ಮಂಡ್ಯದಲ್ಲಿ ಯಶ್ ಮತ್ತು ದರ್ಶನ್ ನಾಪತ್ತೆ !! ಮಾತು ಕೊಟ್ಟು ಹಿಂದೆ ಸರಿದ್ರಾ ಜೋಡೆತ್ತುಗಳು..!!!
ಲೋಕ ಸಮರದ ಹಿನ್ನಲೆಯಲ್ಲಿ ಮಂಡ್ಯಲೋಕಸಭಾ ಅಖಾಡದಷ್ಟು ಕಾವು ಹೆಚ್ಚಾಗಿಯೇಇದೆ..ಇಂದು ನಿಖಿಲ್ ಮತ್ತು ಸುಮಲತಾ ನಡುವೆಪ್ರಬಲ ಪೈಪೋಟಿ ಏರ್ಪಟ್ಟಿದೆ. ಅಖಾಡದಲ್ಲಿಗೆಲುವು ಯಾರಿಗೆ ಸಿಗುತ್ತೋ ಗೊತ್ತಿಲ್ಲ.. ಆದರೆಪ್ರಚಾರ ಮಾತ್ರ ಬಿರುಸಿನಿಂದ ನಡೆಯುತ್ತಿದೆ.. ಬಿಸಿಲನ್ನು ಲೆಕ್ಕಿಸಿದೆ ಅಭ್ಯರ್ಥಿಗಳು ಪ್ರಚಾರಕ್ಕೆಇಳಿದಿದ್ದಾರೆ. ಸುಮಲತಾ ಕಡೆ ಈಗಾಗಲೆ ಸ್ಟಾರ್ನಟರಾದ ಯಶ್ ಮತ್ತು ದರ್ಶನ್ ಪ್ರಚಾರಮಾಡುತ್ತಿದ್ದಾರೆ. ಪ್ರಚಾರದ ವೇಳೆ ಹೇಳಿದ ಮಾತಿಗೆ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ
ಪ್ರಚಾರದ ವೇಳೆ 30 ದಿನ ಮಂಡ್ಯ ಬಿಟ್ಟು ಹೊರಗೆಹೋಗೋದಿಲ್ಲ. ಇಲ್ಲೇ ಫುಲ್ ಸಿನಿಮಾತೋರಿಸುತ್ತೇವೆ.. ಪಂಚೆ ಎತ್ತಿಕಟ್ಟಿ ನಿಂತು ಪರೇಡ್ ಮಾಡುತ್ತೇವೆ, ನಮ್ಮ ಈ ಪರೇಡ್ ಏಪ್ರಿಲ್ 18ರವರೆಗೆ ಮುಂದುವರೆಯುತ್ತೆ… ಎಂದೆಲ್ಲಾ ಡೈಲಾಗ್ ಹೊಡೆದಿದ್ದ ಸ್ಯಾಂಡಲ್ ವುಡ್ ಸ್ಟಾರ್ಸ್ ಗಳು ಇಂದು ಮಂಡ್ಯದಲ್ಲಿ ನಾಪತ್ತೆಯಾಗಿದ್ದಾರೆ. ಮಂಡ್ಯದ ಜನತೆ ಕೇಳುತ್ತಿದ್ದಾರೆ. ಎಲ್ಲಿದ್ದೀರೀಬಾಸ್ಗಳೇ ಅಂತಾ..ಮೊದಲ ದಿನವೇನಾಪತ್ತೆಯಾಗಿದ್ದಾರೆ ಇನ್ನೂ 30 ದಿನಇರ್ತಾರಾ..? ಸಿನಿಮಾದವರನ್ನು ನಂಬಿಕೊಂಡು ಏನು ಮಾಡೋದು..? ನಿನ್ನೆ ನಡೆದ ರ್ಯಾಲಿಯಲ್ಲಿ ಸುಮಲತಾ ಭಾಷಣದ ಬಗ್ಗೆ ಮಂಡ್ಯ ಜನ ವ್ಯಾಪಕಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಭಾವನಾತ್ಮಕವಾದಭಾಷಣ ಮಂಡ್ಯ ಜನರ ಮನಸೆಳೆದಿದೆ. ಆದರೆಇಬ್ಬರು ಹೀರೋಗಳ ಡೈಲಾಗ್ಗಳು ಮಂಡ್ಯಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ..
ಇಬ್ಬರು ಹೀರೋಗಳು ಸಿನಿಮಾಡೈಲಾಗ್ಗಳನ್ನು ಹೊಡೆದಿದ್ದು ಬಿಟ್ಟರೆ ರೈತರ ಬಗ್ಗೆಮಾತನಾಡಲಿಲ್ಲ. ನೀರಾವರಿ ಬಗ್ಗೆಮಾತನಾಡಲಿಲ್ಲ. ಯೋಧ ಗುರು ಮನೆಗೆ ಯಾಕೆಹೋಗಲಿಲ್ಲ ಎಂದು ವಿವರಿಸಲಿಲ್ಲ. ರಸ್ತೆಹಾಕಿಸೋ ಬಗ್ಗೆ ಮಾತಾಡಲಿಲ್ಲ..ಸಕ್ಕರೆ ಫ್ಯಾಕ್ಟರಿಬಗ್ಗೆ ಏನನ್ನೂ ಹೇಳಲಿಲ್ಲ. ಕೇವಲ ತಮ್ಮ ವಿರುದ್ಧದಟೀಕೆಗೆ ಉತ್ತರಿಸಿ ಬೆಂಗಳೂರಿನತ್ತ ತೆರಳಿದರು. ಕೇವಲ ಬಿಲ್ಡಪ್ ಗಳ ಮಾತುಗಳು ನಮಗೆ ಬೇಡ ಎಂದು ಹರಿಹಾಯ್ದಿದ್ದಾರೆ.. ಒಟ್ಟಾರೆಯಾಗಿ ಸ್ಯಾಂಡಲ್ ವುಡ್ ಸ್ಟಾರ್ಸ್ ಗಳು ಯಾವುತ್ತಿದ್ದರೂ ಸ್ಟಾರ್ಸ್ ಗಳೇ ನಮ್ಮ ಕಷ್ಟಗಳು ಅವರಿಗೆ ತಿಳಿಯುವುದಿಲ್ಲ ಎಂದು ಮಂಡ್ಯದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.
Comments