ಸುಮಲತಾ ಕರೆದರೂ ನಾನು ಪ್ರಚಾರಕ್ಕೆ ಬರುವುದಿಲ್ಲ ಎಂದ ಸ್ಯಾಂಡಲ್ವುಡ್ ನ ಸ್ಟಾರ್ ನಟ..!!

ಈಗಾಗಲೇ ಲೋಕ ಸಮರದ ಕಾವು ಹೆಚ್ಚಾಗಿದೆ.. ಮಂಡ್ಯದ ಹೈವೋಲ್ಟೇಜ್ ಕಣದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.. ಅವರ ವಿರುದ್ದವಾಗಿ ದೋಸ್ತಿ ಸರ್ಕಾರದಿಂದ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅಖಾಡಕ್ಕೆ ಇಳಿದಿದ್ದಾರೆ.. ಈಗಾಗಲೇ ಇಬ್ಬರು ಕೂಡ ಕ್ಯಾಂಪೇನ್ ಪ್ರಾರಂಭ ಮಾಡಿಕೊಂಡಿದ್ದಾರೆ.. ಸುಮಲತಾ ಪರ ಸ್ಯಾಂಡಲ್ ವುಡ್ ಸ್ಟಾರ್ಸ್ ಗಳು ಪ್ರಚಾರವನ್ನು ಮಾಡಿದ್ದರು..ಯಶ್ ಮತ್ತು ದರ್ಶನ್ ನಮ್ಮ ಬೆಂಬಲ ಸುಮಲತಾ ಗೆ ಎಂದು ಬಹಿರಂಗವಾಗಿ ತಿಳಿಸಿದರು.. ಇದರಿಂದ ದೋಸ್ತಿಗಳು ಕಂಗಾಲಾಗಿದ್ದರು…
ಮಂಡ್ಯ ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಮಂಡ್ಯದ ಅಭ್ಯರ್ಥಿಯಾಗಿ ಸುಮಲತಾ ಪ್ರಚಾರ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರ ಪರವಾಗಿ ಪ್ರಚಾರಕ್ಕೆ ಹೋಗುತ್ತಿಲ್ಲ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ. ಅವರು ನನ್ನ ಬೆಂಬಲ ಕೋರಿಲ್ಲ ಒಂದು ವೇಳೆ ಕರೆದರೂ ಪ್ರಚಾರಕ್ಕೆ ಹೋಗುವುದಿಲ್ಲ.
ಬಡವ ನೀನು ಮಡಗಿದಂತೆ ಇರು ಎಂದು ದೇವರು ಹೇಳಿದ್ದು, ನಾನು ಹಾಗೆಯೇ ಇರುತ್ತೇನೆ. ರಾಜಕೀಯಕ್ಕೆ ತುಂಬಾ ಬುದ್ಧಿ ಬೇಕು. ನಾನು ಅಷ್ಟೊಂದು ಬುದ್ಧಿವಂತನಲ್ಲ. ಈಗ ಸ್ವಲ್ಪ ಬುದ್ಧಿ ಬಂದಿದ್ದು ಅದನ್ನು ಕಾಪಾಡಿಕೊಳ್ಳುವೆ ಎಂದು ಹೇಳಿದ್ದಾರೆ. ನನ್ನ ಹೆಂಡತಿ ಗೀತ ಪ್ರಚಾರಕ್ಕೆ ಹೋಗಬಹುದು.. ಆದರೆ ನಾನು ಎಲ್ಲಿಯೂ ಕೂಡ ಹೋಗುವುದಿಲ್ಲ ಎಂದಿದ್ದಾರೆ.. ಪುನೀತ್ ಕೂಡ ಈ ಬಗ್ಗೆ ಸ್ಪಷ್ಟನೆಯನ್ನು ಕೊಟ್ಟಿದ್ದರು.. ನಾನೂ ಕೂಡ ಯಾರ ಪರ ಪ್ರಚಾರಕ್ಕೆ ಹೋಗುವುದಿಲ್ಲ.. ಮತ ಚಲಾವಣೆ ನಿಮ್ಮ ಹಕ್ಕು.. ಯಾರಿಗಾದರೂ ಮತ ಹಾಕಿ ಒಳ್ಳೆಯ ಅಭ್ಯರ್ಥಿಯನ್ನ ಆಯ್ಕೆ ಮಾಡಿ ಎಂದಿದ್ದರು.. ಇದೀಗ ಶಿವಣ್ಣ ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ.
Comments