ಕೊನೆಗೂ ದೊಡ್ಡಗೌಡರಿಗೆ ‘ಅಖಾಡ’ ಫಿಕ್ಸ್ : 'ಲೋಕ' ಸಮರಕ್ಕೆ ಸಜ್ಜಾದ್ರು ಮಾಜಿ ಪ್ರಧಾನಿ….!!!

ಅಂದಹಾಗೇ ಮಾಜಿ ಪ್ರಧಾನಿ ಅವರು ಇಂದಿಗೂ ಯೋಗ ಮಾಡುತ್ತಾ ಆರೋಗ್ಯವನ್ನು ಚೆನ್ನಾಗಿಯೇ ಇಟ್ಟು ಕೊಂಡಿದ್ದಾರೆ. ರಾಜಕೀಯ ಚತುರತೆ, ಜ್ಞಾನ ಇರುವ ದೇವೆಗೌಡರಿಗೆ ಯಾವ ಕ್ಷೇತ್ರ ನೀಡಬೇಕೆಂದು ಇಲ್ಲಿಯವರೆಗೂ ಸಾಕಷ್ಟು ಗೊಂದಲಗಳು ಇದ್ದವು. ಸದ್ಯ ದೊಡ್ಡ ಗೌಡರು ಈ ಬಾರಿ ಚುನಾವಣೆಗೆ ನಿಲ್ಲೋದು ಖಚಿತವಾಗಿದೆ. ತಮ್ಮ ಅಖಾಡ ಯಾವುದೆಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ದೋಸ್ತಿಗಳ ಸೀಟು ಫೈಟ್'ನಲ್ಲಿ ಕೊನೆಗೂ ಜೆಡಿಎಸ್'ಗೆ ಜಯ ಸಿಕ್ಕಿದೆ. ಅವರು ಕೇಳಿಕೊಂಡ ಕ್ಷೇತ್ರ ಬಿಟ್ಟು ಕೊಡಲು ಕಾಂಗ್ರೆಸ್ ಒಪ್ಪಿಗೆ ಸೂಚಿಸಿದೆ.ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಣಕ್ಕಿಳ್ಳಿಯುವ ಕ್ಷೇತ್ರ ಕೊನೆಗೂ ಫಿಕ್ಸ್ ಆಗಿದೆ.ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಹೆಚ್.ಡಿ.ದೇವೇಗೌಡರು ನಿರ್ಧರಿಸಿದ್ದಾರೆ. ತುಮಕೂರಿನಿಂದ ಸ್ಪರ್ಧಿಸಬೇಕೋ ಅಥವಾ ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಯಬೇಕೋ ಎಂಬ ಗೊಂದಲದಲ್ಲಿದ್ದ ಹೆಚ್.ಡಿ.ದೇವೇಗೌಡರು ಈಗ ತುಮಕೂರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಂದಹಾಗೇ ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳಲ್ಲಿ 3 ಜೆಡಿಎಸ್, 2 ಬಿಜೆಪಿ, 3 ಕಾಂಗ್ರೆಸ್ ಕ್ಷೇತ್ರಗಳಿದೆ.ದೋಸ್ತಿಗಳ ಲೆಕ್ಕಾಚರದಲ್ಲಿ ಹೆಚ್ ಡಿ ದೇವೇಗೌಡರನ್ನೇ ಈ ಬಾರಿ ಸ್ಪರ್ಧೆಗಿಳಿಸಲು ನಿರ್ಧರಿಸಲಾಗಿದೆ. ನಿನ್ನೆಯಷ್ಟೇ ರಾಹುಲ್'ಗಾಂಧಿ ಅವರು ದೋಸ್ತಿ ಸರ್ಕಾರದಲ್ಲಿ ಅಪಸ್ವರ ಮೂಡದಂತೇ ಕಾಪಾಡಿಕೊಳ್ಳಿ. ಅವರ ವಿರೋಧ ಕಟ್ಟಿಕೊಳ್ಳ ಬೇಡಿ, ಚರ್ಚೆ-ವಾಗ್ವಾದ ಮಾಡಬೇಡಿ. ಪಕ್ಷದ ನಾಯಕರಿಗೆ ಅಸಮಾಧಾನವಾದರೇ ನೀವೆ ಅವರನ್ನು ನಿಭಾಯಿಸಿ ಎಂದು ಜವಬ್ದಾರಿಯೊಂದನ್ನು ಮಾಜಿ ಮುಖ್ಯಮಂತ್ರಿ ಹೆಗಲಿಗೆ ವಹಿಸಿ ಹೋಗಿದ್ದರು.
Comments