ದರ್ಶನ್ ಮನೆ ಮೇಲೆ ಕಲ್ಲು ತೂರಾಟದ ಬಗ್ಗೆ ನಿಖಿಲ್ ಹೇಳಿದ್ದೇನು ಗೊತ್ತಾ..?
ಲೋಕಸಭಾ ಚುನಾವಣೆಯು ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷದವರು ಸಿದ್ದತೆಗಳನ್ನು ಮಾಡಿಕೊಂಡು ಪ್ರಚಾರ ಪ್ರಾರಂಭ ಮಾಡಿದ್ದಾರೆ.. ಬಿಸಿಲು ಎನ್ನದೆ ಕ್ಯಾಂಪೇನ್ ಶುರು ಮಾಡಿದ್ದಾರೆ… ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ಸುಮಲತಾ ಗೆ ಸ್ಯಾಂಡಲ್ ವುಡ್ ನ ಸ್ಟಾರ್ಸ್’ಗಳಾದ ಯಶ್ ಮತ್ತು ದರ್ಶನ್ ಸುಮಲತಾ ಪರ ಕ್ಯಾಂಪೆನ್ ಮಾಡಿದ್ದರು.. ಈ ಹಿನ್ನಲೆಯಲ್ಲಿ ಜೆಡಿಎಸ್ ನ ಕೆಲವು ಶಾಸಕರು ಎಚ್ಚರಿಕೆಯನ್ನು ದರ್ಶನ್ ಮತ್ತು ಯಶ್’ಗೆ ಕೊಟ್ಟಿದ್ದರು.
ಈಗಾಗಲೇ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧಿಸುತ್ತಿದ್ದು ಚಿತ್ರೋದ್ಯಮದ ಅನೇಕ ಗಣ್ಯರು ಸುಮಲತಾ ಪರವಾಗಿ ನಿಂತಿದ್ದಾರೆ. ದರ್ಶನ್ ಹಾಗೂ ಯಶ್ ಸುಮಲತಾಗೆ ಸಾಥ್ ನೀಡಿರುವುದು ಎಲ್ಲರ ಗಮನ ಸೆಳೆದಿದೆ. ಕ್ಯಾಂಪೇನ್ ನಲ್ಲಿ ತೊಡಗಿರುವ ದರ್ಶನ್ ರವರ ರಾಜರಾಜೇಶ್ವರಿ ನಗರದಲ್ಲಿರುವ ಐಡಿಯಲ್ ಹೋಮ್ಸ್ ಲೇಔಟ್ ನಿವಾಸ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟವನ್ನು ಮಾಡಿ ಪರರಿಯಾಗಿದ್ದಾರೆ... ಇದರ ಹಿಂದಿನ ಕೈವಾಡ ಯಾರದು ಎಂದು ತಿಳಿದು ಬಂದಿಲ್ಲ. ಆದರೆ ಇದಕ್ಕೆ ನಿಖಿಲ್ ಕುಮಾರಸ್ವಾಮಿ ವಿರುದ್ಧ ನಿಂತಿರುವ ಸುಮತಲಾ ಪರ ಪ್ರಚಾರ ಕಾರಣ ಎಂದು ಕೇಳಿ ಬರುತ್ತಿದೆ. ಇನ್ನು ಪ್ರಚಾರದಲ್ಲಿ ಬ್ಯುಸಿ ಆಗಿರುವ ನಿಖಿಲ್ ನನ್ನು ನಡೆದಿರುವ ಘಟನೆ ಬಗ್ಗೆ ಕೇಳಿದರೆ 'ಇಂತಹ ಕೆಲಸ ನಾವ್ಯಾಕೆ ಮಾಡೋಣ, ನಮ್ಮ ಮೇಲೂ ಆ ರೀತಿ ಪ್ರಯತ್ನ ಆಗಿದೆ. ನಮಗೆ ಎಲ್ಲಾ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಇದನ್ನು ಯಾರೇ ಮಾಡಿದರೂ ಹೀಗೆಲ್ಲಾ ಮಾಡಬಾರದು' ಎಂದು ತಿಳಿಸಿದ್ದಾರೆ…ಒಟ್ಟಾರೆಯಾಗಿ ವಿರೋಧ ಪಕ್ಷಗಳು ಈ ರೀತಿಯ ಕೆಲಸವನ್ನು ಮಾಡಿರಬಹುದು ಎಂದು ಹೇಳಲಾಗುತ್ತಿದೆ.
Comments