ಡಿ-ಬಾಸ್, ರಾಕಿಬಾಯ್ ಪ್ರಚಾರದ ಬಗ್ಗೆ ‘ಜಾಗ್ವಾರ್’ ನಾಯಕ ಹೇಳಿದ್ದೇನು..?

ಮಂಡ್ಯ ಲೋಕಸಭಾ ಚುನಾವಣೆಯು ದಿನದಿಂದ ದಿನಕ್ಕೆ ರಂಗೇರುತ್ತಿದೆ..ಈಗಾಗಲೇ ನಾಮಪತ್ರ ಸಲ್ಲಿಸಿರುವ ಸುಮಲತ ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದಾರೆ.. ಸ್ಯಾಂಡಲ್ ವುಡ್ ನ ಸ್ಟಾರ್ಸ್’ಗಳು ಸುಮಲತಾ ಪರ ಪ್ರಚಾರ ಮಾಡುತ್ತಿದ್ದಾರೆ..ಆದರೆ ನಿಖಿಲ್ ಪರ ಯಾರು ಒಲವು ತೋರಿಸುತ್ತಿಲ್ಲ..ಹಾಗಾಗಿ ನಿಖಿಲ್ ಗೆಲುವು ಮಂಡ್ಯದಲ್ಲಿ ಅಸಾಧ್ಯ ಎನ್ನುತ್ತಿದ್ದಾರೆ.ಆದರೆ ಮಂಡ್ಯದ ಜನ ಯಾರ ಪರ ಒಲವು ತೋರಿಸುತ್ತಾರೋ ಗೊತ್ತಿಲ್ಲ…
ಸ್ಟಾರ್ಸ್ ಪ್ರಚಾರ ಕುರಿತಾಗಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.ನಿಖಿಲ್ ಕುಮಾರ್ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಗಾಳಿ ಪ್ರವಾಸ ನಡೆಸಿದ್ದಾರೆ. ಎಲ್ಲೆಡೆ ಪ್ರಚಾರ ನಡೆಸುತ್ತಿರುವ ನಿಖಿಲ್ ಕುಮಾರ್ ಅವರಿಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಇದೇ ಸಮಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್ ಕುಮಾರ್, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಚರ್ಚಿಸಿ ನನ್ನನ್ನು ಅಭ್ಯರ್ಥಿಯಾಗಿ ಮಾಡಿದ್ದಾರೆ.
ಜನರ ನಡುವೆ ಇದ್ದು ಪ್ರೀತಿ, ವಿಶ್ವಾಸ ಸಂಪಾದಿಸಲು ಬಂದಿದ್ದೇನೆ. ನಮ್ಮ ಕಾರ್ಯಕರ್ತರು ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನಾನು ಹೆದರುವ ಪ್ರಶ್ನೆಯೇ ಇಲ್ಲ. ಯಶ್, ದರ್ಶನ್ ಅವರು ಬಂದು ಪ್ರಚಾರ ಮಾಡಿದರೂ ನನಗೆ ಭಯವಿಲ್ಲ. ಚುನಾವಣೆಗೆ ಸ್ಪರ್ಧಿಸಲು ಎಲ್ಲರಿಗೂ ಅವಕಾಶವಿದೆ. ಸುಮಲತಾ ಅಂಬರೀಶ್ ಅವರಿಗೆ ಒಳ್ಳೆಯದಾಗಲಿ ಎಂದು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಎಲ್ಲವು ಸರಿ ಕಂಡರೂ ಒಳಗೆ ಜಿದ್ದಾಜಿದ್ದಿ ಈಗಾಗಲೇ ಪ್ರಾರಂಭವಾಗಿದೆ.
Comments