡಿ ಅಧಿಕಾರಿಗಳು ಶಾಕ್ ಆಗಿದ್ದಾರೆ. ಅನಾಮಧೇಯ ವ್ಯಕ್ತಿಯಿಂದ ಪತ್ರ ಬರೆದಿದ್ದು. ಪತ್ರದಲ್ಲಿ ಕಚೇರಿಯ ಕಾರ್ಯ ನಿರ್ವಾಹಕ ಎಂಜಿನಿಯರ್ ವಿಳಾಸಕ್ಕೆ ಈ ಪತ್ರ ಬರೆಯಲಾಗಿದೆ.ಅದರಲ್ಲಿ ಶನಿವಾರ ಸಂಜೆ ಖಾಸಗಿ ವಾಹಿನಿಯಲ್ಲಿ ಯಶ್ ನಟನೆಯ 'ಕೆಜಿಎಫ್' ಚಿತ್ರ ಪ್ರಸಾರವಾಗಲಿದೆ. ಹೀಗಾಗಿ, ರಾಜಕೀಯ ಪುಡಾರಿಗಳ, ಎಚ್ ಡಿ ಕುಮಾರಸ್ವಾಮಿ, ಅಪ್ಪಾಜಿ ಅವರ ಕುಮ್ಮಕ್ಕಿನಿಂದ ವಿದ್ಯುತ್ ಕಡಿತ ಮಾಡಿದರೆ ನಿಮ್ಮ ಕಚೇರಿಗೆ ಸರಿಯಾದ ಬಾಂಬ್ ಅಳವಡಿಸುತ್ತೇವೆ. ಅದಕ್ಕಾಗಿ ಶಿವಮೊಗ್ಗದ ಕೆಇಬಿ ಕಚೇರಿಗೂ ಎಚ್ಚರಿಸಿದ್ದೇವೆ ಎಂದು ಬರೆಯಲಾಗಿದೆ.ಆ ಶನಿವಾರ ಸಂಜೆ ವಿದ್ಯುತ್ ಕಡಿತವಾದರೆ ನಿಮ್ಮ ಜೀವ ಹೋಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಸೂಚಿಸಲಾಗಿದೆ.
Comments