ಅಬ್ಬಾ..!! ಬರೋಬ್ಬರಿ 9.7 ಕೋಟಿಗೆ ಸೇಲಾಯ್ತು ಈ ಪಾರಿವಾಳ..!
ಬಹಳ ಹಿಂದಿನ ಕಾಲದಲ್ಲಿ ಪ್ರೇಮಿಗಳು ಸಂದೇಶವನ್ನು ಕಳುಹಿಸುವಾಗ ಪಾರಿವಾಳದ ಮೂಲಕ ಸಂದೇಶವನ್ನು ಕಳುಹಿಸುತ್ತಿದ್ದರು… ಪಾರಿವಾಳವನ್ನು ನೋಡಿದರೆ ಒಂಥರಾ ಪ್ರೀತಿ.. ಸಾಮಾನ್ಯವಾಗಿ ಪಾರಿವಾಳವನ್ನು ಎಲ್ಲರೂ ನೋಡುತ್ತಾರೆ.. ಅದೊಂದು ಸಾಮಾನ್ಯ ಪಕ್ಷಿಯಷ್ಟೆ. ರಸ್ತೆಗಳಲ್ಲಿ ನಮಗೆ ನೋಡಲು ಪಾರಿವಾಳಗಳು ಕಾಣಸಿಗುತ್ತವೆ. ಆದರೆ ಇಲ್ಲೊಂದು ಬಹಳ ವಿಶೇಷವಾದ ಪಾರಿವಾಳವಿದೆ. ಅರೇ ಹೌದಾ..!! ಪಾರಿವಾಳದಲ್ಲಿ ಏನಿದೆ ಅಂತದ್ದು ವಿಶೇಷತೆ ಅಂತ ಯೋಚನೆ ಮಾಡುತ್ತಿದ್ದೀರಾ..? ಮುಂದೆ ಓದಿ ನಿಮಗೆ ಗೊತ್ತಾಗುತ್ತದೆ.
ಈ ಪಾರಿವಾಳ ಬರೋಬ್ಬರಿ 9.7ಕೋಟಿ ಬೆಲೆ ಬಾಳುತ್ತದೆ. ಈ ವಿಶೇಷ ಪಾರಿವಾಳವನ್ನು ಚೀನಾದ ಓರ್ವ ವ್ಯಕ್ತಿ 1.4ಮಿಲಿಯನ್ ಡಾಲರ್ ಅಂದರೆ 9.7ಕೋಟಿ ನೀಡಿ ಖರೀದಿ ಮಾಡಿದ್ದಾರೆ. ಅರ್ಮಾಂಡೋ ಹೆಸರಿನ ಈ ಪಾರಿವಾಳ ಬೆಲ್ಜಿಯಂನದ್ದು. 'ಲೂವಿಸ್ ಹೆಮಿಲ್ಟನ್ ಆಫ್ ಪಿಜನ್ಸ್' (Lewis Hamilton of pigeons) ಎಂದೇ ಕರೆಸಿಕೊಳ್ಳುವ ಅರ್ಮಾಂಡೋ ಜಗತ್ತಿನ ಏಕೈಕ ಲಾಂಗ್ ಡಿಸ್ಟೆನ್ಸ್ ರೇಸಿಂಗ್ ಪಾರಿವಾಳ ಎಂಬ ಖ್ಯಾತಿ ಪಡೆದುಕೊಂಡಿದೆ. ಇದೇ ಕಾರಣದಿಂದ ರ್ಮಾಂಡೋ ಅತಿ ಹೆಚ್ಚು ಬೆಲೆಗೆ ಸೇಲ್ ಆಗಿ ಜಗತ್ತಿನ ಅತ್ಯಂತ ದುಬಾರಿ ಪಾರಿವಾಳ ಎಂಬ ಖ್ಯಾತಿಗೆ ಪಾತ್ರವಾಗಿದೆ. 5 ವರ್ಷದ ಈ ಪಾರಿವಾಳ ನಿವೃತ್ತಿ ಪಡೆಯುವ ಹಂತದಲ್ಲಿದೆ. ಹೀಗಿದ್ದರೂ ಇದನ್ನು ಚೀನಾದ ವ್ಯಕ್ತಿಯೊಬ್ಬ ಬೃಒಬ್ಬರಿ 1.4ಕೋಟಿಗೆ ಖರೀದಿಸಿ ಮಾಡಿದ್ದಾನೆ.. ನೋಡುದ್ರ ಸಾಮಾನ್ಯ ಪಕ್ಷಿ ಅಂತ ಕರೆಸಿಕೊಳ್ಳುವ ಈ ಪಾರಿವಾಳದ ಬೆಲೆ ಕೇಳಿ ಶಾಕ್ ಆದ್ರಿ ಅಲ್ವ..!!
Comments