ಚಾಲೆಂಜಿಂಗ್ ಸ್ಟಾರ್ ಮನೆ ಮೇಲೆ ಕಲ್ಲು ತೂರಿ ಎಸ್ಕೇಪ್ ಆದ ದುಷ್ಕರ್ಮಿ..! ಕಾರಣ ಏನಿರಬಹುದು..?

ಸ್ಯಾಂಡಲ್ ವುಡ್ ಸ್ಟಾರ್ಸ್ ಸುಮಲತಾ ಪರ ಪ್ರಚಾರಕ್ಕೆ ಹೋಗಿದ್ದೆ ತಪ್ಪಾಯ್ತಾ ಎನ್ನುವ ರೀತಿಯಲ್ಲಿ ಆಗಿಬಿಟ್ಟಿದೆ.. ಇತ್ತಿಚಿಗಷ್ಟೆ ನಾಮಪತ್ರ ಸಲ್ಲಿಸಿದ ಸುಮಲತಾ ಪರ ಯಶ್ ಮತ್ತು ದರ್ಶನ್ ಪ್ರಚಾರ ಮಾಡಿದ್ದರು.. ಸಮಾವೇಶದಲ್ಲಿ ಯಶ್ ಮತ್ತು ದರ್ಶನ್ ಸುಮಲತಾ ಅವರಿಗೆ ಸಾಥ್ ಕೊಟ್ಟಿದ್ದರು… ಅಷ್ಟೆ ಅಲ್ಲದೆ ಸುಮಲತಾ ಅವರನ್ನು ಬೆಂಬಲಿಸಿದ್ದಾಗಿ ಜೆಡಿಎಸ್ ಕಾರ್ಯಕರ್ತರು ದರ್ಶನ್ ಹಾಗೂ ಯಶ್ ವಿರುದ್ದ ಕೆಂಡಾಮಂಡಲವಾದರು.. ಅವರಿಗೆ ಗೋ ಬ್ಯಾಕ್ ಎಂಬ ಘೋಷಣೆಯನ್ನು ಕೂಡ ಕೂಗಿದರು.. ಆದರೆ ಇದ್ಯಾವುದಕ್ಕೂ ಜಗ್ಗದ ಯಶ್ ಮತ್ತು ದರ್ಶನ್ ಮಂಡ್ಯದಲ್ಲಿ ಸುಮಲತಾ ಪರ ಕ್ಯಾಂಪೇನ್ ಮಾಡಿದರು.. ಇದೇ ಹಿನ್ನಲೆಯಲ್ಲಿ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎನ್ನಲಾಗುತ್ತಿದೆ.
ಬೆಂಗಳೂರಿನ ರಾಜ ರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಅವರ ಮನೆ ಮೇಲೆ ದುಷ್ಕರ್ಮಿಯೊಬ್ಬ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ಇತ್ತೀಚಿಗಷ್ಟೇ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಿದ್ದಕ್ಕಾಗಿ ದರ್ಶನ್ ಮತ್ತು ಯಶ್ ರನ್ನು ಗುರಿಯಾಗಿಸಿಕೊಂಡು ಹಲವರು ಟೀಕೆ ಮಾಡಿದ್ದರು. ಇದೀಗ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ನಡೆದಿರಬಹುದು ಎಂದು ಶಂಕಿಸಲಾಗಿದೆ.ರಾಜರಾಜೇಶ್ವರಿ ನಗರದ ದರ್ಶನ್ ಮನೆ ಮೇಲೆ ನಿನ್ನೆ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ದುಷ್ಕರ್ಮಿಯೊಬ್ಬ ಕಲ್ಲು ತೂರಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಸ್ಥಳಕ್ಕೆ ರಾಜರಾಜೇಶ್ವರಿ ನಗರ ಪೊಲೀಸರು, ಕೆಂಗೇರಿ ಎಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಟ್ಟಾರೆಯಾಗಿ ಇದಕ್ಕೆಲ್ಲಾ ಕಾರಣ ಹುಡುಕುತ್ತಾ ಹೋದರೆ ಅದು ಸುಮಲತಾ ಪರ ಬೆಂಬಲಿಸದ್ದಕ್ಕೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ…ಹಾಗಾಗಿ ಸ್ಟಾರ್ಸ್ ಗಳಿಗೆ ಇದೆಲ್ಲಾ ಬೇಕಿತ್ತಾ ಎನ್ನುವ ಮಾತು ಕೇಳಿ ಬರುತ್ತಿದೆ..
Comments