'ದರ್ಶನ್ ಕೈಯಲ್ಲಿ ಕಾಸು ಇಲ್ದೇ ದನದ ಮಾಂಸ ತಿನ್ನೋಕೆ ಬರ್ತಾಯಿದ್ದ' : ಸ್ಟಾರ್ ನಟನ ವಿರುದ್ಧ ಜೆಡಿಎಸ್ ನಾಯಕನ ವಾಗ್ದಾಳಿ...!!!

ಚಾಲೆಂಜಿಂಗ್ ಸ್ಟಾರ್ ದರ್ಶನ್’ ಜೇಬಲ್ಲಿ ಹಣ ಇಲ್ದೇ. ದನದ ಮಾಂಸ ತಿನ್ನೋಕೆ ಎಲ್ಲಿಗೆ ಬರ್ತಾಯಿದ್ದ ಅಂತಾ ನಮಗೆ ಗೊತ್ತು, ಯಾರಿಗೆ ಟೀ ಕೊಡ್ತಾಯಿದ್ದ ಎಂದು ನಾವು ನೋಡಿದ್ದೀವಿ, ಅದನ್ನೆಲ್ಲಾ ಪಡುವಾರಳ್ಳಿ ಜನ ಕಂಡಿದ್ದಾರೆ. ಅದನ್ನೆಲ್ಲಾ ನಾನು ಹೇಳಬಾರದು ಎಂದು ಏಕವಚನದಲ್ಲಿ ಸ್ಯಾಂಡಲ್’ವುಡ್ ಡಿ ಬಾಸ್ ರನ್ನು ನಿಂಧಿಸಿದ್ದಾರೆ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷ ಎಂ. ಸಂತೋಷ್. ಜೆಡಿಎಸ್ ಸಭೆಯಲ್ಲಿ ಬಹಿರಂಗವಾಗಿ ವೈಯಕ್ತಿಕವಾಗಿಯೇ ದರ್ಶನ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅವರ ಸಿನಿಮಾ ಮಾಡೋಕೆ ನಾವು ದುಡ್ಡು ಕೊಡ್ತಿದ್ವಿ, ಅವರು ಏನು ಅಂತಾ ನನಗೆ ಗೊತ್ತು. ನಮಗೆ ಧಮ್ಕಿ ಹಾಕ್ತಾನೆ ಆ ದರ್ಶನ್. ಸವಾಲು ಹಾಕ್ತಾನೆ, ಅವರು ಎಲ್ಲೆಲ್ಲಿ ಏನೇನು ಕೆಲಸ ಮಾಡ್ತಿದ್ರು ಎಂದು ಪಡುವಾರಳ್ಳಿ ಜನಕ್ಕೆ ಗೊತ್ತು. ಆದರೆ ಇವತ್ತು ನಮಗೆ ಸವಾಲು ಹಾಕ್ತಾನೆ ಎಂದು ವೈಯಕ್ತಿಕವಾಗಿ ದರ್ಶನ್ ಅವರನ್ನು ನಿಂಧಿಸಿದ್ದಾರೆ. ಏಕವಚನದಲ್ಲೇ ಸಂತೋಷ್, ನಟ ದರ್ಶನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಜೆಡಿಎಸ್ ನಾಯಕರು ತಮ್ಮ ನಾಲಿಗೆ ಹರಿಬಿಟ್ಟು ಪಕ್ಷದ ವರ್ಚಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಪದೇ ಪದೇ ಬೈಗುಳ ರಾಜಕಾರಣ ಮಾಡುತ್ತಿರುವ ಜೆಡಿಎಸ್ ನಾಯಕರಿಂದ ಇದೀಗ ಡಿ ಬಾಸ್ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. ಕಷ್ಟಪಡದೇ ಯಾರು ಮೇಲೆ ಬರಲು ಸಾಧ್ಯವಿಲ್ಲ, ಹಾಗೇ ದರ್ಶನ್ ಕೂಡ ಒಬ್ಬ ಕಲಾ ಪ್ರತಿಭಾವಂತ. ಅವರಿಗೆ ವಾಕ್ ಸ್ವಾತಂತ್ರ್ಯಇದೆ. ಅದೂ ಬಿಟ್ಟು ಕುಟುಂಬ ರಾಜಕಾರಣ ಮಾಡುವ ಜೆಡಿಎಸ್ ಶಾಸಕ, ಮುಖಂಡರು ಸ್ಟಾರ್ ನಟರನ್ನು ವೈಯಕ್ತಿಕವಾಗಿ ನಿಂಧಿಸುವುದು ಸರಿಯಿಲ್ಲ, ಚುನಾವಣೆಯಲ್ಲಿ ನಿಮ್ಮನ್ನು ಎದುರಿಸ್ತೀವಿ ಎಂದು ದರ್ಶನ್ ಅಭಿಮಾನಿಗಳು ಜೆಡಿಎಸ್ ಮುಖಂಡ ಸಂತೋಷ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಮ್ಮ ಅಭಿಮಾನಿಗಳು ಪಂಚೆ ಎತ್ತಿ ಕಟ್ಟಿದ್ರೆ ಅವರು ಏನು ಅನ್ನೋದನ್ನ ತೋರಿಸ್ತಾರೆ ಎಂಬ ದರ್ಶನ್ ಮಾತಿಗೆ ಸಂತೋಷ್ ಈ ರೀತಿ ವಾಗ್ದಾಳಿ ನಡೆಸಿದ್ದಾರೆ
Comments