ರಾಹುಲ್ ಗಾಂಧಿ ವಿಷ ಕುಡಿದು ತೋರಿಸಲೀ ಆಗ ಒಪ್ಪಿಕೊಳ್ಳುವೆ : ಚಾಲೆಂಜ್ ಹಾಕಿದ ಬಿಜೆಪಿ ಸಚಿವ…!
ಲೋಕಸಭೆ ಚುನಾವಣೆ ಕಾವು ಕೇಂದ್ರದಲ್ಲಿ ಜೋರಾಗಿಯೇ ಇದೆ. ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ನಡುವೆ ಪ್ರಧಾನಿ ಹುದ್ದೆಗಾಗಿ ಜಟಾಪಟಿ ಜೋರಾಗಿಯೇ ನಡೆಯುತ್ತಿದೆ. ಒಂದ್ ಕಡೆ ರಾಜ್ಯ ರಾಜಕಾರಣದಲ್ಲಿ ಮಂಡ್ಯ ಧಗಧಗ ಅಂತಿದ್ರೆ, ಕೇಂದ್ರದಲ್ಲಿ ರಾಹುಲ್ ಗಾಂಧಿಗೆ ಬಿಜೆಪಿ ಸಚಿವನೊಬ್ಬ ವಿಷ ಕುಡಿದು ತೋರಿಸಲಿ ಎಂದು ವಿಚಿತ್ರ ಸವಾಲೆಸೆದಿದ್ದಾರೆ.
ಗುಜರಾತ್’ನ ಶಿವಧಾರೆ ಎಂಬ ಬಿಜೆಪಿ ಸಚಿವನ ಈ ಹೇಳಿಕೆಗೆ ಕಾಂಗ್ರೆಸ್ ಮುಖಂಡರು ಕಕ್ಕಾಬಿಕ್ಕಿಯಾದರು. ಈ ಹಿಂದೆ ಕಾಂಗ್ರೆಸ್ ಮುಖಂಡನೊಬ್ಬ ರಾಹುಲ್ ಗಾಂಧಿಯನ್ನು ಶಿವನ ಅವತಾರವೆಂದು ವರ್ಣಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿಯ ಶಿವ ಧಾರೆ ಎಂಬುವವರು ರಾಹುಲ್ ಶಿವನ ಅವತಾರವಾದ್ರೆ 500 ಗ್ರಾಂ ವಿಷ ಕುಡಿಯೋಕೆ ಯಾಕೆ ತಡ. ಕುಡಿದು ಬದುಕಿ ತೋರಿಸಲೀ ಎಂದು ಸವಾಲೆಸೆದಿದ್ದಾರೆ. ಈ ಚಾಲೆಂಜ್’ಗೆ ಕಾಂಗ್ರೆಸ್ ಮುಖಂಡರು ಕೆರಳಿದ್ದಾರೆ. ಬಿಜೆಪಿಯವರ ಈ ಹೇಳಿಕೆ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ. ಶಿವಧಾರೆ ಇದೇ ಮೊದಲೇನಲ್ಲಾ ವಿಚಿತ್ರವಾಗಿ ಮಾತನಾಡುವುದು, ಅವರ ಹುಟ್ಟುಗುಣ ಎಂದು ಗುಜರಾತ್ನ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಬಾಲಾಕೋಟ್ ದಾಳಿಗೆ ಸಾಕ್ಷ್ಯ ಕೇಳಿದ ಕಾಂಗ್ರೆಸ್ ನಾಯಕರನ್ನು ಯುದ್ಧ ವಿಮಾನಗಳ ಮುಂದೆ ಕಟ್ಟಿ ಅವರ ಹಣೆಗೆ ಕ್ಯಾಮೆರಾ ಫಿಕ್ಸ್ ಮಾಡಬೇಕು ಎಂದು ಹೇಳಿದ್ದರು. ಒಟ್ಟಾರೆ ಕಾಂಗ್ರೆಸ್ ಬಿಜೆಪಿಯ ಯುದ್ಧ ಸಿಕ್ಕಾಪಟ್ಟೆ ಜೋರಾಗಿಯೇ ನಡೆಯುತ್ತಿದೆ. ಪ್ರಧಾನಿ ಹುದ್ದೆಗಾಗಿ ಎರಡು ಪಕ್ಷದ ನಾಯಕರಲ್ಲಿ ಭರ್ಜರಿ ಕಸರತ್ತೇ ನಡೆದಿದೆ. ಇದರ ನಡುವೆ ಒಬ್ಬರ ಮೇಲೆ ಒಬ್ಬರು ವಾಗ್ವಾದ ಕೂಡ ಜೋರು ಮಾಡಿದ್ದಾರೆ.
Comments