ಪಪ್ಪು ಎಂದ ಕರೆದವರಿಗೆ ಈ ಕೆಲಸ ಮಾಡಿ ಖಡಕ್ ಟಾಂಗ್ ಕೊಟ್ರು ರಾಹುಲ್ ಗಾಂಧಿ…

ರಾಹುಲ್ ಗಾಂಧಿಯವರು ಪ್ರಧಾನಿ ಹುದ್ದೆಗೆ ಅರ್ಹರಲ್ಲ. ಅವರಿಗೆ ಅಷ್ಟು ಜ್ಞಾನವಿಲ್ಲ. ರಾಹುಲ್ ಅವರನ್ನು ಪಪ್ಪು ಎಂದು ಕರೆದು ಟೀಕಿಸಲಾಗುತ್ತಿದ್ದವರಿಗೆ ಇದೀಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಈ ಕೆಲಸ ಟಾಂಗ್ ಕೊಡುವಂತಾಗಿದೆ. ರಾಹುಲ್ ಗಾಂಧಿಯವರು ಪ್ರಯಾಣಿಸುತ್ತಿದ್ದ ಮಾರ್ಗದಲ್ಲಿ ರಸ್ತೆ ಅಪಘಾತವೊಂದು ನಡೆದಿದೆ. ಅಪಘಾತ ನೋಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿವಯರು ಗಾಯಗೊಂಡ ವ್ಯಕ್ತಿಯನ್ನು ತಾವೇ ಉಪಚರಿಸಿದ್ದಾರಂತೆ.
ಆ ವ್ಯಕ್ತಿಯನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಇದೀಗ ಈ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕಾಂಗ್ರೆಸ್ ನವರು ಬಿಜೆಪಿಯವರಿಗೆ ರಾಹುಲ್ ಅವರನ್ನು ನೋಡಿ ಕಲಿಯಿರಿ ಎಂದು ಟಾಂಗ್ ನೀಡಿದ್ದಾರೆ. ಪಪ್ಪು ಎಂದು ಕರೆದವರು ಇವರನ್ನು ನೋಡಿ ಕಲಿತುಕೊಳ್ಳಿ ಎಂದಿದ್ದಾರೆ.ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ರಾಜಸ್ತಾನ ಮೂಲದ ದಿನಪತ್ರಿಕೆಯ ಸಂಪಾದಕ ರಾಜೇಂದ್ರ ವ್ಯಾಸ್ ಎಂದು ತಿಳಿದು ಬಂದಿದೆ. ಅದೇ ಮಾರ್ಗವಾಗಿ ಹೊರಟಿದ್ದ ರಾಹುಲ್ ಗಾಂಧಿಯವರು ಅಪಘಾತ ಸ್ಥಳಕ್ಕೆ ಧಾವಿಸಿ, ಗಾಯಗೊಂಡ ಪತ್ರಕರ್ತರನ್ನು ಉಪಚರಿಸಿದ್ದಾರೆ. ಪತ್ರಕರ್ತನ ಹಣೆಗೆ ಪೆಟ್ಟಾಗಿ ರಕ್ತ ಸೋರುತ್ತಿದ್ದು ಅದನ್ನು ರಾಹುಲ್ ತಮ್ಮ ಕರವಸ್ತ್ರದಿಂದ ಒರೆಸಿದ್ದಾರೆ. ಆಗ ಪತ್ರಕರ್ತ ಸರ್ ಇನ್ನೊಮ್ಮೆ ಕರವಸ್ತ್ರದಿಂದ ಹಣೆ ಒರೆಸಿ, ನಾನು ಇದನ್ನು ನನ್ನ ಕೆಲಸಕ್ಕೆ ಬಳಸಿಕೊಳ್ಳುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ರಾಲ್ ಗಾಂಧಿಯವರು ಏಮ್ಸ್ ಆಸ್ಪತ್ರೆಗೆ ಆತನನ್ನು ಕರೆತಂದು ಚಿಕಿತ್ಸೆ ಕೊಡಿಸಿ ಆ ನಂತರ ಪ್ರಯಾಣ ಬೆಳೆಸಿದ್ದಾರೆ. ಇದೀಗ ಇ ಸುದ್ದಿ ವೈರಲ್ ಆಗುತ್ತಿದ್ದಂತೇ ರಾಹುಲ್ ಗಾಂಧಿಯ ಬಗ್ಗೆ ಪ್ರಶಂಸೆ ಮಾತುಗಳನ್ನಾಡಿದ್ದಾರೆ.
Comments