ಈ ಜೆಡಿಎಸ್ ಅಭ್ಯರ್ಥಿ ಪರವಾಗಿಯೂ 'ಪ್ರಚಾರ' ಮಾಡಲು ಸಿದ್ದ ಎಂದ ಚಾಲೆಂಜಿಂಗ್ ಸ್ಟಾರ್..!! ಆ ಅಭ್ಯರ್ಥಿ ಯಾರ್ ಗೊತ್ತಾ..?

ಈ ಬಾರಿ ಮಂಡ್ಯ ಲೋಕಸಭಾ ಚುನಾವಣೆಯು ಸಾಕಷ್ಟು ಇಂಟ್ರೆಸ್ಟಿಂಗ್ ಆಗಿ ಇದೆ.. ದಿನದಿಂದ ದಿನಕ್ಕೆ ಅಖಾಡ ಮತ್ತಷ್ಟು ರಂಗೇರುತ್ತಿದೆ.. ಮೊನ್ನೆಯಷ್ಟೆ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯುವೆ ಎಂದಿದ್ದಾರೆ.. ಅವರಿಗೆ ಸ್ಯಾಂಡಲ್ ವುಡ್ ನ ದಿಗ್ಗಜರು ಕೂಡ ಸಾಥ್ ನೀಡಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದನ್ನು ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಅಧಿಕೃತವಾಗಿ ಘೋಷಿಸಲಾಗಿದ್ದು, ಈ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಉಪಸ್ಥಿತರಿದ್ದರು.
ಈ ಸಮಯದಲ್ಲಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ತಾವು ಸ್ಟಾರ್ ಗಳಾಗಿ ಸುಮಲತಾ ಅವರ ಪರ ಪ್ರಚಾರ ಮಾಡುತ್ತಿಲ್ಲ. ಅವರ ಮನೆ ಮಕ್ಕಳಾಗಿ ಈ ಕಾರ್ಯ ನಿರ್ವಹಿಸುತ್ತಿದ್ದೇವೆ. ಅಪ್ಪಾಜಿ ಅಂಬರೀಶ್ ಅವರನ್ನು ನಾವು ಈಗ ಸುಮಲತಾ ಅಮ್ಮನಲ್ಲಿ ಕಾಣುತ್ತಿದ್ದೇವೆ ಎಂದು ತಿಳಿಸಿದ್ದಾರೆ.. ಇದೇ ಸಮಯದಲ್ಲಿ ಪತ್ರಕರ್ತರೊಬ್ಬರು ನಿಖಿಲ್ ಕುಮಾರಸ್ವಾಮಿಯವರ ಪರವಾಗಿ ಪ್ರಚಾರ ಮಾಡುವುದಿಲ್ಲವೇ ಎಂದು ಪ್ರಶ್ನಿಸಿದ ವೇಳೆ, ಒಂದೇ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳಿಗೆ ಪ್ರಚಾರ ಮಾಡಲು ಸಾಧ್ಯವೇ ಎಂದು ಮರು ಪ್ರಶ್ನೆ ಮಾಡಿದ ದರ್ಶನ್, ಹಾಸನದಲ್ಲಿ ಸ್ಪರ್ಧಿಸಿರುವ ಪ್ರಜ್ವಲ್ ರೇವಣ್ಣ ಅವರೂ ಕೂಡ ನನ್ನ ಸ್ನೇಹಿತರು. ಅವರು ಕರೆದರೆ ಅಲ್ಲಿಗೆ ಹೋಗಿ ಪ್ರಚಾರ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.
Comments