ಸುಮಲತಾ ಏಕಾಂಗಿ, ಅವರಿಗೆ ಅಪಾಯವಿದೆ ಮೊದಲು ಭದ್ರತೆ ಕೊಡಿ : ಮನವಿ ಮಾಡಿಕೊಂಡ ಬಿಜೆಪಿ ನಾಯಕ?!

ಮಂಡ್ಯದಲ್ಲಿ ಈ ಬಾರಿ ಎಂದೂ ನೋಡಿರದ ರಾಜಕೀಯ ಕಾಣುತ್ತಿದೆ. ಒಂದು ಕಡೆ ಮುಖ್ಯಮಂತ್ರಿ ಭದ್ರ ಕೋಟೆಯಾಗಿದ್ದ ಮಂಡ್ಯಕ್ಕೆ ನಟಿ ಸುಮಲತಾ ಎಂಟ್ರಿ ಕೊಟ್ಟು ಜೆಡಿಎಸ್ ನಾಯಕರ ಎದೆಯನ್ನು ನಡುಗಿಸುತ್ತಿದ್ದಾರೆ. ಸುಮಲತಾ ಬೆಂಗಾವಲಾಗಿ ಕುಮಾರಸ್ವಾಮಿ ವಿರೋಧ ಕಟ್ಟಿಕೊಂಡು ನಟ ದರ್ಶನ ಮತ್ತು ಯಶ್ ಪ್ರಚಾರದ ಕಣಕ್ಕೆ ಇಳಿದಿದ್ದಾರೆ. ನಿಖಿಲ್ ಮತ್ತು ಸುಮಲತಾ ಜಿದ್ದಾಜಿದ್ದಿ ವೈಯಕ್ತಿಕ ತೇಜೋವಧೆ ತನಕವೂ ಹೋಗಿದೆ. ಎಲೆಕ್ಷನ್ ಹತ್ತಿರ ಬರುತ್ತಿದ್ದಂತೇ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿರುವ ಮಂಡ್ಯ ರಾಜಕಾರಣದ ಬಗ್ಗೆ ನಿರ್ಧಿಷ್ಟವಾಗಿ ಏನನ್ನೂ ಅಂದಾಜಿಸುತ್ತಿಲ್ಲ. ಈ ನಡುವೆ ಮಂಡ್ಯದಲ್ಲಿ ಸುಮಲತಾಗೆ ಭದ್ರತೆ ಬೇಕಾಗಿದೆ.
ಈಗಾಗಲೇ ಅವರ ಪರ ಪ್ರಚಾರ ಮಾಡಿದ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ. ಎಲೆಕ್ಷನ್ ಆಗುವ ತನಕ ಯಾರಿಗೆ ಏನೂ ಬೇಕಾದರೂ ಆಗಬಹುದು ಎಂದು ಮನವಿ ಮಾಡಿಕೊಂಡಿದ್ದಾರೆ ಬಿಜೆಪಿ ನಾಯಕರೊಬ್ಬರು.ನಟಿ ಸುಮಲತಾ ಒಂಟಿಯಾಗಿ ಕಣಕ್ಕಿಳಿದಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರದ ದುರುಪಯೋಗ ಮಂಡ್ಯದಲ್ಲಿ ಹೆಚ್ಚಾಗುತ್ತಿದೆ. ವೈಯಕ್ತಿಕವಾಗಿ ತೇಜೋವಧೆ ಮಾಡಲಾಗುತ್ತಿದೆ ಎಂದು ಚುನಾವಣಾ ಆಯೋಗಕ್ಕೆ ಖುದ್ದು ಸುಮಲತಾ ಅವರೇ ದೂರು ನೀಡಿದ್ದಾರೆ. ನನಗೆ ಬೆದರಿಕೆ ಕರೆಗಳು ಹೆಚ್ಚಾಗುತ್ತಿವೆ. ಇದರಿಂದ ಪ್ರಚಾರಕ್ಕೆ ತೊಂದರೆಯಾಗುತ್ತಿದೆ. ಚುನಾವಣೆಗಾಗಿ ಆಯೋಗ ಹೆಚ್ಚಿನ ಅಧಿಕಾರಿಗಳನ್ನು ಹಾಕಬೇಕು ಎಂದು ಹೇಳಿ ದೂರು ಸಲ್ಲಿಸಿದ್ದಾರೆ.
ಇನ್ನುಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಿಂದ ಕಣಕ್ಕಿಳಿದಿರುವ ಸುಮಲತಾಗೆ ಭದ್ರತೆ ಬೇಕಾಗಿದೆ. ಸುಮಲತಾಗೆ ಮಂಡ್ಯದಲ್ಲಿ ಅಪಾಯವಿದೆ. ನಟ ದರ್ಶನ್ ಮತ್ತು ಯಶ್’ಗೂ ಸೆಕ್ಯುರಿಟಿ ಬೇಕಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗೆ ರಾಜ್ಯ ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ ಅವ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.
Comments