ಡಿ-ಬಾಸ್ ಅಭಿಮಾನಿಗಳನ್ನು ಕೆರಳಿಸಿದ ಜೆಡಿಎಸ್ ಶಾಸಕ..!! ದಾಖಲಾಯ್ತು ಎಫ್ ಐಆರ್..!!
ಮಂಡ್ಯ ಲೋಕಸಭಾ ಚುನಾವಣೆಯ ಅಖಾಡ ತಣ್ಣಗೆ ಆಗುವ ಆಗೆ ಕಾಣುತ್ತಿಲ್ಲ..ದಿನದಿಂದ ದಿನಕ್ಕೆ ರಣರಂಗವಾಗುತ್ತಿದೆ.. ಅದರಲ್ಲೂ ಸುಮಲತಾ ಅವರು ನಾಮಪತ್ರ ಸಲ್ಲಿಸಿದ ಮೇಲೆ ದರ್ಶನ್ ಮತ್ತು ಯಶ್ ಪ್ರಚಾರಕ್ಕೆ ಬಂದಿದ್ದರು.. ಆದರೆ ಅದೇ ಯಾಕೋ ಸಿಕ್ಕಾಪಟ್ಟೆ ಗೊಂದಲ ಸೃಷ್ಟಿ ಮಾಡುತ್ತಿದೆ.. ಈ ವಿಷಯಕ್ಕಾಗಿಯೇ ದೋಸ್ತಿ ನಾಯಕರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ..ಆದರೆ ಇದೀಗ ಈ ವಿಷಯಕ್ಕಾಗಿಯೇ ಪೊಲೀಸ್ ಮೆಟ್ಟಿಲು ಏರುವ ಸಂಭವಗಳು ಎದುರಾಗುತ್ತಿವೆ.
ಮಂಡ್ಯ ಲೋಕಸಭೆ ಚುನಾವಣಾ ಕಣದಲ್ಲಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ವಿರುದ್ಧ ಪಕ್ಷೇತರರಾಗಿ ಸ್ಪರ್ಧೆಗಿಳಿಯುತ್ತಿರುವ ಸುಮಲತಾ ಅಂಬರೀಶ್ ಗೆ ಬೆಂಬಲಿಸುವ ನಟ ದರ್ಶನ್ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ ಜೆಡಿಎಸ್ ಶಾಸಕ ಕೆಸಿ ನಾರಾಯಣ ಗೌಡ ವಿರುದ್ಧ ಇದೀಗ ಎಫ್ ಐಆರ್ ದಾಖಲಾಗಿದೆ. ಇದೇ ಹಿನ್ನಲೆಯಲ್ಲಿ ಸರ್ಕಾರ ನಮ್ಮದೇ ಇದೆ. ನಿಮ್ಮ ಸಿನಿಮಾ ನೋಡಿಕೊಂಡು ಅಷ್ಟರಲ್ಲೇ ಇರಿ. ಚುನಾವಣಾ ಕಣಕ್ಕೆ ಬಂದರೆ ವಿಚಾರಣೆ ನಡೆಸುವುದಾಗಿ ಶಾಸಕರು ಎಚ್ಚರಿಕೆ ನೀಡಿದ್ದರು. ಇದು ಡಿ ಬಾಸ್ ಅಭಿಮಾನಿಗಳನ್ನೂ ಕೆರಳಿಸಿತ್ತು.
ಇನ್ನು, ಈ ರೀತಿ ಮಾಡಿದ ಶಾಸಕರಿಗೆ ಮಂಡ್ಯದ ಅಂಬರೀಶ್ ಅಭಿಮಾನಿಗಳೇ ಇರಿಸುಮುರಿಸಾಗುವಂತೆ ಮಾಡಿದ್ದಾರೆ. ಕೆ.ಆರ್ ಪೇಟೆ ತಾಲೂಕಿನ ಆಂಜನೇಯ ಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಳ್ಳಲು ಬಂದ ಶಾಸಕರ ಎದುರು ಜೋರಾಗಿ ಡಿ ಬಾಸ್ ಎಂದು ಕೂಗಿ ಅಭಿಮಾನಿಗಳು ಮುಜುಗರ ತಂದಿದ್ದಾರೆ. ಒಟ್ಟಿನಲ್ಲಿ ಅಭಿಮಾನಿಗಳನ್ನು ಎದುರು ಹಾಕಿಕೊಂಡರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ… ದೋಸ್ತಿಗಳು ಏನೇ ಮಾಡಿದರೂ ಯೋಚಿಸಿ ಮಾಡಬೇಕು ಎನ್ನುವಂತಾಗಿದೆ. ಸ್ಯಾಂಡಲ್ ವುಡ್ ನ ದಾಸ ನಿಗೆ ಅಭಿಮಾನಿಗಳ ಬಳಗ ದೊಡ್ಡದೆ ಇದೆ..
Comments