ಕ್ಯಾಂಪೇನ್ ಶುರುವಿನಲ್ಲಿಯೇ ಸುಮಲತಾ ಬಗ್ಗೆ ಮಾತನಾಡಿದ ನಿಖಿಲ್ ಕುಮಾರ'ಸ್ವಾಮಿ...!!!

ಲೋಕಸಭೆ ಚುನಾವಣೆಯಿಂದಾಗಿ ಎಲ್ಲರ ಹಾರ್ಟ್ ಬೀಟ್ ಜಾಸ್ತಿಯಾಗುತ್ತಿದೆ. ಮಂಡ್ಯ ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಲೆಕ್ಕಚಾರ sಸೃಷ್ಟಿಯಾಗುತ್ತಿದೆ. ಯಾರ ಪರ ಒಲವು, ಯಾರ ವಿರುದ್ಧ ಎಂಬ ಅಂಕಿ ಅಂಶ ಸಂಗ್ರಹಿಸೋದು ಕಷ್ಟವಾಗುತ್ತಿದೆ. ಚುನಾವಣ ದಿನಾಂಕ ಘೋಷಣೆಯಾಗುತ್ತಿದ್ದಂತೇ ಇತ್ತ ಸ್ಪರ್ಧಿಗಳು ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ರಾಜ್ಯ ರಾಜಕಿಯ ರಂಗೇರುತ್ತಿದೆ. ಸುಮಲತಾ ಕೂಡ ಗುಡಿ ಗೋಪುರಗಳು ಅಂತಾ ಹೋಗುತ್ತಿದ್ದರೇ, ಇತ್ತ ಕುಮಾರ ಸ್ವಾಮಿ ಫ್ಯಾಮಿಲಿ ಕೂಡ ಭರ್ಜರಿಯಾಗಿಯೇ ದೇವರ ಕಾರ್ಯ ಮಾಡುತ್ತಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು ಶಾರದಾಂಬೆ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ್ದಾರೆ. ಎಲ್ಲಾ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ನಾನು ಪೂಜೆ ಸಲ್ಲಿಸುತ್ತಿದ್ದೇನೆ. ಚುನಾವಣೆಯಲ್ಲಿ ಅವರಿಗೆ ಒಳ್ಳೆಯದಾಗಲೀ. ನಮ್ಮ ಅಧ್ಯಕ್ಷರು ಬಿ ಫಾರಂ ನೀಡಿದ್ದಾರೆ. ದೇವರು ನಮ್ಮೆಲ್ಲರಿಗೂ ಒಳ್ಳೇದು ಮಾಡಲೀ ಅಂತಾ ಕೇಳಿ ಕೊಂಡಿದ್ದೇನೆ ಎಂದು ನಿಖೀಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ.ನಾಮಪತ್ರವನ್ನು ಶಾರದಾಂಬೆಯ ಸನ್ನಿಧಿಯಲ್ಲಿಟ್ಟು ಪೂಜೆ ಮಾಡಲಾಗಿದೆ ಎಂದರು. ಸುದ್ದಿಗಾರರು ಮಂಡ್ಯ ಕ್ಷೇತ್ರದಿಂದ ನಿಮ್ಮ ವಿರುದ್ಧ ಸುಮಲತಾ ಅವರು ಸ್ಪರ್ಧಿಸುತ್ತಿದ್ದಾರೆ, ಈ ಹಿನ್ನಲೆಯಲ್ಲಿ ಅವರ ಬಗ್ಗೆ ಏನು ಹೇಳ್ತೀರಿ ಎಂದು ಕೇಳಿದಾಗ ಅವರಿಗೂ ಒಳ್ಳೆಯದಾಗಲೀ. ಮಂಡ್ಯದ ಜನತೆಗೆ ಕುಮಾರ’ಸ್ವಾಮಿ ಯಾರೆಂದು ಗೊತ್ತಿದೆ. ನಿನ್ನೆ ಮೊನ್ನೆ ಬಂದವರಲ್ಲಾ ಕುಮಾರ ಸ್ವಾಮಿ . ಅಪ್ಪನಿಗೆ ಮಂಡ್ಯ ಜನತೆ ಮೇಲೆ ಅಗಾಧವಾದ ಪ್ರೀತಿ ಗೌರವ ವಿದೆ.ಮಂಡ್ಯ ಜನತೆಯ ಜೊತೆಗಿನ ನಮ್ಮ ತಂದೆಯ ಬಾಂಧವ್ಯ ಜನತೆಗೆ ಗೊತ್ತಿದೆ. ಮಂಡ್ಯ ಜನರ ಪ್ರೀತಿ ಉಳಿಸಿಕೊಳ್ಳಲು ನಾನು ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ ಅಂತ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಹೇಳಿದ್ರು. ಕ್ಯಾಂಪೇನ್ ಆರಂಭ ಮಾಡಬೇಕಿದೆ. ಅದಕ್ಕಾಗಿಯೇ ಮೊದಲು ಆಶೀರ್ವಾದ ತೆಗೆದುಕೊಳ್ಳಲು ಬಂದಿದ್ದೇನೆ ಎಂದರು.
Comments