21ನೇ ವಯಸ್ಸಿನಲ್ಲಿಯೇ ಐಎಎಸ್ ಅಧಿಕಾರಿಯಾದ ಆಟೋ ಚಾಲಕನ ಮಗ..!!

ತಂದೆ ತಾಯಿಗಳಿಗೆ ತಮ್ಮ ತಮ್ಮ ಮಕ್ಕಳು ಓದಿ ವಿದ್ಯಾವಂತರಾಗಿ ಒಂದೊಳ್ಳೆ ಕೆಲಸಕ್ಕೆ ಸೇರಿಕೊಳ್ಳಬೇಕೆಂಬ ಆಸೆ ಇದ್ದೆ ಇರುತ್ತದೆ.. ಕೆಲವರಿಗೆ ದುಡ್ಡು ಇದ್ರೂ ಓದೋಕೆ ಕಷ್ಟ.. ದುಡ್ಡು ಇಲ್ಲದ ಬಡವರಿಗೆ ಓದಲು ಇಷ್ಟ.. ಆದರೆ ವಿದ್ಯೆ ಯಾರ ಮನೆಯೂ ಸ್ವತ್ತು ಅಲ್ಲ… ಬಡವನೆ ಆಗಲಿ ಶ್ರೀಮಂತನೇ ಆಗಲಿ ಸರಸ್ವತಿ ಒಲಿದರೆ ಸಾಕು ನಮ್ಮ ಬಾಳು ಬಂಗಾರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ… ಅದಕ್ಕೆ ಉತ್ತಮ ನಿದರ್ಶನ ಈ ಕೆಳಕಂಡಂತೆ ಇದೆ ಓದಿ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಒಬ್ಬ ಬಡ ರಿಕ್ಷಾ ಚಾಲಕ ಇರ್ತಾನೆ.. ಆತನಿಗೊಬ್ಬ ಮಗ ಇರ್ತಾನೆ. ದಿನಕ್ಕೆ 18 ಗಂಟೆಗಳ ಕಾಲ ಓದಿ ಚಿಕ್ಕವಯಸ್ಸಿನಲ್ಲಿಯೇ ಐಎಎಸ್ ಅಧಿಕಾರಿಯಾಗಿ ವಿಶೇಷ ಸಾಧನೆಯನ್ನು ಮಾಡಿದ್ದಾನೆ.. 21 ವರ್ಷಕ್ಕೆ ಕೆಲವು ಯುವಕರು ಕಲಿಯಬಾರದನ್ನೆಲ್ಲಾ ಕಲಿತು ಅಪ್ಪ ಅಮ್ಮನನ್ನು ಅಯ್ಯೋ ಅನಿಸಿಕೊಂಡು ಬದುಕುತ್ತಿರುತ್ತವೆ.. ಆದರೆ ಗೋವಿಂದ್ ಜೈಸ್ವಾಲ್ ಎಂಬುವವರು ತಮ್ಮ 21 ವಯಸ್ಸಿಗೆ ತುಂಬಾ ಪರಿಶ್ರಮದಿಂದ ಓದಿ ತಂದೆ-ತಾಯಿ ಆಶೀರ್ವಾದಿಂದ ತಮ್ಮ ಕನಸನ್ನು ಬಹು ಬೇಗ ನನಸು ಮಾಡಿಕೊಂಡಿದ್ದಾರೆ.. ಪೋಷಕರಿಗೆ ಗೋವಿಂದ್ ಸೇರಿ ಮೂವರು ಹೆಣ್ಣುಮಕ್ಕಳಿದ್ದಾರೆ.
ಮಕ್ಕಳಲ್ಲಿ ಕಿರಿಯವನಾದ ಗೋವಿಂದ್ ಕಡುಬಡತನದಲ್ಲಿಯೂ ದಿನಕ್ಕೆ 18 ಗಂಟೆಗಳ ಸಮಯ ಓದಿ ಈಗ ಉನ್ನತ ಹುದ್ದೆಗೆ ಆಯ್ಕೆ ಆಗಿದ್ದಾರೆ. ಓದಿನಲ್ಲಿ ತುಂಬಾ ಆಸಕ್ತಿ ಹೊಂದಿದ್ದ ಗೋವಿಂದ್ ಯುಪಿಎಸ್‍ಸಿ ಪರೀಕ್ಷೆಯಲ್ಲಿ 48ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಗೋವಿಂದ್ ಪದವಿ ಮುಗಿಸಿ ಬಳಿಕ ಸಿವಿಲ್ ಸರ್ವಿಸ್ ಪರೀಕ್ಷೆಯ ಸಿದ್ಧತೆಗಾಗಿ ವಾರಣಾಸಿಯಿಂದ ದೆಹಲಿಗೆ ಬಂದಿದ್ದರು. ಕೆಲವು ದಿನಗಳ ನಂತರ ಮೆಟ್ರೋ ಜೀವನ ಶೈಲಿನಿಂದ ಗೋವಿಂದ್ ಗೆ ಆರ್ಥಿಕ ಸಮಸ್ಯೆ ಎದುರಾಯಿತು. ಆಗ ಅವರ ತಂದೆ ನಾರಾಯಣ ಜೈಸ್ವಾಲ್ ಅವರು ಊರಲ್ಲಿದ್ದ ಸ್ವಲ್ಪ ಜಮೀನನ್ನು ಮಾರಿ ಅದರಲ್ಲಿ ಬಂದಂತಹ ಕೇವಲ 4 ಸಾವಿರ ರೂ. ನೀಡಿ ಮಗನ ಓದಿಗೆ ಸಹಾಯ ಮಾಡಿದ್ದರು.
ಗೋವಿಂದ್ ದಿನಕ್ಕೆ ಬರೋಬ್ಬರಿ ಏನಿಲ್ಲಾ ಎಂದರೂ 18 ರಿಂದ 20 ಗಂಟೆಯವರೆಗೂ ಕೂಡ ಓದುತ್ತಿದ್ದರು.. ನಂತರ 2006ರಲ್ಲಿ ಮೊದಲ ಬಾರಿಗೆ ಯುಪಿಎಸ್‍ಸಿ ಪರೀಕ್ಷೆ ಬರೆದರು.. ಕೊನೆಗೂ 48ನೇ ರ್ಯಾಂಕ್ ಪಡೆದು ಪಾಸಾಗಿದ್ದರು. ಒಟ್ಟಿನಲ್ಲಿ ಓದಿಗೆ ಬಡತನ ಯಾವತ್ತು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಗೋವಿಂದ್ ಉತ್ತಮ ನಿದರ್ಶನ ಎಂದರೆ ತಪ್ಪಾಗುವುದಿಲ್ಲ.
Comments