ಒಂದು ಪದ ಬಳಸ್ತೀನಿ ತಪ್ಪು ತಿಳ್ಕೋಬೇಡಿ …! ಇಂಥವರೆಲ್ಲ ಸ್ಯಾಡಿಸ್ಟ್ ಗಳು..!! ನಿಖಿಲ್ ಕುಮಾರಸ್ವಾಮಿ ಹೀಗೆ ಹೇಳಿದ್ಯಾರಿಗೆ..?

ಲೋಕಸಭಾ ಚುನಾವಣೆಯ ವಿಷಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿವೆ… ಈ ವಿಷಯವಾಗಿ ಸಾಮಾಜಿಕ ಜಾಲತಾಣಗಳ ವಿರುದ್ದ ದೂರು ದಾಖಲಾಗುತ್ತಿವೆ.. ಅದರಲ್ಲೂ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವ ರಾಜಕೀಯ ಕುಟುಂಬ ಎಂದರೆ ಅದು ದೇವೆಗೌಡರ ಕುಟುಂಬ.. ಸಿಎಂ ಕುಮಾರಸ್ವಾಮಿಯವರು ಟ್ರೋಲ್ ಮಾಡುವವರ ವಿರುದ್ದ ಈಗಾಗಲೇ ದೂರು ದಾಖಲಿಸಿ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.
ಅದರಲ್ಲೂ ನಿಖಿಲ್ ಎಲ್ಲಿದ್ದೀಯಪ್ಪ.. ಈ ಡೈಲಾಗ್ ಇದೀಗ ರಾಜ್ಯಾದ್ಯಂತ ಮನೆ ಮಾತಾಗಿದೆ. ರಾಜಕೀಯವಾಗಿ ಇದನ್ನು ಸಿಕ್ಕ ಸಿಕ್ಕ ರೀತಿಯಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಟ್ರೋಲ್ ಆಗುತ್ತಿರುವ ವಿಡಿಯೋ ಬಗ್ಗೆ ಸ್ವತಃ ನಿಖಿಲ್ ಕುಮಾರಸ್ವಾಮಿ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಬುಲೆಟ್‍ನಲ್ಲೆ ಕುಳಿತ ನಿಖಿಲ್, ಸೋಶಿಯಲ್ ಮಿಡಿಯಾದಲ್ಲಿ ಕಾಮೆಂಟ್ ಮಾಡೋರಿಗೆ, ಟ್ರೋಲ್ ಮಾಡೋರಿಗೆ ಒಂದು ಪದ ಬಳಸ್ತೀನಿ ತಪ್ಪು ತಿಳ್ಕೋಬೇಡಿ ಇಂಥವರೆಲ್ಲ ಸ್ಯಾಡಿಸ್ಟ್ ಗಳು, ಅವರು ವೋಟು ಹಾಕಲ್ಲ. ಅವರ ಬಗ್ಗೆ ನಾನು ತಲೆನೂ ಕೆಡಿಸಿಕೊಳ್ಳಲ್ಲ ಎಂದು ಮಾತಿನಲ್ಲಿಯೇ ಚಾಟಿ ಏಟು ಕೊಟ್ಟಿದ್ದಾರೆ. ಜಾಗ್ವಾರ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ನಿಖಿಲ್ ಅವರನ್ನು ಉಲ್ಲೇಖಿಸಿ `ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಕೇಳಿದ್ದರು. ಆ ಬಳಿಕ ಈ ಡೈಲಾಗ್ ಇದೀಗ ರಾಜಕೀಯ ವಿಷಯದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿಬಿಟ್ಟಿದ್ದೆ.
Comments